ಸುಡುಗಾಡು ಸಿದ್ದರ ಬಯಲು ಬದುಕು: ಹರಿದ ಸೀರೆ, ಟಾರ್ಪಲಿನ್ ಹೊದಿಕೆಯೇ ವಸತಿ..
ನಾಗರಿಕ ಸವಲತ್ತುಗಳಲ್ಲಿದೇ ಕನಿಷ್ಠ ಜೀವನ
ಎರ್ರಿಸ್ವಾಮಿ ಬಿ.
Published : 23 ಜನವರಿ 2026, 1:57 IST
Last Updated : 23 ಜನವರಿ 2026, 1:57 IST
ಫಾಲೋ ಮಾಡಿ
Comments
ಐವತ್ತು ವರ್ಷಗಳಿಂದ ಚೋರುನೂರು ಗ್ರಾಮದಲ್ಲೇ ನೆಲೆಸಿದ್ದೇವೆ. ಸರ್ಕಾರ ನಮಗೆ ಇಲ್ಲಿಯವರೆಗೂ ವಾಸಕ್ಕಾಗಿ ಯಾವುದೇ ಸೂರು ಕಲ್ಪಿಸಿಲ್ಲ. ಗ್ರಾಮದಲ್ಲಿ ಹಲವರಿಗೆ ನಿವೇಶನ ವಸತಿ ನೀಡಲಾಗಿದೆ. ನಾವು ಅಧಿಕಾರಿ ಜನಪ್ರತಿನಿಧಿಗಳ ಕಣ್ಣಿಗೆ ಕಾಣುತ್ತಿಲ್ಲವೇ ನಮಗೆ ಎಲ್ಲರಂತೆ ಸಮಾನವಾಗಿ ಬದುಕುವ ಹಕ್ಕು ಇಲ್ಲವೇ? ಸರ್ಕಾರ ನಮ್ಮತ್ತ ನೋಡಬೇಕು.
ಗಂಗಜ್ಜ ಸಮುದಾಯದ ಮುಖಂಡ
ಸುಡುಗಾಡು ಸಿದ್ದರ ಸಮುದಾದ ನಿವೇಶನ ವಸತಿಗಾಗಿ ಈಗಾಗಲೇ ಸರ್ಕಾರದಿಂದ ಒಂದು ಎಕರೆ ಜಮೀನನ್ನು ನಿಗದಿ ಮಾಡಲಾಗಿದೆ. ಅಲ್ಲಿ ವಸತಿ ನಿರ್ಮಾಣ ಸೇರಿದಂತೆ ಇತರೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಬಳಿ ಚರ್ಚಿಸಲಾಗುವುದು.