ಮಳೆಗಾಗಿ ದೀಪೋತ್ಸವ, ವಿಶೇಷ ಪೂಜೆ

7

ಮಳೆಗಾಗಿ ದೀಪೋತ್ಸವ, ವಿಶೇಷ ಪೂಜೆ

Published:
Updated:
Deccan Herald

ವಿಜಯಪುರ: ಮಳೆಗಾಗಿ ಪ್ರಾರ್ಥಿಸಿ, ದೇವರನ್ನು ಸಂಪ್ರೀತಗೊಳಿಸಿದರೆ ಕಾಲಕ್ಕೆ ಸರಿಯಾಗಿ ಮಳೆಯಾಗಿ ಬೆಳೆಗಳು ಉತ್ತಮವಾಗಿ ಆಗುತ್ತವೆ. ಈ ನಂಬಿಕೆಯಿಂದ ನಲ್ಲೂರು ಗ್ರಾಮದ ಮಹಿಳೆಯರು ಶನಿವಾರ ವಿಶೇಷ ಪೂಜೆ ಮಾಡುವುದರ ಜೊತೆಗೆ ದೀಪಗಳನ್ನು ಬೆಳಗಿದರು.

ನಲ್ಲೂರು ಗ್ರಾಮದೇವತೆ ಗಂಗಾದೇವಿಯ ಉತ್ಸವ ಮೂರ್ತಿಯನ್ನು ಆಷಾಢ ಮಾಸದಲ್ಲಿ ಗ್ರಾಮಕ್ಕೆ ತಂದು ಮೆರವಣಿಗೆ ಮಾಡಿದರು. ದೇವರಿಗೆ ಪ್ರತ್ಯೇಕ ಎಡೆಯನ್ನಿಟ್ಟು ಪೂಜಿಸಿ ದೀಪಗಳನ್ನು ಬೆಳಗಿ ತಮಟೆ ವಾದನಗಳೊಂದಿಗೆ ಊರಿನ ಸರಹದ್ದಿಗೆ ತೆರಳಿ ಎಡೆಗಳನ್ನು ಇಟ್ಟು ಭಕ್ತಿಯಿಂದ ಪೂಜಿಸಿ ವಾಪಸ್‌ ಆದರು.

‘ಪ್ರತಿ ವರ್ಷ ಈ ಸಂಪ್ರದಾಯ ಆಚರಿಸುತ್ತಿದ್ದೇವೆ. ಇಂತಹ ಆಚರಣೆ ಮಾಡಿದಾಗಲೆಲ್ಲ ಉತ್ತಮ ಮಳೆಯಾಗುತ್ತದೆ ಎನ್ನುವ ನಂಬಿಕೆಯಿದೆ. ಈಗಲೂ ಈ ಪದ್ಧತಿಯನ್ನು ಅನುಸರಿಸಿಕೊಂಡು ಬರುತ್ತಿದ್ದೇವೆ’ ಎಂದು ಸ್ಥಳೀಯರಾದ ವೆಂಕಟೇಶ್, ಮಂಜುನಾಥ್ ಹೇಳಿದರು.

‘ಇಂತಹ ಸಂಪ್ರದಾಯ ಮಾಡುವುದರಿಂದ ಯುವಜನರಿಗೆ ನಮ್ಮ ಆಚರಣೆಗಳು, ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗುವುದರ ಜೊತೆಗೆ ಎಲ್ಲರಲ್ಲೂ ಏಕತೆ ಮೂಡುತ್ತದೆ’ ಎಂದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !