ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು-ಹೈದರಾಬಾದ್‌ ಹೆದ್ದಾರಿಯಲ್ಲಿ ಹೆಚ್ಚಿದ ಅಪಘಾತ

Published 15 ಜನವರಿ 2024, 3:21 IST
Last Updated 15 ಜನವರಿ 2024, 3:21 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ದೇವನಹಳ್ಳಿ ತಾಲ್ಲೂಕಿನ ವೆಂಕಟಗಿರಿಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾದು ಹೋಗುವ ಬೆಂಗಳೂರು-ಹೈದರಾಬಾದ್‌ ರಾಷ್ಟ್ರೀಯ ಹೆದ್ದಾರಿ ಮುದುಗುರ್ಕಿ ಗ್ರಾಮಸ್ಥರಿಗೆ ವರವಾಗುವುದರ ಬದಲಿಗೆ ಮರಣ ಶಾಸನ ಬರೆಯುತ್ತಿದೆ.

ಬೆಂಗಳೂರಿನಿಂದ ಹೈದರಾಬಾದ್‌ ಕಡೆಗೆ ಸಂಚಾರಿಸಲು ಮುಖ್ಯ ಹೆದ್ದಾರಿಯಾಗಿರುವ ಈ ರಸ್ತೆಯು ಚತುಷ್ಪಥ ರಸ್ತೆಯಾಗಿದ್ದರೂ ಯಾವುದೇ‌ ಸುರಕ್ಷಿತ ಕ್ರಮ ಕೈಗೊಳ್ಳದೆ ಇರುವುದರಿಂದ ಆಗ್ಗಾಗೆ ಅಪಘಾತಗಳು ಸಂಭವಿಸುತ್ತಲೆ ಇವೆ.

ಜನವಸತಿ ಪ್ರದೇಶಗಳಲ್ಲಿ ವೇಗಮಿತಿ, ಎಚ್ಚರಿಕೆಯ ಫಲಕ, ರಸ್ತೆಯ ವಿಭಜಕದಲ್ಲಿ ಬೀದಿ ದೀಪ ಅಳವಡಿಸಿಲ್ಲದ ಕಾರಣ ಈ ರಸ್ತೆಯಲ್ಲಿ ವೇಗವಾಗಿ ಬರುವ ವಾಹನಗಳಿಗೆ ಸಿಲುಕಿ ಮೃತಪಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.

ಮುದುಗುರ್ಕಿ ಗ್ರಾಮದ ಬಳಿ ಹಾದು ಹೋಗುವ ಹೆದ್ದಾರಿಯಲ್ಲಿ ಇದುವರೆಗೂ 50ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. ಇವುಗಳಲ್ಲಿ ಒಂದೇ ಗ್ರಾಮದ ಸುಮಾರು 13 ಮಂದಿ ಇದುವರೆಗೂ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರು ಶಾಶ್ವತವಾಗಿ ಅಂಗವಿಕಲರಾಗಿದ್ದಾರೆ. ಅಪಘಾತಗಳಲ್ಲಿ ಮೃತಪಟ್ಟಿರುವವರಿಗೆ ಯಾರಿಗೂ ಬಿಡಿಗಾಸು ಪರಿಹಾರ ಸಿಕ್ಕಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ದಿನಬೆಳಗಾದರೆ ಇವತ್ತು ಯಾರ ಸರದಿಯೋ? ಎನ್ನುವ ಆತಂಕ ಈ ಗ್ರಾಮಸ್ಥರನ್ನು ಕಾಡುತ್ತಿದೆ. ದ್ರಾಕ್ಷಿ ಕಟಾವು ಮಾಡುವ ಕೂಲಿ ಕಾರ್ಮಿಕರೇ ಗ್ರಾಮದಲ್ಲಿ ವಾಸವಿದ್ದಾರೆ. ಆ ರಸ್ತೆ ಮಾರ್ಗವಾಗಿ ಓಡಾಡುವವರು ಮನೆಯಿಂದ ಹೊರಗೆ ಹೋದವರು ಸುರಕ್ಷಿತವಾಗಿ ವಾಪಸ್ಸು ಬರುತ್ತಾರೆ ಎನ್ನುವ ಖಾತರಿ ಇಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಚಿಕ್ಕಬಳ್ಳಾಪುರದ ಕಡೆಯಿಂದ ದೇವನಹಳ್ಳಿಯ ಕಡೆಗೆ ಬರುವ ವಾಹನ ಸವಾರರು ಮುದುಗುರ್ಕಿಗಿಂತ ಅರ್ಧ ಕಿ.ಮೀ.ದೂರದಲ್ಲಿರುವ ಮೇಲ್ಮಟ್ಟದ ರಸ್ತೆ ಹಾದು ಬರುತ್ತಾರೆ. ಈ ವೇಳೆ ವಾಹನಗಳ ವೇಗ ಸುಮಾರು 120 ಕೀ.ಮೀ ಇರುತ್ತದೆ. ಅವರು, ರಸ್ತೆಯಿಂದ ಕೆಳಗೆ ಇಳಿಯುತ್ತಿದ್ದಂತೆ ಇಲ್ಲೊಂದು ಹಳ್ಳಿಯಿದೆ ಎನ್ನುವುದು ಅರಿವಿಗೆ ಬರುವಷ್ಟರಲ್ಲಿ ಹಳ್ಳಿಯನ್ನು ದಾಟಿ ಹೋಗಿರುತ್ತಾರೆ.

ಶಾಲಾ–ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಗ್ರಾಮದಿಂದ ಹೊರಗೆ ಹೋಗುವುದಕ್ಕೂ ಭಯಪಡುತ್ತಾರೆ. ರಸ್ತೆ ದಾಟಬೇಕಾದರೆ ಅರ್ಧ ಗಂಟೆ ಕಾಯಬೇಕು. ವಾಹನ ಸವಾರರಿಗೆ ವೇಗದ ಮಿತಿಯಿಲ್ಲ. ರಾತ್ರಿಯ ವೇಳೆಯಲ್ಲಿ ವೇಗವಾಗಿ ಬರುವ ವಾಹನ ಸವಾರರು ಮದ್ಯಪಾನ ಮಾಡಿಕೊಂಡು ವಾಹನಗಳು ಚಾಲನೆ ಮಾಡುತ್ತಾರೆ. ಕೆಲವೊಮ್ಮೆ ವಾಹನಗಳು ಚಾಲಕರ ನಿಯಂತ್ರಣ ತಪ್ಪಿ ರಸ್ತೆ ಸಮೀಪದಲ್ಲಿರುವ ಮನೆಗಳಿಗೆ ನುಗ್ಗಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

ಈಶಾ ಕೇಂದ್ರ–ಹೆಚ್ಚಿದ ವಾಹನ ದಟ್ಟಣೆ: ಚಿಕ್ಕಬಳ್ಳಾಪುರದ ಹೊರವಲಯದಲ್ಲಿ ಈಶಾ ಕೇಂದ್ರ ಆರಂಭವಾದ ನಂತರ ವಾರಾಂತ್ಯದ ಎರಡು ದಿನಗಳ ಕಾಲ ವಿಪರೀತ ವಾಹನಗಳ ದಟ್ಟಣೆ ಇರುತ್ತದೆ. ಬೆಂಗಳೂರಿನಿಂದ ಬರುವ ಯುವಕರು ಒಂದೇ ದ್ವಿಚಕ್ರ ವಾಹನದಲ್ಲಿ ಮೂರು, ನಾಲ್ಕು ಜನ ತುಂಬಾ ವೇಗವಾಗಿ ವಾಹನ ಚಾಲನೆ ಮಾಡಿಕೊಂಡು ಬರುತ್ತಾರೆ. ಕೆಲವರು ವ್ಹೀಲಿಂಗ್‌ ಮಾಡಿಕೊಂಡೇ ಹೋಗುತ್ತಾರೆ. ಅವರನ್ನು ಪ್ರಶ್ನೆ ಮಾಡುವವರೇ ಇಲ್ಲವಾಗಿದ್ದಾರೆ ಎನ್ನುವುದು ಗ್ರಾಮಸ್ಥರು ದೂರು.

ರಸ್ತೆತಡೆ ನಡೆಸುವ ಎಚ್ಚರಿಕೆ:  ‘ನಮ್ಮ ಗ್ರಾಮದ ಹಲವರು ಪ್ರಾಣ ಕಳೆದುಕೊಂಡು, ಅವರ ಕುಟುಂಬಗಳು ಅನಾಥವಾಗುತ್ತಿವೆ. ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಾಗಿದ್ದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅವರ ಬೇಜಾವಾಬ್ದಾರಿ ಹಾಗೂ ನಿರ್ಲಕ್ಷ್ಯ ಹೀಗೆ ಮುಂದುವರೆದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಮಾರಪ್ಪ ಎಚ್ಚರಿಕೆ ನೀಡಿದರು.

ವಿಜಯಪುರ ಹೋಬಳಿ ವೆಂಕಟಗಿರಿಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದುಗುರ್ಕಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ
ವಿಜಯಪುರ ಹೋಬಳಿ ವೆಂಕಟಗಿರಿಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದುಗುರ್ಕಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು
ಹೆದ್ದಾರಿ ದಾಟಲು ಪರದಾಡುತ್ತಿದ್ದ ದ್ವಿಚಕ್ರ ವಾಹನ ಸವಾರ
ಹೆದ್ದಾರಿ ದಾಟಲು ಪರದಾಡುತ್ತಿದ್ದ ದ್ವಿಚಕ್ರ ವಾಹನ ಸವಾರ
ಲಕ್ಷ್ಮಮ್ಮ
ಲಕ್ಷ್ಮಮ್ಮ
ಮಾರಪ್ಪ
ಮಾರಪ್ಪ
ನಾರಾಯಣಸ್ವಾಮಿ
ನಾರಾಯಣಸ್ವಾಮಿ
ರಾಧಮ್ಮ
ರಾಧಮ್ಮ
ಸೌಮ್ಯ
ಸೌಮ್ಯ

