ಟೇಕ್ವಾಂಡೊ ವಿಶ್ವ ಚಾಂಪಿಯನ್‌ಷಿಪ್‌: ಬಿ.ಕೆ.ಕಿಶೋರ್‌ಗೆ ಪ್ರಶಸ್ತಿ

7

ಟೇಕ್ವಾಂಡೊ ವಿಶ್ವ ಚಾಂಪಿಯನ್‌ಷಿಪ್‌: ಬಿ.ಕೆ.ಕಿಶೋರ್‌ಗೆ ಪ್ರಶಸ್ತಿ

Published:
Updated:
Deccan Herald

ದೇವನಹಳ್ಳಿ: ರಷ್ಯಾದ ಬೆಲಾರಸ್‌ನಲ್ಲಿ ನಡೆದ ಜೂನಿಯರ್‌ ಆ್ಯಂಡ್‌ ವೆಟರನ್‌ ಟೇಕ್ವಾಂಡೊ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಬಿ.ಕೆ. ಕಿಶೋರ್‌ ಕಂಚಿನ ಪದಕ ಗೆದ್ದಿದ್ದಾರೆ.

16 ರಿಂದ 17 ವರ್ಷದೊಳಗಿನವರ ವಿಭಾಗದ 52 ಕೆ.ಜಿ ಸ್ಪರ್ಧೆಯಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿದೆ.

ಸೋಮವಾರ ಪ್ರವಾಸಿ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ‘ಆ.19 ರಿಂದ 27 ರವರೆಗೆ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯದಿಂದ 11 ಮಂದಿ ಭಾಗವಹಿಸಿದ್ದರು. ಇದರಲ್ಲಿ ಚಿನ್ನ ಗೆಲ್ಲುವ ಕನಸು ಹೊಂದಿದ್ದೆ. ಆರಂಭದಲ್ಲಿ ಕಜಕಸ್ತಾನ, ಅರ್ಜೆಂಟೀನಾ ಮತ್ತು ದಕ್ಷಿಣ ಕೊರಿಯಾದ ಸ್ಪರ್ಧಿಗಳ ವಿರುದ್ಧ ಪ್ರಬಲ ಪೈಪೋಟಿ ನಡೆಸಿ ಗೆದ್ದೆ. ಅಂತಿಮ ಸುತ್ತಿನಲ್ಲಿ ರಷ್ಯಾದ ಆಟಗಾರನ ವಿರುದ್ಧ ಸೋತೆ. ಹೀಗಾಗಿ ಕಂಚಿನ ಪದಕಕ್ಕೆ ತೃಪ್ತಿ ಪಡಬೇಕಾಯಿತು’ ಎಂದರು.

‘ರಾಷ್ಟ್ರಮಟ್ಟದಲ್ಲಿ  5 ಚಿನ್ನ, 5 ಬೆಳ್ಳಿ ಸೇರಿ ಹಲವು ಪದಕಗಳನ್ನು ಗೆದ್ದಿದ್ದೇನೆ. ಮುಂದಿನ ವರ್ಷ ನಡೆಯುವ ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಭಾಗವಹಿಸಿ ಚಿನ್ನದ ಸಾಧನೆ ಮಾಡುವ ಗುರಿ ಇದೆ. ಇದಕ್ಕಾಗಿ ಕಠಿಣ ತರಬೇತಿ ಪಡೆಯುತ್ತಿದ್ದೇನೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !