ವಿಜಯಪುರ:ಪಟ್ಟಣದ ಪ್ರಗತಿ ಆಂಗ್ಲ ಶಾಲಾ ಆವರಣದಲ್ಲಿ ಗುರುವಾರ ಸದ್ಭಾವನಾ ದಿನ ಆಚರಿಸಲಾಯಿತು. ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಮುಖ್ಯಶಿಕ್ಷಕ ಜೆ.ಎನ್. ಪ್ರಕಾಶ್ ಮಾತನಾಡಿ, ಸೌಹಾರ್ದತೆ, ಸದ್ಭಾವನೆ ಇತ್ಯಾದಿಗಳೆಲ್ಲಾ ಈಗಿನ ದಿನಕ್ಕೆ ಅತಿ ಅಗತ್ಯವಾಗಿದೆ. ಜಾತಿ, ಧರ್ಮ, ಭಾಷೆ, ಪ್ರಾದೇಶಿಕತೆ ಹೆಸರಿನಲ್ಲಿ ಒಡೆದು ಹೋಗುತ್ತಿರುವ ದೇಶಕ್ಕೆ ಏಕತೆ ತಂದು ಕೊಡುವುದೇ ಈ ಸೌಹಾರ್ದತೆ ಮತ್ತು ಸದ್ಭಾವನೆಯ ಮೂಲ ಉದ್ದೇಶವಾಗಿದೆ ಎಂದರು.

ದೇಶದ ಪ್ರತಿಯೊಬ್ಬ ಪ್ರಜೆಯು ಈ ಗುಣವನ್ನು ತನ್ನಲ್ಲಿ ಅಳವಡಿಸಿಕೊಂಡರೆ ಭಾರತ ವಿಶ್ವದಲ್ಲಿಯೇ ಪ್ರಬಲ ರಾಷ್ಟ್ರವಾಗುವುದರಲ್ಲಿ ಅನುಮಾನವಿಲ್ಲ ಎಂದು ತಿಳಿಸಿದರು.

ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನವೂ ಹೌದು. ತಮ್ಮ ಆಡಳಿತಾವಧಿಯಲ್ಲಿ ರಾಷ್ಟ್ರೀಯ ಸೌಹಾರ್ದತೆಗೆ ಶ್ರಮಿಸಿದ ಅವರಿಗೆ ಗೌರವ ನೀಡುವ ಸಲುವಾಗಿ ಅವರ ಜನ್ಮದಿನವನ್ನು ರಾಷ್ಟ್ರೀಯ ಸದ್ಭಾವನಾ ದಿನವನ್ನಾಗಿ ಆಚರಿಸಲು ಆಗಿನ ಕಾಂಗ್ರೆಸ್ ಸರ್ಕಾರ ನಿರ್ಧರಿಸಿತ್ತು. ಈ ಆಚರಣೆ ಈಗಲೂ ಮುಂದುವರಿದಿದೆ ಎಂದರು.

ಈ ದಿನ ವಿವಿಧೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಕೆಲವು ಸಂಘ–ಸಂಸ್ಥೆಗಳು, ಜನರು ಗಿಡಗಳನ್ನು ನೆಡುವ ಮೂಲಕವೂ ಈ ದಿನವನ್ನು ಆಚರಿಸುತ್ತಾರೆ ಎಂದರು.

ಶಿಕ್ಷಕಿಯರಾದ ಮಮತಾ ಜಿ.ಇ., ಶ್ರಾವಣಿ ಎಂ., ಉಷಾ ಜಿ. ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.