ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ | ಪ್ರತ್ಯೇಕ ಅಪಘಾತ: ವ್ಯಕ್ತಿ ಸಾವು, ಐವರಿಗೆ ಗಾಯ

Published 1 ಮೇ 2024, 13:28 IST
Last Updated 1 ಮೇ 2024, 13:28 IST
ಅಕ್ಷರ ಗಾತ್ರ

ಚಿಂತಾಮಣಿ: ನಗರ ಮತ್ತು ನಗರದ ಹೊರವಲಯದಲ್ಲಿ ಮಂಗಳವಾರ ರಾತ್ರಿ ನಡೆದ ಮೂರು ಪ್ರತ್ಯೇಕ ಅಪಘಾತಗಳಲ್ಲಿ ಒಬ್ಬರು ಮೃತಪಟ್ಟು ಐವರು ಗಾಯಗೊಂಡಿದ್ದಾರೆ.

ನಗರದ ಚೇಳೂರು ರಸ್ತೆಯಲ್ಲಿ ಲಾರಿಗೆ ದ್ವಿಚಕ್ರವಾಹನ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಾಲ್ಲೂಕಿನ ಸಿಂಗಸಂದ್ರ ಗ್ರಾಮದ ಸುಧಾಕರ್(24) ಮೃತರು.

ಸುಧಾಕರ್‌ ಮಂಗಳವಾರ ಸಂಜೆ ಮನೆಗೆ ಅಗತ್ಯ ಸಾಮಗ್ರಿ ತರಲು ಚಿಂತಾಮಣಿಗೆ ದ್ವಿಚಕ್ರವಾಹನದಲ್ಲಿ ಹೋಗಿದ್ದರು. ಸಾಮಗ್ರಿ ಖರೀದಿಸಿ ಹಿಂತಿರುಗಿವ ವೇಳೆ ಅವಘಡ ನಡೆದಿದೆ.

‘ದ್ವಿಚಕ್ರವಾನದ ಮುಂದೆ ಹೋಗುತ್ತಿದ್ದ ಲಾರಿ ಚಾಲಕ ಹಿಂದಿನಿಂದ ಬರುತ್ತಿದ್ದ ವಾಹನಗಳಿಗೆ ಮುನ್ಸೂಚನೆ ನೀಡದೆ ಚಾಲನೆ ಮಾಡಿದ್ದರಿಂದ ಹಿಂದೆ ಬರುತ್ತಿದ್ದ ಸುಧಾಕರ್ ದ್ವಿಚಕ್ರವಾನ ಲಾರಿಯ ಚಕ್ರಕ್ಕೆ ತಗುಲಿ, ಸವಾರ ಕೆಳಗೆ ಬಿದ್ದು ತಲೆಗೆ ತೀವ್ರ ಗಾಯವಾಗಿದೆ ಸಾರ್ವಜನಿಕರು ಕೂಡಲೇ ಆಂಬುಲೆನ್ಸ್‌ನಲ್ಲಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು.’

‘ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸುಧಾಕರ್‌ ಮೃತಪಟ್ಟಿದ್ದಾರೆ. ಈ ಸಾವಿಗೆ ಲಾರಿ ಚಾಲಕ ಕಾರಣ’ ಎಂದು ಮೃತರ ಸಹಯೋದರ ಎಸ್.ದಿವಾಕರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬೈಕ್ ಅಪಘಾತ: ರಾಷ್ಟ್ರೀಯ ಹೆದ್ದಾರಿ–234ರಲ್ಲಿ ಚಿಂತಾಮಣಿ-ಶ್ರೀನಿವಾಸಪುರ ರಸ್ತೆಯ ಗೋಪಸಂದ್ರದ ಬಳಿ ಸಂಚರಿಸುತ್ತಿದ್ದ ದ್ವಿಚಕ್ರವಾಹನ ಸವಾರನ ಹಿಡಿತ ತಪ್ಪಿ ರಸ್ತೆ ಬದಿಗೆ ಬಿದ್ದು ಇಬ್ಬರು ಗಾಯಗೊಂಡಿದ್ದಾರೆ.  ಶಿಡ್ಲಘಟ್ಟ ನಗರದ ಶರೀಫ್ ಮತ್ತು ಪೈರೋಜ್ ಗಾಯಗೊಂಡವರು.

ಶಿಡ್ಲಘಟ್ಟದಿಂದ ಚಿಂತಾಮಣಿ ಮಾರ್ಗವಾಗಿ ಆಂಧ್ರಪ್ರದೇಶದ ಮದನಪಲ್ಲಿಗೆ ಹೋಗುವ ವೇಳೆ ಅಪಘಾತ ನಡೆದಿದೆ.

ಆಟೊ ಜಖಂ: ಚಿಂತಾಮಣಿ-ಬೆಂಗಳೂರು ರಸ್ತೆಯ ಕಟಮಾಚನಹಳ್ಳಿ ಬಳಿ ಆಟೊವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಬಿದ್ದು ಆಟೊ ಜಖಂಗೊಂಡಿದೆ. ಆಟೊದಲ್ಲಿದ್ದ ಚಾಲಕ‌, ಆತನ ಪತ್ನಿ ಮತ್ತು ಮಗಳಿಗೆ ಗಾಯವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT