ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನಹೊಸಹಳ್ಳಿ | ಬುದ್ದಿವಾದ ಹೇಳೆದಕ್ಕೆ ಯುವಕ ಆತ್ಮಹತ್ಯೆ

Published 1 ಮೇ 2024, 15:50 IST
Last Updated 1 ಮೇ 2024, 15:50 IST
ಅಕ್ಷರ ಗಾತ್ರ

ಕಾನಹೊಸಹಳ್ಳಿ: ಮದ್ಯಪಾನ ಮಾಡಬೇಡ ಎಂದು ಬುದ್ದಿವಾದ ಹೇಳಿದಕ್ಕೆ ಬೇಸರ ಮಾಡಿಕೊಂಡು ಯುವಕನೊಬ್ಬ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಜುಟ್ಟಲಿಂಗನಹಟ್ಟಿಲ್ಲಿ ಮಂಗಳವಾರ ನಡೆದಿದೆ.

ಜುಟ್ಟಲಿಂಗನಹಟ್ಟಿಯ ಯುವರಾಜ(19) ಮೃತಪಟ್ಟವರು. ಮದ್ಯಪಾನ ಮಾಡಬೇಡ ಎಂದು ತಂದೆ ಬುದ್ಧಿ ಮಾತು ಹೇಳಿದ್ದು, ಬೇಸರಗೊಂಡ ಯುವರಾಜ ತಮ್ಮ ಬಾಳೆತೋಟದಲ್ಲಿ ಮದ್ಯದ ಜತೆ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಮ್ಮ ಚಿಕ್ಕಮ್ಮನಿಗೆ ಫೋನ್ ಮಾಡಿ ಕೀಟನಾಶಕ ಸೇವಿಸಿದ್ದಾಗಿ ಹೇಳಿದ್ದು, ಕೂಡಲೇ ಮನೆಯವರು ಹುಡುಕಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡೆಸಿದ್ದಾರೆ. ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT