ಬಳ್ಳಾರಿಯ ಕೌಲ್ ಬಜಾರ್‌ನ ನಿವಾಸಿಯಾದ ಮಹಿಳೆ, ಇಂಡಿಯನ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು, ಅದಕ್ಕೆ ಮೊಬೈಲ್ ನಂಬರ್ ಮತ್ತು ಫೋನ್ ಪೇ ಲಿಂಕ್ ಮಾಡಿಕೊಂಡಿದ್ದಾರೆ. ಇತ್ತೀಚೆಗೆ, ಅವರ ಟೆಲಿಗ್ರಾಂ ಖಾತೆಗೆ, ‘ವಿ-2023- ಗ್ಲೋಬಲ್ ಹೈ ಸ್ಯಾಲರಿ ಗ್ರೂಪ್’ ಮೂಲಕ ವರ್ಕ್ ಫ್ರಂ ಹೋಮ್‌ನ ಕೆಲಸದ ಬಗ್ಗೆ ಆಸೆ ತೋರಿಸಲಾಗಿದೆ. ‘ಟಾಸ್ಕ್ ಕೊಡುತ್ತೇವೆ ನೀವು ಹಣ ಹಾಕಿ ಟಾಸ್ಕ್ ಮುಗಿಸಿದರೆ, ನಿಮ್ಮ ಖಾತೆಗೆ ನೀವು ಜಮಾ ಮಾಡಿದ ಹಣಕ್ಕೆ ಶೇ30 ರಷ್ಟು ಕಮಿಷನ್ ಹಣ ಜಮಾ ಮಾಡುತ್ತೇವೆ’ ಎಂದು ಆನ್‌ಲೈನ್ ವಂಚಕರು ನಂಬಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.