ರಸ್ತೆ ಅಗಲ ಹೆಚ್ಚಿಸಲು ಒತ್ತಾಯ

7

ರಸ್ತೆ ಅಗಲ ಹೆಚ್ಚಿಸಲು ಒತ್ತಾಯ

Published:
Updated:
Deccan Herald

ವಿಜಯಪುರ: ವಿಜಯಪುರದಿಂದ ಚಿಕ್ಕಬಳ್ಳಾಪುರ ಮಾರ್ಗ ಮಧ್ಯದ ಚಿಕ್ಕನಹಳ್ಳಿಯ ಕೆರೆ ಏರಿಯ ಮೇಲೆನ ರಸ್ತೆ ಅಗಲ ಹೆಚ್ಚಿಸುವಂತೆ ಸ್ಥಳೀಯರಾದ ಮುನೇಗೌಡ, ವೆಂಕಟೇಶ್ ಒತ್ತಾಯಿಸಿದ್ದಾರೆ.

ರಸ್ತೆ ತುಂಬಾ ಕಿರಿದಾಗಿದೆ. ಒಮ್ಮೆಗೆ ಒಂದೇ ವಾಹನ ಸಂಚರಿಸಬಹುದಾಗಿದೆ. ಅಪಘಾತಗಳು ನಡೆದು ಪ್ರಾಣಹಾನಿಗಳೂ ಸಂಭವಿಸಿವೆ. ಸುರಕ್ಷತೆಗಾಗಿ ರಸ್ತೆಯ ಇಕ್ಕೆಲಗಳಲ್ಲಿ ನೆಟ್ಟಿದ್ದ ಕಲ್ಲುಗಳು ಕಿತ್ತುಹೋಗಿ ಸಮಸ್ಯೆಯಾಗಿದೆ ಎಂದು ದೂರಿದ್ದಾರೆ.

ರಸ್ತೆಯ ಇಕ್ಕೆಲಗಳಲ್ಲಿ ದಟ್ಟವಾಗಿ ಬೆಳೆದು ನಿಂತಿರುವ ಗಿಡಗಳಿಂದ ತಿರುವುಗಳಲ್ಲಿ ಬರುವ ವಾಹನಗಳು ಕಾಣಿಸುವುದಿಲ್ಲ. ತಡೆಗೋಡೆಗಳನ್ನೂ ನಿರ್ಮಾಣ ಮಾಡಿಲ್ಲ. ದಿನನಿತ್ಯ ನೂರಾರು ವಾಹನಗಳು ಸಂಚರಿಸುವುದರಿಂದ ರಸ್ತೆಯನ್ನು ಅಗಲ ಮಾಡಿ ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !