ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬದ ಖರೀದಿ ಜೋರು

Last Updated 14 ಜನವರಿ 2021, 3:16 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಸಂಕ್ರಾಂತಿ ಆಚರಣೆಯಲ್ಲಿ ಯಾವುದೇ ಆತಂಕ ಇಲ್ಲದೆ ಜನರು ಮಾರುಕಟ್ಟೆಯಲ್ಲಿ ಸಂಭ್ರಮ ಕಂಡುಬಂತು. ದಿನೇ ದಿನೇ ಕೃಷಿಯಿಂದ ವಿಮುಖವಾಗುತ್ತಿರುವ ಇಂದಿನ ದಿನಗಳಲ್ಲಿ ಹಿಂದಿನ ಸಂಭ್ರಮಾಚರಣೆ ಇಲ್ಲದಿದ್ದರೂ, ಹಬ್ಬದ ಆಚರಣೆಗೆ ಸಿದ್ದತೆಗಳು ಮಾತ್ರ ನಡೆಯುತ್ತಿವೆ. ತಾಲ್ಲೂಕಿನಲ್ಲಿ ಈ ಬಾರಿ ವಾಡಿಕೆ ಮಳೆ ಆಗಿದೆ. ಆದರೆ ಅಗತ್ಯ ಧಾನ್ಯಗಳ, ಹೂ ಹಣ್ಣುಗಳ ಗಗನಕ್ಕೇರಿರುವ ಬೆಲೆಗಳ ನಡುವೆ ಸಂಕ್ರಾಂತಿ ಹಬ್ಬ ನಡೆಯುತ್ತಿದೆ.

ಕೆ.ಜಿ ಕಡಲೇಕಾಯಿ ₹80,ಎಳ್ಳು ಬೆಲ್ಲ ಕೆಜಿಗೆ ₹160, ಗೆಣಸು ₹35, ಕಬ್ಬು ಒಂದು ಜಳವೆಗೆ ₹50,ಅವರೇಕಾಯಿ ಕೆ.ಜಿಗೆ ₹60 ಇದ್ದು ಬೆಲೆಗಳು ಹಬ್ಬಕ್ಕಾಗಿ ಹೆಚ್ಚಿವೆ. ಬೆಲೆ ಏರಿಕೆಯ ನಡುವೆಯೇ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಕಬ್ಬು,ಗೆಣಸು,ಕಡಲೇಕಾಯಿಗಳ ಮಾರಾಟ ಭರದಿಂದ ಸಾಗಿತ್ತು.

ಸಂಕ್ರಾಂತಿ ಹಬ್ಬಕ್ಕೆ ಅಗತ್ಯವೆನಿಸಿದ ಅಕ್ಕಿ,ಬೇಳೆ,ಧಾನ್ಯಗಳ ಬೆಲೆಯೊಂದಿಗೆ ಹೂವು ಹಣ್ಣಿನ ಬೆಲೆಗಳು ಸಹ ಗಗನಕ್ಕೇರಿವೆ. ಕಾಕಡ ಕೆ.ಜಿಗೆ ₹500 ಕನಕಾಂಬರ ಕೆ.ಜಿಗೆ ₹1000 ಇದ್ದರೆ ಶಾವಂತಿಗೆ, ಗುಲಾಬಿ ಮೊದಲಾದ ಹೂವಿನ ಬೆಲೆಗಳು ₹200 ರವರೆಗೂ ಇವೆ. ತರಕಾರಿಗಳ ಬೆಲೆಗಳು ಸಾಧಾರಣವಾಗಿವೆ. ತಾಲ್ಲೂಕಿಗೆ ಕಬ್ಬು ತಮಿಳುನಾಡಿನಿಂದ, ನೆಲಗಡಲೆ ಆಂಧ್ರಪ್ರದೇಶದಿಂದ ತಂದು ಮಾರಾಟ ಮಾಡಲಾಗುತ್ತಿದೆ.

ವಿವಿಧೆಡೆ ಸಂಕ್ರಾಂತಿ ಆಚರಣೆ: ತೂಬಗೆರೆ ಹೋಬಳಿ ಹಿತರಕ್ಷಣಾ ಸಮಿತಿ ವತಿಯಿಂದ ಜ.14 ರಂದು ಬೆಳಿಗ್ಗೆ 10 ಗಂಟೆಗೆ ತೂಬಗೆರೆ ಗ್ರಾಮದ ತೇರಿನಬೀದಿಯಲ್ಲಿ ರಂಗೋಲಿ ಸ್ಪರ್ಧೆ ನಡೆಯಲಿವೆ.ರಾಸುಗಳ ಕಿಚ್ಚು ಹಾಯಿಸುವ ಸ್ಪರ್ಧೆಗಳು ಸಂಜೆ 6 ಗಂಟೆಗೆ ನಡೆಯಲಿವೆ. ವಿಶೇಷ ಆಹ್ವಾನಿತರಾಗಿ ಡಿವೈಎಸ್‌ಪಿ ಟಿ.ರಂಗಪ್ಪ ಭಾಗವಹಿಸಲಿದ್ದಾರೆ.

ತಾಲ್ಲೂಕಿನ ಲಕ್ಷ್ಮೀದೇವಿಪುರ ಗ್ರಾಮದ ಶ್ರೀವಿನಾಯಕ ಗೆಳೆಯರ ಬಳಗದ ವತಿಯಿಂದ ಜ.14 ರಂದು ಸಂಕ್ರಾಂತಿ ಸುಗ್ಗಿ ಗ್ರಾಮೀಣ ಹಬ್ಬ ಸಂಜೆ 4 ಗಂಟೆಗೆ ನಡೆಯಲಿದೆ. ರಾಸುಗಳ ಕಿಚ್ಚು ಹಾಯಿಸುವುದು, ಪಂಜು ಮತ್ತು ಭರಾಟೆ ಪ್ರದರ್ಶನ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸುವವರಿಗೆ ಗ್ರಾಮ ಪಂಚಾಯಿತಿ ಸದಸ್ಯರಿಂದ ಬಹುಮಾನ ವಿತರಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT