ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಡಾರ ವಿರುದ್ಧ ಜಾಗೃತಿ ಅಗತ್ಯ

7ರಿಂದ ಜಿಲ್ಲಾಮಟ್ಟದ ಲಸಿಕಾ ಅಭಿಯಾನ, ಸರ್ಕಾರ– ಖಾಸಗಿ ಸಹಯೋಗ; ಜಿ.ಪಂ. ಸಿಇಓ ಸಲಹೆ
Last Updated 3 ಫೆಬ್ರುವರಿ 2017, 6:52 IST
ಅಕ್ಷರ ಗಾತ್ರ

ಬಳ್ಳಾರಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಲಯನ್ಸ್‌ ಕ್ಲಬ್‌ ಇಂಟರ್ ನ್ಯಾಷನಲ್ ವತಿಯಿಂದ ಫೆ. 7ರಿಂದ 28ರವರೆಗೆ ನಡೆಯಲಿರುವ ದಡಾರ ಕಾಯಿಲೆ ವಿರುದ್ಧದ ಲಸಿಕಾ ಅಭಿಯಾನದ ಕುರಿತು ಜಿಲ್ಲೆಯ ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಪಂಚಾ ಯಿತಿ ಸಿಇಓ ಕೆ.ವಿ.ರಾಜೇಂದ್ರ ಅಧಿಕಾರಿ ಗಳಿಗೆ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಆರಂಭಕ್ಕೂ ಮೊದಲು ಅಭಿ ಯಾನಕ್ಕೆ ಬೆಂಬಲ ನೀಡುವ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ಗೈರು ಹಾಜರಿ ಕುರಿತು ಕೆಂಡಾಮಂಡಲರಾದ ಅವರು, ಮೊಬೈಲ್‌ ಮೂಲಕ ಕರೆ ಮಾಡಿ ಡಿಡಿಪಿಐಗೆ ಕರೆಮಾಡಿ, ಸಮಿತಿ ಸಭೆಯ ಕುರಿತಾದ ಮಾಹಿತಿ ಇದೆಯಾ ಎಂದು ಪ್ರಶ್ನಿಸಿದರು. ಕೂಡಲೇ ನಗರ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಸಭೆಗೆ ಕಳುಹಿಸಲು ಸೂಚಿಸಿದರು.

ಅಭಿಯಾನದ ಪ್ರಮುಖ ರೂವಾರಿ ಸಾರ್ವಜನಿಕ ಶಿಕ್ಷಣ ಇಲಾಖೆಯವರು. ಅವರಿಗೆ ಮಾಹಿತಿ ನೀಡದಿರುವ ಕುರಿತು ಉಪನಿರ್ದೇಶಕರು ತಿಳಿಸಿದ ಮೇರೆಗೆ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಅವರನ್ನು ತರಾಟೆಗೆ ತೆಗೆದುಕೊಂಡರು. ಶಿಕ್ಷಣ ಇಲಾಖೆ ಉಪನಿರ್ದೇಶಕರ ಬದ ಲಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಥವಾ ಸಿಆರ್‌ಪಿ, ಬಿಆರ್‌ಪಿಗಳನ್ನಾದರೂ ಸಭೆಯಲ್ಲಿ ಕಡ್ಡಾಯವಾಗಿ ಹಾಜರಿರು ವಂತೆ ನೋಡಿಕೊಳ್ಳಬೇಕಿತ್ತು ಎಂದರು.

ಪ್ರದರ್ಶನ: ಈ ಮೊದಲು ದಡಾರ ಕಾಯಿಲೆಯ ಗುಣಲಕ್ಷಣ, ಹರಡುವಿಕೆ, ಆ ಕಾಯಿಲೆ ನಿರ್ಮೂಲನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿ ರುವ ನಿರ್ಧಾರ, ಲಸಿಕಾ ಅಭಿಯಾನ, ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ಘಟಕ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ವಿವಿಧ ಸಂಘ– ಸಂಸ್ಥೆಗಳ ಪಾತ್ರದ ಕುರಿತು ವಿಡಿಯೊ ತುಣುಕು ಪ್ರದರ್ಶಿಸಲಾಯಿತು.

ಕಾಯಿಲೆ ಲಕ್ಷಣ: ಒಂಬತ್ತರಿಂದ ಹದಿ ನೈದು ವರ್ಷದೊಳಗಿನ ಮಕ್ಕಳಲ್ಲಿ ದಡಾರ ಕಾಯಿಲೆ ಕಂಡು ಬರುತ್ತದೆ. ನ್ಯುಮೋನಿಯಾ, ಅತಿಸಾರ ಭೇದಿ, ಮಾನ ಸಿಕ ಅಸ್ವಸ್ಥತೆ, ಅಂಧತ್ವ, ಕಿವುಡತನ, ಹೃದಯಸಂಬಂಧಿ ತೊಂದರೆ ಹೀಗೆ ಬಹುವಿಧ ಕಾಯಿಲೆ ಲಕ್ಷಣಗಳನ್ನು ಈ  ರೋಗ ಒಳಗೊಂಡಿರುತ್ತದೆ. ಹೀಗಾಗಿ, ಈ ಕಾಯಿಲೆ ಕುರಿತು ವ್ಯಾಪಕ ಜಾಗೃತಿ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮಹತ್ವದ ಪಾತ್ರ ವಹಿಸಬೇಕು ಎಂದು ಸಿಇಓ ರಾಜೇಂದ್ರ ತಿಳಿಸಿದರು.

ಸಭೆ ಇಂದು: ಜಾಗೃತಿ ಅಭಿಯಾನಕ್ಕೆ ಕೈಗೊಂಡಿರುವ ಕ್ರಮಗಳೇನು ಎಂದು ಕೆಲಹೊತ್ತಿನ ಬಳಿಕ ಸಭೆಗೆ ಹಾಜರಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ವೃಷಭೇಂದ್ರಯ್ಯ ಅವರನ್ನು ರಾಜೇಂದ್ರ ಪ್ರಶ್ನಿಸಿದರು.

‘ಈ ಸಂಬಂಧ ಶುಕ್ರವಾರದಂದು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮುಖ್ಯ ಶಿಕ್ಷಕರ ಸಭೆ ಕರೆಯಲಾಗಿದೆ. ಈ ಕಾಯಿಲೆ ಕುರಿತಾದ ಕರಪತ್ರ, ಭಿತ್ತಿಪತ್ರ ಸೇರಿ ಇತರೆ ಪರಿಕರಗಳನ್ನು ಸಭೆಯಲ್ಲಿ ನೀಡಲಾಗುವುದು. ಹಾಗೂ ಕಾಯಿಲೆ ವಿರುದ್ಧ ಲಸಿಕಾ ಅಭಿಯಾನಕ್ಕೆ ಸಕಾ ರಾತ್ಮಕವಾಗಿ ಸ್ಪಂದಿಸುವಂತೆ ಈಗಾಗಲೇ ಮುಖ್ಯಶಿಕ್ಷಕರಿಗೆ ಸೂಚನೆ ನೀಡಲಾಗಿದೆ’ ಎಂದು ಬಿಇಓ ವೃಷಭೇಂದ್ರಯ್ಯ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT