ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರೋಹಳ್ಳಿ: ಹೊಲಿಗೆ ಯಂತ್ರ ವಿತರಣೆ

Last Updated 23 ಜೂನ್ 2019, 16:02 IST
ಅಕ್ಷರ ಗಾತ್ರ

ಹಾರೋಹಳ್ಳಿ (ಕನಕಪುರ): ಹೊಲಿಗೆ ತರಬೇತಿ ಪಡೆದಿರುವ ಹಾಗೂ ಆರ್ಥಿಕ ಸಮಸ್ಯೆಯಲ್ಲಿರುವ ಮಹಿಳೆಯರನ್ನು ಗುರುತಿಸಿ ಉಚಿತವಾಗಿ ರೋಟರಿ ವತಿಯಿಂದ ಹೊಲಿಗೆ ಯಂತ್ರವನ್ನು ಕೊಡುತ್ತಿರುವುದಾಗಿ ಹಾರೋಹಳ್ಳಿ ರೋಟರಿ ಅಧ್ಯಕ್ಷ ಏಡಮಡು ಕಾಂತರಾಜು ತಿಳಿಸಿದರು.

ತಾಲ್ಲೂಕಿನ ಹಾರೋಹಳ್ಳಿ ಕೆನರಾ ಬ್ಯಾಂಕ್‍ ಗ್ರಾಮೀಣ ಮಹಿಳೆಯರ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಭಾನುವಾರ ರೋಟರಿ ವತಿಯಿಂದ ಹಮ್ಮಿಕೊಂಡಿದ್ದ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಬ್ಯಾಂಕ್‌ ತರಬೇತಿ ಸಂಸ್ಥೆಯು ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ. ಸಂಸ್ಥೆ ವತಿಯಿಂದ ಉಚಿತವಾಗಿ ಹಲವಾರು ರೀತಿಯ ಕೌಶಲ ತರಬೇತಿಯನ್ನು ಕೊಡುತ್ತಿದೆ. ಇದರಲ್ಲಿ ತರಬೇತಿ ಪಡೆಯುವ ಮಹಿಳೆಯರಲ್ಲಿ ಕೆಲವರಿಗೆ ಹೊಲಿಗೆ ಯಂತ್ರ ಕೊಳ್ಳುವ ಆರ್ಥಿಕ ಶಕ್ತಿ ಇರಲಿಲ್ಲ.‌’ ಎಂದರು.

‘ಸಂಸ್ಥೆಯು ಅಂತವರಲ್ಲಿ ಅರಳಿಕಟ್ಟೆದೊಡ್ಡಿ ಸುನೀತ, ಹಾರೋಹಳ್ಳಿ ದೇವಿ, ಚಿಕ್ಕುನದೊಡ್ಡಿ ಮಹದೇವಿಬಾಯಿ, ಸೋಮೆದ್ಯಾಪನಹಳ್ಳಿ ಮೇಘನ, ಅವರೇಮಾಳ ರಾಂಪುರ ಸೌಭಾಗ್ಯ ಅವರುಗಳನ್ನು ಗುರುತಿಸಿ ಪಟ್ಟಿ ಮಾಡಿಕೊಂಡಿತ್ತು. ಐವರಿಗೂ ಇಂದು ನಮ್ಮ ರೋಟರಿ ಸಂಸ್ಥೆ ವತಿಯಿಂದ ಉಚಿತವಾಗಿ ಹೊಲಿಗೆ ಯಂತ್ರವನ್ನು ಕೊಡುತ್ತಿದ್ದೇವೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ತರಬೇತಿ ಸಂಸ್ಥೆಯ ನಿರ್ದೇಶಕಿ ಸುಮ ಎನ್‌.ಗಾಂವಕರ್‌ ಮಾತನಾಡಿ, ‘ರೋಟರಿ ಸಂಸ್ಥೆಯು ಹಲವು ರೀತಿಯಲ್ಲಿ ನಮ್ಮಲ್ಲಿ ತರಬೇತಿ ಪಡೆದ ಮಹಿಳೆಯರಿಗೆ ಸಹಕಾರ ನೀಡುತ್ತಿದೆ. ಇದೇ ರೀತಿಯಲ್ಲಿ ದಾನ ಮಾಡುವ ಹಾಗೂ ಸಹಕಾರ ನೀಡುವ ದಾನಿಗಳು ನಮ್ಮ ಸಂಸ್ಥೆಯೊಂದಿಗೆ ಕೈ ಜೋಡಿಸಿ ಸಮಾಜದಲ್ಲಿನ ಅಶಕ್ತರಿಗೆ ಶಕ್ತಿ ತುಂಬಬೇಕೆಂದು’ ಮನವಿ ಮಾಡಿದರು.

ರೋಟರಿ ಮಾಜಿ ಅಧ್ಯಕ್ಷರಾದ ಡಾ. ಪ್ರಾಣೇಶ್‌, ಮಹಮ್ಮದ್‌ ಏಜಾಸ್‌, ಖಜಾಂಚಿ ಮುದ್ದೇಗೌಡ, ಪದಾಧಿಕಾರಿಗಳಾದ ಹೊನ್ನೇಗೌಡ, ಹರಿ ಪ್ರಸಾದ್‌, ಮುಬಾರಕ್‌, ಮಹಮ್ಮದ್‌ ನಖಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT