ಶುಕ್ರವಾರ, ಜುಲೈ 1, 2022
21 °C
ಎಚ್‌ಆರ್‌ಎ ವ್ಯತ್ಯಾಸ ನೆ‍ಪದಿಂದ ಅಧಿಕಾರಿಗಳ ಹಿಂದೇಟು l ರೈತರ ಅಲೆದಾಟ

ಬೆಸ್ಕಾಂ ಕಚೇರಿ ಸ್ಥಳಾಂತರಕ್ಕೆ ಅಡ್ಡಿ

ವಡ್ಡನಹಳ್ಳಿ ಭೋಜ್ಯಾನಾಯ್ಕ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಬೇಕಾಗಿದ್ದ ಬೆಸ್ಕಾಂ ಅಧೀಕ್ಷಕರ ಆಡಳಿತ ಕಚೇರಿ ಸ್ಥಳಾಂತರಕ್ಕೆ ಅಧಿಕಾರಿ
ಗಳೇ ಅಡ್ಡಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಮೊದಲು ಬೆಸ್ಕಾಂ ವಿಭಾಗೀಯ ಕಚೇರಿ ಬೆಂಗಳೂರು ಅನಂದ್ ರಾವ್ ವೃತ್ತದ ಕಚೇರಿಯಲ್ಲೇ ಕಾರ್ಯನಿರ್ವಹಿಸುತ್ತಿತ್ತು. 2013-14ನೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಪ್ರತ್ಯೇಕ
ವಾಗಿ ಅಸ್ತಿತ್ವಕ್ಕೆ ಬಂದ ನಂತರ ಕೆಂಗೇರಿ ಬಳಿ ಅಧೀಕ್ಷಕರ ಕಚೇರಿ ಸ್ಥಳಾಂತರಗೊಂಡಿತು. 

ನಗರದ ಹೊರವಲಯದ ಇರುವ ಕಚೇರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ರೈತರು ಅಲೆದಾಡಬೇಕಿದೆ. ಬೆಂಗಳೂರು ನಗರದ ಉತ್ತರಕ್ಕಿರುವ ಗ್ರಾಮಾಂತರ ಜಿಲ್ಲೆಯಿಂದ ಬೆಂಗಳೂರು ದಕ್ಷಿಣದಲ್ಲಿರುವ ಅಧೀಕ್ಷಕರ ಕಚೇರಿಗೆ ಹೋಗ
ಬೇಕೆಂದರೆ ಕನಿಷ್ಠ 75 ಕಿ.ಮೀ ಪ್ರಯಾಣಿಸಬೇಕಿದೆ. ಪ್ರಯಾಣ ದರ, ಸಮಯ, ಸಂಚಾರದ ಕಿರಿಕಿರಿ ಅಧಿಕಾರಿಗಳಿಗೆ ಅರ್ಥವಾಗುವುದಿಲ್ಲ ಎನ್ನುತ್ತಾರೆ ರೈತರಾದ ಸುಧಾಕರ್, ರಾಮಣ್ಣ, ಜನೀವಾರ ಸಿದ್ಧಪ್ಪ.

ದೇವನಹಳ್ಳಿ, ದೊಡ್ಡಬಳ್ಳಾಪುರ ಮತ್ತು ಹೊಸಕೋಟೆ ಬೆಂಗಳೂರು ನಗರಕ್ಕೆ ಹೊಂದಿಕೊಂಡಿವೆ. ಒಂದು ವಿದ್ಯುತ್ ಪರಿವರ್ತಕ ಸುಟ್ಟು ಹೋದರೆ ಹೊಸಕೋಟೆ ಬೆಸ್ಕಾಂ ಉಪವಿಭಾಗಕ್ಕೆ ಹೋಗಬೇಕು. ಸರ್ಕಾರ 48 ತಾಸುಗಳಲ್ಲಿ ವಿದ್ಯುತ್ ಪರಿವರ್ತಕ ರೈತರಿಗೆ ಉಚಿತವಾಗಿ ವಿತರಿಸುವುದಾಗಿ ಹೇಳಿದ್ದರೂ ಇಡೀ ರಾಜ್ಯದಲ್ಲಿ ವಿದ್ಯುತ್ ಇಲಾಖೆ ಉಚಿತವಾಗಿ ವಿದ್ಯುತ್ ಪರಿ
ವರ್ತಕ, ನೂತನ ವಿದ್ಯುತ್ ಕಂಬ ಸಂಬಂಧಿಸಿದ ಪರಿಕರ ಪಡೆಯಲು ಅಧಿಕಾರಿಗಳ ಕಿಸೆ ತುಂಬಿಸಬೇಕು ಎನ್ನು
ತ್ತಾರೆ ಗುತ್ತಿಗೆದಾರ ಸುಧಾಕರ್.

ನೂತನ ವಿದ್ಯುತ್ ಮಾರ್ಗಕ್ಕೆ ಅನುಮತಿ ಪಡೆಯಲು ದೇವನಹಳ್ಳಿ ಬೆಸ್ಕಾಂ ಕಚೇರಿಗೆ ಇಲಾಖೆ ನಿಯಮದಂತೆ ₹5ಲಕ್ಷ, ಹೊಸಕೋಟೆ ಉಪಕೇಂದ್ರ ಕಚೇರಿ ವ್ಯಾಪ್ತಿಗೆ ₹10ಲಕ್ಷ ಅದಕ್ಕಿಂತ ಹೆಚ್ಚು ವೆಚ್ಚದ ಕಾಮಗಾರಿಗಾಗಿ ರೈತರು ಕೆಂಗೇರಿ ಬೆಸ್ಕಾಂ ಅಧೀಕ್ಷಕರ ಕಚೇರಿಗೆ ಹೋಗಬೇಕು. ಒಂದೆರಡು ದಿನದಲ್ಲಿ ಆಗುವ ಕೆಲಸವಲ್ಲ. ತಿಂಗಳಾನುಗಟ್ಟಲೆ ಅಲೆಯಬೇಕು ಎನ್ನುತ್ತಾರೆ ರೈತ ಕೆ.ಹೊಸೂರಿನ
ಮುನಿನಂಜಪ್ಪ.

ಬೆಸ್ಕಾಂ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗೆ ವೇತನದಲ್ಲಿ ಕೊರತೆ ಇಲ್ಲ. ಕೆಂಗೇರಿ ಮಹಾ
ನಗರ ಪಾಲಿಕೆ ವ್ಯಾಪ್ತಿಯಲ್ಲಿರುವುದರಿಂದ ಎಚ್.ಆರ್.ಎ ಹೆಚ್ಚಿಗೆ ಸಿಗಲಿದೆ. ಕಚೇರಿ ದೇವನಹಳ್ಳಿಗೆ ಸ್ಥಳಾಂತರಗೊಂಡರೆ ಎಚ್‌ಆರ್‌ಎ ವ್ಯತ್ಯಾಸ
ವಾಗಲಿದೆ. ಆ ಕಾರಣದಿಂದ ಅಧಿಕಾರಿ
ಗಳೇ ಇದಕ್ಕೆ ಅಡ್ಡಗಾಲು ಹಾಕಿ
ದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಈ ಸಂಬಂಧ ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಹಳೇ ಕಚೇರಿ ಕಟ್ಟಡ ನೆಲಸಮ ಮಾಡಿ ಕಾಮಗಾರಿ ಆರಂಭಿಸಬೇಕಾಗಿದೆ  ಎನ್ನುತ್ತಾರೆ ಬೆಸ್ಕಾಂ ಎಂಜಿನಿಯರ್ ಶ್ರೀನಿವಾಸ್.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು