‘ಎಲ್ಲ ವರ್ಗದ ಏಳಿಗೆಗೆ ಶ್ರಮಿಸುವ ಜೆಡಿಎಸ್‌’

7
ಅಲ್ಪಸಂಖ್ಯಾತರ ಸಮಾವೇಶಕ್ಕೆ ವಿಜಯಪುರದಿಂದ ಹೊರಟ ಜನರು

‘ಎಲ್ಲ ವರ್ಗದ ಏಳಿಗೆಗೆ ಶ್ರಮಿಸುವ ಜೆಡಿಎಸ್‌’

Published:
Updated:
Prajavani

ವಿಜಯಪುರ: ‘ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಜೆಡಿಎಸ್ ಅನೇಕ ಕಾರ್ಯಕ್ರಮ ಕೈಗೊಂಡಿದ್ದು, ಜಾತ್ಯತೀತವಾಗಿ ಎಲ್ಲ ವರ್ಗದ ಜನರ ಏಳಿಗೆಗಾಗಿ ಶ್ರಮಿಸುತ್ತಿದೆ’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಜೆಡಿಎಸ್ ಪಕ್ಷದಿಂದ ಆಯೋಜಿಸಿದ್ದ ಅಲ್ಪಸಂಖ್ಯಾತರ ಸಮಾವೇಶಕ್ಕೆ ಶಿವಗಣೇಶ ಸರ್ಕಲ್‌ನಿಂದ ಹೊರಟ ಬಸ್‌ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಜೆಡಿಎಸ್ ಪಕ್ಷವು ಸಮಾಜದಲ್ಲಿನ ಎಲ್ಲ ಜಾತಿ ವರ್ಗಗಳ ಏಳಿಗೆಗಾಗಿ ಶ್ರಮಿಸುತ್ತಿದೆ. ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರ ದೂರದೃಷ್ಟಿ ಈ ರಾಜ್ಯದಲ್ಲಿನ ಎಲ್ಲ ವರ್ಗದ ಜನರ ಏಳಿಗೆಯಾಗಿದೆ. ಈ ನಿಟ್ಟಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕೈಗೊಂಡಿರುವ ಕಾರ್ಯಕ್ರಮಗಳನ್ನು ಜನರಿಗೆ ವಿವರಿಸುವುದರ ಜೊತೆಗೆ ಅವುಗಳ ಅನುಷ್ಠಾನದ ಕುರಿತಾಗಿಯೂ ಜನರಿಗೆ ಪರಿಚಯಿಸುವ ಉದ್ದೇಶದಿಂದಾಗಿ ಇಂದು ಸಮಾವೇಶ ನಡೆಯುತ್ತಿದೆ. ಕ್ಷೇತ್ರದಿಂದ ನೂರಾರು ಮಂದಿ ಹೊರಡುತ್ತಿದ್ದಾರೆ’ ಎಂದರು.

ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಸ್.ಭಾಸ್ಕರ್ ಮಾತನಾಡಿ, ’ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ನೆನಪಿನಲ್ಲಿ ಇಂದು ಸಮಾವೇಶ ನಡೆಯುತ್ತಿದೆ. ರಾಜ್ಯದಲ್ಲಿನ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಕೈಗೊಂಡಿರುವ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳ ಜೊತೆಯಲ್ಲಿ ಈ ರಾಜ್ಯದ ಅಲ್ಪಸಂಖ್ಯಾತರು ಸೇರಿದಂತೆ ಹಿಂದುಳಿದ ವರ್ಗವರು, ಪರಿಶಿಷ್ಟ ಜಾತಿ, ವರ್ಗಗಳ ಕಲ್ಯಾಣಕ್ಕಾಗಿಯೂ ಉತ್ತಮ ಯೋಜನೆಗಳನ್ನು ಸರ್ಕಾರ ರೂಪಿಸಿದೆ. ನಗರದಿಂದ ಐದು ಸಾವಿರಕ್ಕೂ ಹೆಚ್ಚು ಮಂದಿ ಅಲ್ಪಸಂಖ್ಯಾತರು ಹೊರಡುತ್ತಿದ್ದಾರೆ’ ಎಂದರು.

ಜೆಡಿಎಸ್ ಮುಖಂಡ ಹುರುಳುಗುರ್ಕಿ ಶ್ರೀನಿವಾಸ್ ಮಾತನಾಡಿ, ’‍ಜೆಡಿಎಸ್ ಪಕ್ಷದ ಸಂಘಟನೆ ರಾಜ್ಯದಲ್ಲಿ ಉತ್ತಮವಾಗಿದೆ. ಪಕ್ಷ ಕೇವಲ ಒಂದು ಜನಾಂಗಕ್ಕೆ ಸೀಮಿತವಾಗದೆ, ಎಲ್ಲ ವರ್ಗದ ಜನರನ್ನು ಒಟ್ಟುಗೂಡಿಸಿಕೊಂಡು ಹೋಗುವತ್ತ ಗಮನ ಹರಿಸುತ್ತಿದೆ. ಇದರ ಅಂಗವಾಗಿ ಅಲ್ಪಸಂಖ್ಯಾತರ ಸಮಾವೇಶ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲ ಸಮುದಾಯ ಸಮಾವೇಶಗಳ ಮೂಲಕ ಮತ್ತಷ್ಟು ಯೋಜನೆ ಜಾರಿಗೆ ತರಲಿದ್ದಾರೆ’ ಎಂದರು.

ಜೂನಿಯರ್ ಕಾಲೇಜಿನ ಮೈದಾನದಿಂದ ಅಲ್ಪಸಂಖ್ಯಾತ ಸಮುದಾಯದ ಜನರು ಸಮಾವೇಶಕ್ಕೆ ತೆರಳಿದರು. ಸಮಾವೇಶಕ್ಕೆ ತೆರಳುವ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಜೆಡಿಎಸ್ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಅಶ್ವಥಪ್ಪ, ನಗರ ಘಟಕದ ಕಾರ್ಯಾಧ್ಯಕ್ಷ ಎಂ.ಕೇಶವಪ್ಪ, ಮರವೇ ನಾರಾಯಣಸ್ವಾಮಿ, ಹೋಬಳಿ ಘಟಕದ ಪ್ರಧಾನ ಕಾರ್ಯದರ್ಶಿ ಕಲ್ಯಾಣ್ ಕುಮಾರ್ ಬಾಬು, ಚಿ.ಮಾ.ಸುಧಾಕರ್, ಗಡ್ಡದನಾಯಕನಹಳ್ಳಿ ಚಂದ್ರಪ್ಪ, ಚಿನ್ನಯ್ಯ, ಎಂ.ಡಿ.ರಾಮಚಂದ್ರಪ್ಪ, ಕಿರಣ್, ಮಹೇಶ್ ಕುಮಾರ್, ಎಚ್.ಎಂ.ಕೃಷ್ಣಪ್ಪ, ಸದಾಖತ್ ಅಲಿ, ನಾರಾಯಣಸ್ವಾಮಿ, ಜೆ.ಆರ್.ಮುನಿವೀರಣ್ಣ, ಹರ್ಷವರ್ಧನ್, ದಂಡಿಗಾನಹಳ್ಳಿ ನಾರಾಯಣಸ್ವಾಮಿ, ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !