ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಬಸ್‌ಗಳು ವಶಕ್ಕೆ, ಪರಿಶೀಲನೆ

ಸಾರಿಗೆ ಇಲಾಖೆ ಅಧಿಕಾರಿಗಳು ದಾಳಿ
Last Updated 29 ಜುಲೈ 2016, 9:01 IST
ಅಕ್ಷರ ಗಾತ್ರ

ದೇವನಹಳ್ಳಿ:  ರಾಷ್ಟ್ರೀಯ ಹೆದ್ದಾರಿ 7 ರ ಸಾದಹಳ್ಳಿ ನವಯುಗ ಟೋಲ್‌ ಗೇಟ್‌ ಬಳಿ ದಾಳಿ ನಡೆಸಿದ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಅಖಿಲ ಭಾರತ ಪ್ರವಾಸಿ  10 ಪ್ರಯಾಣ ಬಸ್‌ಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದರು.

ಈ ಕುರಿತು ಮಾತನಾಡಿದ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಟಿ.ತಿಮ್ಮರಾಯಪ್ಪ ಅಖಿಲ ಭಾರತ ಪ್ರವಾಸಿ ಬಸ್‌ಗಳು ಹೈದರಾಬಾದ್‌ ಮತ್ತು ತೆಲಂಗಾಣ ರಾಜ್ಯದಿಂದ ಬೆಂಗಳೂರಿಗೆ ಸಂಚರಿಸುವ ಸಂದರ್ಭದಲ್ಲಿ ವಾಣಿಜ್ಯ ಸರಕು ಅಥವಾ ಸ್ಫೋಟಕ ವಸ್ತುಗಳು ಮತ್ತು ಕಾನೂನುಬಾಹಿರವಾಗಿ ಸರಕುಗಳಿಗೆ ಸಂಬಂಧಿಸಿದಂತೆ ವಾಣಿಜ್ಯ ತೆರಿಗೆಯ ಜಾಗೃತದಳದ ಅಧಿಕಾರಿಗಳೊಂದಿಗೆ ತಪಾಸಣೆ ನಡೆಸಲಾಗುತ್ತಿದೆ.

55 ಬಸ್‌ ತಪಾಸಣೆ ನಡೆಸಿ 10 ಬಸ್‌ಗಳಲ್ಲಿ ಅನುಮಾನಾಸ್ಪದವಾಗಿ ಸರಕು ತುಂಬಿರುವುದು ಕಂಡುಬಂದಿರುವ ಎಸ್‌ಆರ್‌ಎಸ್‌, ಎಸ್‌ಎಲ್‌ಟಿ ಮತ್ತು ತೆಲಂಗಾಣ ರಾಜ್ಯದ ಎರಡು ಸರ್ಕಾರಿ ಸಾರ್ವಜನಿಕರ ಸೇವೆ ಹೈಟೆಕ್‌ ಬಸ್‌ಗಳು ಸೇರಿವೆ, ಕಾನೂನು ಬಾಹಿರ ವಿವಿಧ ರೀತಿಯ ಸರಕು ಮತ್ತು ತೆರಿಗೆ ವಂಚಿಸಿ ಸಾಗಾಣಿಕೆ ಮಾಡುವ ಸಂದರ್ಭಗಳಿರುತ್ತವೆ, ಹೀಗಾಗಿ ವಾಣಿಜ್ಯ ಇಲಾಖೆ ಅಧಿಕಾರಿ ಉಮಾದೇವಿ ಮತ್ತು ತೀರ್ಥಲಿಂಗಪ್ಪ ಹಿರಿಯ ಮೋಟಾರು ವಾಹನ ನಿರೀಕ್ಷಕ ನರಸಿಂಹಮೂರ್ತಿ ಇತರೆ ಸಿಬ್ಬಂದಿಯೊಂದಿಗೆ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT