ಶುಕ್ರವಾರ, ಏಪ್ರಿಲ್ 16, 2021
20 °C
ನಾಳೆ ಜಿಲ್ಲೆ, ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ರಾಜ್ಯ ರೈತ ಸಂಘದ ವತಿಯಿಂದ ಜುಲೈ 15 ರಂದು ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಆಗ್ರಹಿಸಿ ಬೆಳಿಗ್ಗೆ 11 ಗಂಟೆಗೆ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲ್ಲೂಕು ಘಟಕದ ನೂತನ ಅಧ್ಯಕ್ಷ ಕಾಡನೂರುಪಾಳ್ಯ ಹನುಮೇಗೌಡ ತಿಳಿಸಿದರು.

ರಾಜ್ಯದಲ್ಲಿ ಬರಗಾಲದಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಗಾರು ಮಳೆ ಕೈ ಕೊಟ್ಟಿದ್ದು ರೈತರು ಬಿತ್ತನೆ ಮಾಡದೆ ಮುಗಿಲಿನತ್ತ ನೋಡುತ್ತ ಕಾದು ಕುಳಿತುಕೊಳ್ಳುವಂತಾಗಿದೆ ಎಂದು ಹೇಳಿದರು.

ರೈತ ಸಂಘದ ಹಿರಿಯ ಮುಖಂಡರಾದ ಕೆ. ಸುಲೋಚನಮ್ಮ ವೆಂಕಟರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಗರದಲ್ಲಿ ನಡೆದ ತಾಲ್ಲೂಕು ಸಮಿತಿ ಸಭೆಯಲ್ಲಿ ರೈತ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಹನುಮೇಗೌಡ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಮರಿಯಣ್ಣ (ಗೌರವ ಅಧ್ಯಕ್ಷ), ಸಿದ್ದಲಿಂಗಪ್ಪ (ಉಪಾಧ್ಯಕ್ಷ), ಆರ್‌.ಎಸ್‌.ಸತೀಶ್‌ ( ಪ್ರಧಾನ ಕಾರ್ಯದರ್ಶಿ), ಶಿವರಾಜ್‌ (ಕಾರ್ಯದರ್ಶಿ), ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಉಮಾದೇವಿ, ತೂಬಗೆರೆ ಹೋಬಳಿ ಘಟಕದ ಅಧ್ಯಕ್ಷ ಮುನಿರಾಯಣಪ್ಪ, ಕಾರ್ಯದರ್ಶಿ ರಾಮು, ದೊಡ್ಡಬೆಳವಂಗಲ ಹೋಬಳಿ ಘಟಕದ ಅಧ್ಯಕ್ಷ ಮುರುಳಿ, ಕಾರ್ಯದರ್ಶಿ ರೋಹಿತ್‌, ಕಸಬಾ ಹೋಬಳಿ ಅಧ್ಯಕ್ಷ ಮಹದೇವ್‌, ಕಾರ್ಯದರ್ಶಿ ಯಲ್ಲಪ್ಪ, ಸಾಸಲು ಹೋಬಳಿ ಅಧ್ಯಕ್ಷ ಶಿವಪ್ಪ, ಕಾರ್ಯದರ್ಶಿ ರವಿ ನೇಮಕವಾಗಿದ್ದಾರೆ.

ರೈತ ಸಂಘದ ಮುಖಂಡರಾದ ಮುತ್ತೇಗೌಡ, ಶಿರವಾರ ರವಿ, ಪ್ರಸನ್ನ, ನಾರಾಯಣಸ್ವಾಮಿ, ವಾಸು, ಹೊನ್ನಾಘಟ್ಟ ರವಿ, ವಸಂತ್‌ ಕುಮಾರ್‌, ಹರೀಶ್‌, ಮಲ್ಲೇಶ್‌, ಪ್ರಸಾದ್‌, ಕಾಂತರಾಜ್‌, ಧನಂಜಯ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು