ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಅಹಿಂಸಾತ್ಮಕ ಹೋರಾಟಗಾರ– ಬಚ್ಚೇಗೌಡ

ಹೊಸಕೋಟೆಯಲ್ಲಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ
Last Updated 2 ಅಕ್ಟೋಬರ್ 2019, 13:55 IST
ಅಕ್ಷರ ಗಾತ್ರ

ಹೊಸಕೋಟೆ: ‘ನಾವು ನೀವು ಈದಿನ ಸ್ವತಂತ್ರವಾಗಿ ಸಂತೋಷವಾಗಿ ಜೇವನ ನಡೆಸಲು ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟವೇ ಕಾರಣ. ಅವರು ಪ್ರಪಂಚದ ಮೊದಲ ಅಹಿಂಸಾತ್ಮಕ ಹೋರಾಟಗಾರರೆಂದು ಸಂಸದ ಬಿ.ಎನ್.ಬಚ್ಚೇಗೌಡ ಅಭಿಪ್ರಾಯ ಪಟ್ಟರು.

ಅವರು ನಗರದಲ್ಲಿ ಬಿಜೆಪಿ ನೂಗಬಗಶ್ ಏರ್ಪಡಿಸಿದ್ದ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ದೇಶದಲ್ಲಿ ಮಹಾತ್ಮ, ರಾಷ್ಟ್ರಪಿತ, ಬಾಪು ಎಂದೆಲ್ಲ ಕರೆಸಿಕೊಳ್ಳುವ ಏಕೈಕ ವ್ಯಕ್ತಿ ಗಾಂಧೀಜಿ ಮಾತ್ರ. ಅವರ ನೆನಪಿನಲ್ಲಿ ವಿಶ್ವದಾದ್ಯಂತ ಈ ದಿನವನ್ನು ಅಹಿಂಸಾ ದಿನಾಚರಣೆಯನ್ನಾಗಿ ಆಚರಿಸುತ್ತಾರೆ ಎಂದರು.

‘ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ 10 ಲಕ್ಷ ಜನರ ಬಲಿದಾನವಾಗಿದೆ. ಲಾಲ್ ಬಹದ್ದೂರ್ ಶಾಸ್ತ್ರಿಯವರ ಸರಳ ಜೀವನ ನಮಗೆ ಮಾರ್ಗದರ್ಶನವಾಗಬೇಕು. ಅವರು ಜೀವನದಲ್ಲಿ ಹೋರಾಟಗಳನ್ನು ಮಾಡಿಕೊಂಡು ಮುಂದೆ ಬಂದವರು’ ಎಂದರು.

ಗಾಂಧೀಜಿಯವರ ಕನಸನ್ನು ನನಸುಮಾಡಲು ಇಂದಿನ ಪ್ರಧಾನಿ ಮೋದಿಯವರು ಶ್ರಮಿಸುತ್ತಿದ್ದಾರೆ. ಅವರ ಕನಸಿನ ಸ್ವಚ್ಛ ಭಾರತ ಬಯಲು ಶೌಚಮುಕ್ತ ಭಾರತಕ್ಕಾಗಿ ದೇಶದಾದ್ಯಂತ 9 ಕೋಟಿ ಶೌಚಾಲಯಗಳನ್ನು ಕೇಂದ್ರ ಸರ್ಕಾರ ಕಟ್ಟಿಸಿಕೊಟ್ಟಿದೆ ಎಂದು ತಿಳಿಸಿದರು.

ಪ್ರಪಂಚವೇ ಭಾರತದ ಕಡೆನೋಡುವ ಹಾಗೆ ಮೋದಿ ಕೆಲಸ ಮಾಡುತ್ತಿದ್ದಾರೆ. ಅಮೇರಿಕದಲ್ಲೂ ಅವರ ಭಾಷಣಕ್ಕೆ 50 ಸಾವಿರಕ್ಕೂ ಹೆಚ್ಚು ಜನ ಸೇರಿರುವುದು ವಿಶೇಷ ಎಂದರು.

ತಾಲ್ಲೂಕಿನ ರಾಜಕೀಯದ ಬಗ್ಗೆ ಮಾತನಾಡಿ, ‘ಕಾರ್ಯಕರ್ತರ, ಮತದಾರರ ಅಭಿಪ್ರಾಯಕ್ಕೆ ನಾವು ಬದ್ದರಾಗಿರುತ್ತೇವೆ. ಅವರು ತಿಳಿಸಿದಂತೆ ನಾವು ನಡೆಯುತ್ತೇವೆ. ಇದು ನನ್ನ ಕೊನೆಯ ಚುನಾವಣೆ ಇನ್ನು ಮುಂದೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ ನನ್ನ ಕೊನೆಯ ಉಸಿರಿನ ವರೆಗೆ ರಾಜಕೀಯದಲ್ಲಿ ಇರುವೆ’ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಯೋಜನೆಯಂತೆ ಲೋಕಸಭಾ ಸದಸ್ಯರ ಪಾದಯಾತ್ರೆಯನ್ನು 6ನೇ ತಾರೀಖಿನಂದು ಗೌರಿಬಿದನೂರಿನ ಬಳಿಯಿಂದ ಪ್ರಾರಂಭಿಸುವುದಾಗಿ ತಿಳಿಸಿದರು.

ಬಿಜೆಪಿ ತಾಲ್ಲೂಕು ಅಧ್ಯಕ್ಷ ಹುಲ್ಲೂರು ಮಂಜುನಾಥ್, ಕೋಡಿಹಳ್ಳಿ ಸೊಣ್ಣಪ್ಪ, ಜಿಲ್ಲಾ ಪಂಚಾಯತಿ ಹಿಂದಿನ ಅಧ್ಯಕ್ಷ ಮುನಿಯಪ್ಪ, ಬಿ.ಎಂ. ನಾರಾಯಣಸ್ವಾಮಿ, ಯುವಶಕ್ತಿ ಘಟಕದ ಮಂಜುನಾಥ್, ಡಿ.ಟಿ.ವೆಂಕಟೇಶ್, ಸುಬ್ಬರಾಜು, ಕೊರಳೂರು ಸುರೇಶ್, ವಸಂತಕುಮಾರ್, ಮುನಿನಂಜಪ್ಪ, ವಿಜಯಕುಮಾರ್, ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT