ಹಗರಿಬೊಮ್ಮನಹಳ್ಳಿ: ಮಹಾತ್ಮಾ ಗಾಂಧೀಜಿ ಪ್ರತಿಪಾದಿಸಿದ್ದ ಅಹಿಂಸಾ ತತ್ವ ಪ್ರಪಂಚದ ಮನ್ನಣೆ ಪಡೆದಿದೆ. ಬಂದೂಕಿನ ಸ್ದ್ದದಿನ ಬದಲಾಗಿ ಅಹಿಂಸಾತ್ಮಕ ಹೋರಾಟದ ಶಾಂತಿ ಮಾರ್ಗ ಹೆಚ್ಚು ಪರಿಣಾಮಕಾರಿ ಎಂದು ಗಾಂಧಿವಾದ ಸಾಬೀತುಪಡಿಸಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟುಗನ ಹಳ್ಳಿ ಕೊಟ್ರೇಶ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಚಿಂತ್ರಪಳ್ಳಿ ಗ್ರಾಮ ಸಮೀಪದ ಸಂಸದ ಅನಿಲ್‌ಲಾಡ್ ಅವರ ತೋಟದ ಮನೆಯಲ್ಲಿ ಭಾನುವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಗಾಂಧಿ ಜಯಂತಿ ಸಮಾರಂಭದಲ್ಲಿ ಮಹಾತ್ಮಾ ಗಾಂಧಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಗಾಂಧಿಯವರ ಅಹಿಂಸಾ ತತ್ವಗಳು, ಉಪವಾಸ ಸತ್ಯಾಗ್ರಹದಂದಹ ಮೌನ ಪ್ರತಿಭಟನೆಗಳು ಭಾರತ ಸೇರಿದಂತೆ ಇಡೀ ವಿಶ್ವದ ಜನ ಮಾನಸದಿಂದ ಅಳಿಸಿ ಹೋಗದಷ್ಟು ಪರಿಣಾಮಕಾರಿಯಾಗಿ ಬೇರು ಬಿಟ್ಟಿವೆ.

ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯ ಮತ್ತು ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿನ ನಿರಂಕುಶ ಆಡಳಿತ ಪದಚ್ಯುತಗೊಳಿಸಲು ಗಾಂಧಿ ಪ್ರಣೀತ ಅಹಿಂಸಾ ಹೋರಾಟಗಳು ಅಲ್ಲಿನ ಜನರಿಗೆ ನೆರವಾಗಿವೆ ಎಂದು ವಿವರಿಸಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅಕ್ಕಿ ತೋಟೇಶ್, ಕೆ.ಪಿ.ಸಿ.ಸಿ.ಸದಸ್ಯ ಎಸ್. ಕೃಷ್ಣಾ ನಾಯ್ಕ, ಎಪಿಎಂಸಿ ನಿರ್ದೇಶಕ ಅಂಬಾಡಿ ನಾಗರಾಜ್, ಮುಖಂಡ ಹೆಗ್ಡಾಳು ರಾಮಣ್ಣ, ಹೊಸಪೇಟೆ ತಾ.ಪಂ.ಸದಸ್ಯ ಸೋಮಪ್ಪ, ಡಾ.ಶಿವಕುಮಾರ್ ಬೆಲ್ಲದ್ ಮಾತನಾಡಿದರು.

ಜಿಲ್ಲಾ ಯುವ ಘಟಕದ ಎಚ್.ಜಿ. ಗುರುದತ್ತ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಎಚ್.ಎ.ಕೊಟ್ರೇಶ್, ಡಿಸಿಸಿ ಸದಸ್ಯ ಬುಡೇನ್‌ಸಾಬ್, ಬೋವಿ ಸಣ್ಣ ಹುಲುಗಪ್ಪ, ರಮೇಶ್, ಶಾಂತಪ್ಪ, ಗ್ರಾ.ಪಂ.ಸದಸ್ಯ ಹನಮಜ್ಜ, ಕುರುಬರ ವೆಂಕಟೇಶ್, ಪೂರ‌್ಯಾ ನಾಯ್ಕ, ಎಚ್. ಆಂಜನೇಯ, ಚನ್ನಬಸವನಗೌಡ, ಮಾಲವಿ ಚನ್ನಬಸಪ್ಪ, ಯುವ ಘಟಕದ ತಟ್ಟಿ ರಾಘವೇಂದ್ರ, ಸೋಗಿ ಕೊಟ್ರೇಶ್, ಶಬ್ಬೀರ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.