ಆನೇಕಲ್: ತಾಲ್ಲೂಕಿನ ಅತ್ತಿಬೆಲೆಯಲ್ಲಿ ಧರ್ಮರಾಯಸ್ವಾಮಿ ದ್ರೌಪತಮ್ಮ ದೇವಿಯ ಹೂವಿನ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ಅತ್ತಿಬೆಲೆಯ ಧರ್ಮರಾಯಸ್ವಾಮಿ ದೇವಾಲಯದಲ್ಲಿ 91ನೇ ವರ್ಷದ ಕರಗ ಮಹೋತ್ಸವವನ್ನು ಆಚರಿಸಲಾಯಿತು. ಕರಗ ಹೊತ್ತ ಆರ್.ನಾಗೇಶ್ ಅವರು ಅತ್ತಿಬೆಲೆಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ದೇವಾಲಯದ ಮುಂಭಾಗದಲ್ಲಿ ಹಾಕಲಾಗಿದ್ದ ಅಗ್ನಿಕೊಂಡವನ್ನು ಪ್ರವೇಶಿಸಿತು. ಮನೆ ಮನೆಗಳ ಬಳಿ ಕರಗವನ್ನು ಮಲ್ಲಿಗೆ ಹೂವುಗಳನ್ನು ಹಾಕುವ ಮೂಲಕ ಸ್ವಾಗತಿಸಲಾಯಿತು.

ತಮಟೆ ಮತ್ತು ಡೋಲಿನ ತಾಳಕ್ಕೆ ತಕ್ಕಂತೆ ಕರಗವು ಹೆಜ್ಜೆ ಹಾಕಿತು. ಕರಗ ಸೇವಾ ಸಮಿತಿ ಮತ್ತು ಪಟಾಲಮ್ಮ ದೇವಿ ಸೇವಾ ಸಮಿತಿ, ಅಣ್ಣಮ್ಮ ದೇವಿ ಸೇವಾ ಸಮಿತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಮರಿಯಪ್ಪ ತಂಡದವರು ಕರಗಕ್ಕೆ ತಕ್ಕಂತೆ ತಮಟೆಯ ವಾದನ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.