ಮಂಗಳವಾರ, ಡಿಸೆಂಬರ್ 1, 2020
17 °C

ಓಬವ್ವ ಜಯಂತಿ ವಾರ್ಷಿಕ ಆಚರಣೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ‘ದಲಿತ ಇತಿಹಾಸಕಾರರನ್ನು ಸರ್ಕಾರ ನಿರ್ಲಕ್ಷಿಸಿವುದು ಸರಿಯಲ್ಲ’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮುನಿನರಸಿಂಹಯ್ಯ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕು ಚಲವಾದಿ ಮಹಾಸಭಾ ವತಿಯಿಂದ ನಡೆದ ವೀರ ವನಿತೆ ಒನಕೆ ಒಬವ್ವ ವಾರ್ಷಿಕ ಜಯಂತಿ ಕಾರ್ಯಕ್ರಮದಲ್ಲಿ ಬುಧವಾರ ಅವರು ಮಾತನಾಡಿದರು.

‘ದಲಿತ ಸಮುದಾಯದ ಒಬ್ಬ ಸಾಮಾನ್ಯ ಮಹಿಳೆ ತನ್ನ ಒನಕೆಯಿಂದ ನೂರಾರು ಸೈನಿಕರನ್ನು ಕೊಂದು ಹೆಣದ ರಾಶಿ ಮಾಡಿದ್ದು ಸಾಮಾನ್ಯ ಸಾಧನೆಯಲ್ಲ. ತನ್ನ ಪತಿ ಕಹಳೆ ಚಲವಾದಿ ಮುದ್ದ ಹನುಪ್ಪರಿಗೆ ತಿಳಿಸದೆ ಏಕಾಂಗಿಯಾಗಿ ರಣರಂಗದಲ್ಲಿನ ಕದನದಂತೆ ಕಾದಾಡಿದ ವೀರ ಮಹಿಳೆ ಒನಕೆ ಓಬವ್ವ. ಅಂತಿಮ ಹಂತದಲ್ಲಿ ಹೈದರಾಲಿ ಸೈನಿಕರಿಗೆ ಬಲಿಯಾಗಿ ವೀರ ಸ್ವರ್ಗವನ್ನು ಪಡೆಯುತ್ತಾರೆ. ಅಂತಹ ಸಾಧನೆಗೈದ ಮಹಿಳೆ 18ನೇ ಶತಮಾನದವರು ಎಂಬುದನ್ನು ಸರ್ಕಾರ ಮನಗಂಡು ವಾರ್ಷಿಕ ಜಯಂತಿಯನ್ನು ಸರ್ಕಾರದ ವತಿಯಿಂದಲೇ ಆಚರಣೆಗೆ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಭಾರತ ಜನ ಜಾಗೃತಿ ಸೇನೆ ರಾಜ್ಯ ಘಟಕ ಅಧ್ಯಕ್ಷ ಸಿ.ಮುನಿಯಪ್ಪ ಮಾತನಾಡಿ, ‘ದಲಿತರು, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತ ಸಮುದಾಯದಲ್ಲಿ ಇತಿಹಾಸಕಾರರ ಕೊರತೆ ಇಲ್ಲ. ಸಮುದಾಯಕ್ಕೆ ಇತಿಹಾಸಕಾರರ ಪರಿಚಯವಾಗಬೇಕು. ಮಹಿಳೆಯರನ್ನು ಮುಂಚೂಣಿಗೆ ತರಬೇಕು’ ಎಂದು ಹೇಳಿದರು.

ಚಲವಾದಿ ಮಹಾ ಸಭಾ ಜಿಲ್ಲಾ ಅಧ್ಯಕ್ಷ ರೆಡ್ಡಿಹಳ್ಳಿ ಮುನಿರಾಜು, ತಾಲ್ಲೂಕು ಘಟಕ ಅಧ್ಯಕ್ಷ ಕೆ.ವಿ.ಸ್ವಾಮಿ ಮಾತನಾಡಿ, ‘ಜಯಂತಿ ಮೂರು ವರ್ಷಗಳಿಂದ ಸಮುದಾಯದ ವತಿಯಿಂದ ಆಚರಿಸಲಾಗುತ್ತಿದೆ. ಸ್ವಾಮಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ ಹುತಾತ್ಮರಾದ ಒನಕೆ ಓಬವ್ವ ಜಯಂತಿ ಸರ್ಕಾರಿಂದ ಆಚರಿಸುವಂತೆ ಮುಖಂಡರ ನಿಯೋಗದೊಂದಿಗೆ ಹೋಗಿ ಒತ್ತಾಯಿಸಲಾಗುತ್ತದೆ ಎಂದರು.

ಮುಖಂಡ ಕೆಂಪಣ್ಣ ಮತ್ತು ತಾಲ್ಲೂಕು ಘಟಕ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಮಾತನಾಡಿ, ಸಮುದಾಯ ಸಂಘಟಿತರಾಗಬೇಕು. ವೈಯಕ್ತಿಕ ಹಿತಾಸಕ್ತಿ ಬದಿಗೆ ಸರಿಸಿ ಒಗ್ಗೂಡಬೇಕು. ಜಿಲ್ಲಾಡಳಿತ ಭವನ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿದೆ. ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಹೇಳಿದರು.

ಪುರಸಭೆ ಸದಸ್ಯ ಜಿ.ಸುರೇಶ್, ಮುಖಂಡರಾದ ಡೇವಿಡ್ ನಾರಾಯಣ ಸ್ವಾಮಿ, ಸೋಮಶೇಖರ್, ಎಚ್.ಕೆ.ವೆಂಕಟೇಶಪ್ಪ, ಮುನಿರಾಜು, ರಮೇಶ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು