ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವನಹಳ್ಳಿಯಲ್ಲಿ ಬಕ್ರೀದ್‌ ಸಂಭ್ರಮ

Published 17 ಜೂನ್ 2024, 14:17 IST
Last Updated 17 ಜೂನ್ 2024, 14:17 IST
ಅಕ್ಷರ ಗಾತ್ರ

ದೇವನಹಳ್ಳಿ: ತಾಲ್ಲೂಕಿನ ವಿವಿಧೆಡೆ ಮುಸ್ಲಿಂ ಬಾಂಧವರಿಂದ ತ್ಯಾಗ ಬಲಿದಾನದ ಸಂಕೇತವಾದ ಈದ್–ಉಲ್‌–ಅದಾ ಹಬ್ಬವನ್ನು ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು.

ಬೊಮ್ಮವಾರದ ಅರಣ್ಯದಲ್ಲಿರುವ ಐತಿಹಾಸಿಕ ಜಾಮೀಯ ಮಸೀದಿ ಅಹಲೇ ಅದೀಸ್‌ ಸುನ್ನೀ ಮಸೀದಿಯ ಜಮಾಯತ್‌ನವರು ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ನೂರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು, ಜಮಾಯತ್‌ನವರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಪ್ರಾರ್ಥನೆಯಲ್ಲಿ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು.

ಬೆಳಗ್ಗೆ 8.30ಕ್ಕೆ ಮಸೀದಿಯಿಂದ ಜಮಾಯತ್‌ ಹೊರಟು ಈದ್ಗಾ ಮೈದಾನಕ್ಕೆ ಕಾಲ್ನಡಿಗೆಯಲ್ಲಿಯೇ ‘ಅಲ್ಲಾಹು ಅಕ್ಬರ್‌’ ಘೋಷನೆ ಕೂಗುತ್ತಾ ತೆರಳಿದರು. ನಂತರ ಪ್ರಾರ್ಥನೆ ಸಲ್ಲಿಸಿದರು. ಮಕ್ಕಳು ಹಬ್ಬದ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.

ಜಾಮೀಯ ಮಸೀದಿ ಅಧ್ಯಕ್ಷ ಅಬ್ದುಲ್‌ ಖುದ್ದೂಸ್‌ ಪಾಷ, ಕಾರ್ಯದರ್ಶಿ ಎ..ಎಸ್‌.ಇಬ್ರಾಹಿಂ, ಶಫೀ ಅಹಮದ್, ಬೆಳ್ಳುಳ್ಳಿ ಬಾಬು, ಮಸೀದಿಯ ಪಂಡಿತ ಅಬ್ದುಲ್‌ ಜರ್ಬ್ಬಾ, ಸಾಹಿತಿ ಬಿಟ್ಟಸಂದ್ರ ಗುರುಸಿದ್ಧಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT