ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಪಾವತಿಯಿಂದ ಗ್ರಾಮಾಭಿವೃದ್ಧಿ

ಅಣ್ಣೇಶ್ವರ ಪಂಚಾಯಿತಿಯಲ್ಲಿ ಜಮಾ ಬಂದಿ ಕಾರ್ಯಕ್ರಮ
Published 20 ಮಾರ್ಚ್ 2024, 14:57 IST
Last Updated 20 ಮಾರ್ಚ್ 2024, 14:57 IST
ಅಕ್ಷರ ಗಾತ್ರ

ದೇವನಹಳ್ಳಿ: ಮನೆ, ನಿವೇಶನದ ಕಂದಾಯವನ್ನು ಕಡ್ಡಾಯವಾಗಿ ಪಾವತಿಸಬೇಕು. ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಟಿ.ಕೆ.ರಮೇಶ್ ತಿಳಿಸಿದರು.

ತಾಲ್ಲೂಕಿನ ಕಸಬಾ ಹೋಬಳಿಯ ಅಣ್ಣೇಶ್ವರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಇತ್ತೀಚೆಗೆ ಜಮಾ ಬಂದಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮಗಳು ಸರ್ವತಮುಖ ಅಭಿವೃದ್ಧಿ ಹೊಂದಬೇಕು. ಪ್ರತಿ ವರ್ಷವೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಗಿರುವ ಖರ್ಚು ವೆಚ್ಚಗಳು ಕಾಮಗಾರಿಗಳು ಸೇರಿದಂತೆ ವಿವಿಧ ಯೋಜನೆಗಳ ಸಂಬಂಧಪಟ್ಟಂತೆ ಜಮಾ ಬಂದಿ ಕಾರ್ಯಕ್ರಮ ಮಾಡಲಾಗುತ್ತದೆ ಎಂದರು.

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಗ್ರಾಮಗಳಲ್ಲಿ ಮಾಡಿಕೊಳ್ಳಬಹುದು. ಪ್ರತಿಯೊಬ್ಬರೂ ಜಮಾಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಗ್ರಾಮಗಳ ಸಮತೋಮುಖ ಅಭಿವೃದ್ಧಿಗೆ ನಮ್ಮ ಉದ್ದೇಶ ಆಗಬೇಕು ಎಂದರು.

ಅಣ್ಣೇಶ್ವರ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬರುವುದರಿಂದ ಹೆಚ್ಚಿನ ತೆರಿಗೆ ಅನುದಾನ ಬರುತ್ತದೆ. ಇದನ್ನು ಸದುಪಯೋಗಪ ಪಡಿಸಿಕೊಳ್ಳಬೃಕು. ಬೇಸಿಗೆ ಇರುವುದರಿಂದ ನೀರಿನ ಸಮಸ್ಯೆ ಬರದಂತೆ ಹೆಚ್ಚಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಪಿಡಿಒ ಗಂಗರಾಜು ಮಾತನಾಡಿ, ಜಮಾ ಬಂದಿ ಕಾರ್ಯದಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದು, ಗ್ರಾಮದ ಅಭಿವೃದ್ಧಿ ಹಾಗೂ ಕುಡಿಯುವ ನೀರಿನ ಸೌಕರ್ಯ ಸೇರಿದಂತೆ, ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದು ತಿಳಿಸಿದರು.

ಅಣ್ಣೇಶ್ವರ ಗ್ರಾ.ಪಂ. ಅಧ್ಯಕ್ಷೆ ಉಮಾ ಮುನಿರಾಜು, ಉಪಾಧ್ಯಕ್ಷ ಮುನಿರಾಜಪ್ಪ, ಗ್ರಾಮ ಪಂಚಾಯತಿ ಸದಸ್ಯರಾದ ಎ .ಚಂದ್ರಶೇಖರ್, ರಾಜಣ್ಣ, ಗೋಪಾಲ್, ಮುಕುಂದ,ಮಂಜುಳಾ ವೆಂಕಟೇಶ್, ರುಕ್ಮಿಣಿಮ್ಮ, ವೇಣುಗೋಪಾಲ್, ಬಿ.ಕೆ.ಮುನಿಯಪ್ಪ, ನಳಿನಾ ಮುನಿರಾಜು, ಲಕ್ಷ್ಮಿ ಮುರುಳಿ, ವಾಣಿಶ್ರೀ ವಿನೋದ್, ಶಿಲ್ಪ ಅಶೋಕ್, ಪ್ರಭಾವತಿ, ಜಯಮ್ಮಮುನಿ ರಾಜು, ಮಂಜುನಾಥ್, ಮುನಿ ಲಕ್ಷ್ಮಮ್ಮ, ವೆಂಕಟೇಶ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕೃಷ್ಣಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT