ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಬಲ್‌, ಟ್ರಾನ್ಸ್‌ಫಾರ್ಮರ್‌ ಒಡೆದು ತಾಮ್ರ ದೋಚಿದರು

Last Updated 14 ಅಕ್ಟೋಬರ್ 2018, 14:07 IST
ಅಕ್ಷರ ಗಾತ್ರ

ದೇವನಹಳ್ಳಿ: ಎರಡು ಕಡೆ ಕೊಳವೆಬಾವಿ ಪಂಪ್‌ಗೆ ಅಳವಡಿಸಲಾದ ಕೇಬಲ್‌ ಮತ್ತು ಟ್ರಾನ್ಸ್‌ಫಾರ್ಮರ್‌ ಒಡೆದು ತಾಮ್ರದ ತಂತಿ ಕಳ್ಳತನ ಮಾಡಲಾಗಿದೆ.

ವಿಶ್ವನಾಥ ಪೊಲೀಸ್‌ ಠಾಣೆ ವ್ಯಾಪ್ತಿಯ ಕೊಯಿರಾ ಗ್ರಾಮದ ರೈತ ಚಿಕ್ಕೇಗೌಡ ಕೊಳವೆಬಾವಿಯ 80 ಅಡಿ, ರವಿಕುಮಾರ್‌ ಎಂಬುವವರ 100 ಅಡಿ ಮತ್ತು ಆನಂದ್‌ ಎಂಬುವರ 150 ಅಡಿ ಕೇಬಲ್‌ ವೈರ್‌ಗಳನ್ನು ಕಳ್ಳರು ದೋಚಿದ್ದಾರೆ.

ಮತ್ತೊಂದು ಪ್ರಕರಣ ಚನ್ನಹಳ್ಳಿ ಗ್ರಾಮದ ಪುಟ್ಟಮ್ಮ ಎಂಬುವವರ ಸರ್ವೇ ನಂ 72 ರ ಜಮೀನಿನಲ್ಲಿ ಬೆಸ್ಕಾಂ ವತಿಯಿಂದ ರೈತರಿಗಾಗಿ ಅಳವಡಿಸಲಾಗಿದ್ದ 25 ಕೆ.ವಿ ವಿದ್ಯುತ್‌ ಪರಿವರ್ತಕವನ್ನು ಧ್ವಂಸಗೊಳಿರುವ ಕಳ್ಳರು ತಾಮ್ರದ ತಂತಿಗಳನ್ನು ದೋಚಿದ್ದಾರೆ. ತಾಮ್ರದ ತಂತಿಯ ಮೌಲ್ಯ ದುಪ್ಪಟ್ಟು ಇದೆ. ಪ್ರತಿ ಮೀಟರ್‌ ಕೇಬಲ್‌ ಗೆ ಮಾರುಕಟ್ಟೆ ಮೌಲ್ಯ ₹180 ಇದೆ ಎಂಬುದಾಗಿ ದೂರುದಾರರು ತಿಳಿಸಿದ್ದಾರೆ.

ಒಂದು ಬಾರಿ ಕೇಬಲ್‌ ಕಳ್ಳತನವಾದರೆ ಕೊಳವೆಬಾವಿಯಿಂದ ಪಂಪ್‌ ಮೋಟಾರ್‌ ಮೇಲಕ್ಕೆತ್ತಿ ಮತ್ತೆ ಕೇಬಲ್‌ ಜೋಡಣೆ ಮಾಡಿ ಬಿಡಬೇಕಾದರೆ 10 ಸಾವಿರ ಖರ್ಚಾಗುತ್ತದೆ. ರೈತರು ಈ ಕೇಬಲ್‌ ಕಳ್ಳತನದಿಂದ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಪೊಲೀಸರು ಕಳ್ಳರನ್ನು ಬಂಧಿಸಬೇಕು. ಬೀಟ್‌ ವ್ಯವಸ್ಥೆ ಬಿಗಿಗೊಳಿಸಬೇಕು ಎಂದು ದೂರುದಾರರು ಒತ್ತಾಯಿಸಿದ್ದಾರೆ. ಪೋಲೀಸ್‌ ಠಾಣೆಗೆ ದೂರು ನೀಡಲಾಗಿದ್ದು, ಇನ್ನೂ ಪ್ರಕರಣ ದಾಖಲೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT