ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಜೆಎಂ ಕಾಮಗಾರಿಗೆ ಚಾಲನೆ

Published 12 ಫೆಬ್ರುವರಿ 2024, 16:17 IST
Last Updated 12 ಫೆಬ್ರುವರಿ 2024, 16:17 IST
ಅಕ್ಷರ ಗಾತ್ರ

ಹೊಸಕೋಟೆ: ತಾಲ್ಲೂಕಿನ ಚೊಕ್ಕಹಳ್ಳಿ ಮತ್ತು ದೂಡ್ಡಹುಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೂಡ್ಡಹುಲ್ಲೂರು, ಚೋಳಪನಹಳ್ಳಿ, ಚಿಕ್ಕನಲ್ಲೂರಳ್ಳಿ, ದೂಡ್ಡನಲ್ಲೂರಳ್ಳಿ ಗ್ರಾಮಗಳಲ್ಲಿ ಪ್ರತಿ ಮನೆಗೂ ಜೆಜೆಎಂ ಯೋಜನೆಯಡಿ ನೀರಿನ ಸಂಪರ್ಕ ಕಲ್ಪಿಸಲು ವಿಶ್ವೇಶ್ವರಯ್ಯ ಜಲ ಮಂಡಳಿ ನಿಗಮ ಹಮ್ಮಿಕೊಂಡಿರುವ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ, ಪ್ರತಿ ಮನೆಗೂ ನೀರು ದೊರಕಿಸಿಕೊಡುವ ಉದ್ದೇಶದಿಂದ ನಡೆಯುತ್ತಿರುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು ಸೂಚನೆ ನೀಡಿದರು.

ದೂಡ್ಡಹುಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನೀಲಾಂಜಿನಿ, ಬೆಂಗಳೂರು ಹಾಲು ಒಕ್ಕೂಟದ ಉಪಾಧ್ಯಕ್ಷ ಕೆಎಂಎಂಮಂಜುನಾಥ್, ನಿರ್ದೇಶಕ ಎಲ್.ಎನ್.ಟಿ ಮಂಜುನಾಥ್, ಕಮ್ಮಸಂದ್ರ ಕೃಷ್ಣಪ್ಪ, ರಾಜಗೋಪಾಲ್, ಆಂಜಿನಪ್ಪ, ನಾರಾಯಣಸ್ವಾಮಿ, ರಾಮಾಂಜಿನಪ್ಪ, ಮಲ್ಲಿಮಾಕನಪುರ ತಮ್ಮಯ್ಯ, ಲಕ್ಷ್ಮಣ್‌, ರಾಮೇಗೌಡ, ಮಹೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT