ಶುಕ್ರವಾರ, ಫೆಬ್ರವರಿ 28, 2020
19 °C

ಹೊನ್ನಗನಹಳ್ಳಿ ಸಹಕಾರ ಸಂಘ ಸ್ಥಾನಗಳಿಗೆ ತೀವ್ರ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ಇಲ್ಲಿನ ಸಾತನೂರು ಹೋಬಳಿ ಹೊನ್ನಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯು ಫೆ.7 ರಂದು ನಡೆಯಲಿದೆ. ಹೆಚ್ಚು ಸ್ಪರ್ಧಿಗಳಿದ್ದು ಚುನಾವಣೆ ಕಣ ರಂಗೇರಿದೆ.

ಸಂಘಕ್ಕೆ 12 ನಿರ್ದೇಶಕರ ಆಯ್ಕೆ ಮಾಡಬೇಕಿದ್ದು ಅದರಲ್ಲಿ ಪರಿಶಿಷ್ಟ ಪಂಗಡದ ಅಭ್ಯರ್ಥಿ ಇಲ್ಲದೆ 11 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಸಾಲಗಾರರ ಒಂದು ಕ್ಷೇತ್ರಕ್ಕೆ 2 ಅಭ್ಯರ್ಥಿಗಳಿದ್ದಾರೆ. ಸಾಮಾನ್ಯ 5 ಸ್ಥಾನಕ್ಕೆ 11 ಮಂದಿ, 2 ಮಹಿಳಾ ಮೀಸಲು ಕ್ಷೇತ್ರಕ್ಕೆ 5 ಮಂದಿ, 2 ಪರಿಶಿಷ್ಟ ಜಾತಿಗೆ 4 ಅಭ್ಯರ್ಥಿಗಳು. 2 ಹಿಂದುಳಿದ ಎ ವರ್ಗಕ್ಕೆ 4 ಅಭ್ಯರ್ಥಿಗಳು. 11 ಸ್ಥಾನಗಳಿಗೆ 24 ಮಂದಿ ಕಣದಲ್ಲಿದ್ದಾರೆ.

ಚುನಾವಣೆಯನ್ನು ವೈಯಕ್ತಿಕವಾಗಿ ತೆಗೆದುಕೊಂಡಿರುವ ಎರಡು ತಂಡದವರು ಅಭ್ಯರ್ಥಿಗಳ ಗೆಲುವಿಗೆ ವಿಶೇಷ ಪ್ರಯತ್ನ ನಡೆಸಿದ್ದು ಕೊನೆಯ ಕ್ಷಣದವರೆಗೂ ತಮ್ಮ ತಂಡದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ.

ಸಾಲಗಾರಲ್ಲದ ಕ್ಷೇತ್ರದಲ್ಲಿ 156, ಸಾಲಗಾರರ ಕ್ಷೇತ್ರದಲ್ಲಿ 1,076 ಮತದಾರರಿದ್ದಾರೆ. ಚುನಾವಣೆಯು ತೀವ್ರ ಜಿದ್ದಾಜಿದ್ದಿಯಾಗಿರುವುದರಿಂದ ಹೆಚ್ಚಿನ ಭದ್ರತೆಯಲ್ಲಿ ಫೆ.7 ರಂದು ಹೊನ್ನಗನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಚುನಾವಣೆ ನಡೆಯುತ್ತಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)