Cut-off box - ಕೇಳಸೇತುವೆ ನಿರ್ಮಿಸಿ ರಾಷ್ಟ್ರೀಯ ಹೆದ್ದಾರಿಯ ನಡುವೆ ಮುದುಗುರ್ಕಿ ಬಳಿ ರಸ್ತೆಯಲ್ಲಿ ಕೇಳಸೇತುವೆ ನಿರ್ಮಾಣ ಮಾಡಬೇಕು. ಗ್ರಾಮಸ್ಥರು ಅಪಾಯವಿಲ್ಲದೆ ರಸ್ತೆ ದಾಟುವುದಕ್ಕೆ ಅವಕಾಶ ಮಾಡಿಕೊಡುವಂತೆ ಹಲವು ಬಾರಿ ಒತ್ತಾಯಿಸಿದರೂ ಈ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ. ಇನ್ನೂ ಎಷ್ಟು ಮಂದಿ ತಮ್ಮ ಪ್ರಾಣಾರ್ಪಣೆ ಮಾಡಬೇಕೋ ? ನಾರಾಯಣಸ್ವಾಮಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜನರ ಜೀವಕ್ಕೆ ಬೆಲೆ ಇಲ್ಲವೆ ನಮ್ಮೂರಿನ ಜನರ ಜೀವಕ್ಕೆ ಬೆಲೆನೇ ಇಲ್ಲದಂತಾಗಿದೆ. ಹಿಂದೆ ಇದ್ದ ಜನಪ್ರತಿನಿಧಿಗಳೆಲ್ಲರಿಗೂ ಇಲ್ಲಿನ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಈಗಿನ ಸಚಿವರಿಗೂ ತಿಳಿಸಿದ್ದೇವೆ. ಏನೂ ಪ್ರಯೋಜನವಾಗಿಲ್ಲ. ಮಾರಪ್ಪ ಗ್ರಾಮ ಪಂಚಾಯಿತಿ ಸದಸ್ಯ ಮುದುಗುರ್ಕಿ. ನಾವೇನು ಶಾಪಗ್ರಸ್ತರೇ? ನಾವೆಲ್ಲರೂ ಒಂದು ರೀತಿಯಾಗಿ ಶಾಪಗ್ರಸ್ತರಾಗಿದ್ದೇವೆನೋ ನಮ್ಮೂರಿನವರು ಕಣ್ಣಮುಂದೆ ಸಾಯುವುದನ್ನು ನೋಡುವಂತಹ ದುಸ್ಥಿತಿಗೆ ಬಂದಿದ್ದೇವೆ. ಇಲ್ಲಿ ಅಪಘಾತಗಳು ಆಗಿ ಸಾಯುತ್ತಿದ್ದರೂ ಯಾವೊಬ್ಬ ಅಧಿಕಾರಿಯಾಗಲಿ ಜನಪ್ರತಿನಿಧಿಯಾಗಲಿ ಬಂದು ಇಲ್ಲಿನ ಸಮಸ್ಯೆ ಬಗೆಹರಿಸಿಲ್ಲ. ಲಕ್ಷ್ಮಮ್ಮ ಸ್ಥಳೀಯ ನಿವಾಸಿ ಕನಿಷ್ಠ ಜ್ಞಾನ ಬೇಡವೇ ಇತ್ತಿಚೆಗೆ ನಮ್ಮ ಸಂಬಂಧಿಕರೊಬ್ಬರನ್ನು ಕಳೆದುಕೊಂಡೆವು. ಹೀಗೆ ಬಹಳಷ್ಟು ಕುಟುಂಬ‌ಗಳು ರಸ್ತೆ ಅಪಘಾತದಿಂದ ತಮ್ಮ ಸಂಬಂಧಿಕರನ್ನು ಕಳೆದುಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಮಾಡಿದವರಿಗೆ ಹಳ್ಳಿಯ ವ್ಯಾಪ್ತಿಯಲ್ಲಿ ಸುರಕ್ಷತಾ ಕ್ರಮಗಳು ಕೈಗೊಳ್ಳಬೇಕು ಎನ್ನುವ ಕನಿಷ್ಠ ಜ್ಞಾನ ಬೇಡವೇ? ಸೌಮ್ಯ ಸ್ಥಳೀಯ ನಿವಾಸಿ ಮಕ್ಕಳನ್ನು ಹೊರಗೆ ಕಳುಹಿಸುವುದಕ್ಕೆ ಭಯವಾಗುತ್ತದೆ. ಅವರು ಸುರಕ್ಷಿತವಾಗಿ ಮನೆಗೆ ಬರುವವರೆಗೂ ನಮ್ಮ ಎದೆಬಡಿತ ಜಾಸ್ತಿಯಾಗುತ್ತಲೇ ಇರುತ್ತದೆ. ಅವರು ಮನೆಗೆ ಬಂದಾಗ ಸ್ವಲ್ಪ ನೆಮ್ಮದಿಯಾಗುತ್ತದೆ. ರಾಧಮ್ಮ ಸ್ಥಳೀಯ ನಿವಾಸಿ ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ಅಪಘಾತ ಹಾಗೂ ಇಲ್ಲಿನ ವಾಹನಗಳ ದಟ್ಟಣೆ ಸಮಸ್ಯೆ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ಪತ್ರಗಳು ಬರೆದರೂ ಏನೂ ಪ್ರಯೋಜನವಾಗಿಲ್ಲ. ಬಸವನಗೌಡ ಪಾಟೀಲ್ ಪಿಡಿಓ ವೆಂಕಟಗಿರಿಕೋಟೆ ಗ್ರಾ.ಪಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT