ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹4 ಲಕ್ಷ ಲಾಭ ಗಳಿಸಿದ ಕನಸವಾಡಿ ವಿಎಸ್ಎಸ್ಎನ್

ಬಿಡಿಸಿಸಿ ಬ್ಯಾಂಕಿನಲ್ಲಿ ₹20 ಲಕ್ಷ ಠೇವಣಿ
Last Updated 24 ಸೆಪ್ಟೆಂಬರ್ 2018, 12:51 IST
ಅಕ್ಷರ ಗಾತ್ರ

ಕನಸವಾಡಿ(ದೊಡ್ಡಬಳ್ಳಾಪುರ): ‘ರೈತರ ಸಾಲ ಮನ್ನಾ ಯೋಜನೆಯಲ್ಲಿ ಹೆಚ್ಚು ಜನ ರೈತರ ಸಾಲ ಮನ್ನಾ ನಮ್ಮ ಸಂಘದಲ್ಲಿ ಆಗಿದೆ’ ಎಂದು ಸಂಘದ ಅಧ್ಯಕ್ಷ ಜಿ.ಚುಂಚೇಗೌಡ ಹೇಳಿದರು.

ತಾಲ್ಲೂಕಿನ ಕನಸವಾಡಿ ವ್ಯವಸಾಯ ಸೇವಾ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ 760 ಜನ ರೈತರ ₹3.11 ಕೋಟಿ ಬೆಳೆ ಸಾಲ ಮನ್ನಾ, 2018ರಲ್ಲಿ ಸಮ್ಮಿಶ್ರ ಸರ್ಕಾರದ ಆಡಳಿತದಲ್ಲಿ 374 ಜನ ರೈತರ 1.58 ಕೋಟಿ ಬೆಳೆ ಸಾಲ ಮನ್ನಾ ಆಗಿದೆ ಎಂದರು.

ಸಂಘವು ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ, ರೈತರಿಗೆ ಬೆಳೆ ಸಾಲ, ನಿಶ್ಚಿತ ಠೇವಣಿಗಳನ್ನು ಸಂಗ್ರಹಿಸಲಾಗಿದೆ. ಸಂಘವು 2017-18ನೇ ಸಾಲಿಗೆ ₹4 ಲಕ್ಷ ಲಾಭ ಗಳಿಸಿದೆ. ₹20 ಲಕ್ಷವನ್ನು ಬಿಡಿಸಿಸಿ ಬ್ಯಾಂಕಿನಲ್ಲಿ ಠೇವಣಿ ಇಟ್ಟಿದೆ. ರೈತರಿಗೆ ಸಕಾಲದಲ್ಲಿ ಬೆಳೆ ಸಾಲ ನೀಡಲು ಸಂಘವು ರೈತರಿಗೆ ಸ್ಪಂದಿಸುತ್ತಿದೆ. ಸಂಘದ ವತಿಯಿಂದ ರೈತರಿಗೆ ಅಗತ್ಯ ಸೇವೆಗಳನ್ನು ನೀಡಲು ಶ್ರಮಿಸಲಿದೆ ಎಂದು ಹೇಳಿದರು.

ಸಂಘದ ಉಪಾಧ್ಯಕ್ಷ ಕೃಷ್ಣಮೂರ್ತಿ, ಕಾರ್ಯದರ್ಶಿ ಎಚ್.ಚಂದ್ರಶೇಖರ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಚನ್ನಮ್ಮರಾಮಲಿಂಗಯ್ಯ, ಜಿ.ಶಂಕರಪ್ಪ, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಕೆ.ವಿ.ಪ್ರಕಾಶ್, ಬಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಕೆಂಪೇಗೌಡ, ಸಂಘದ ನಿರ್ದೇಶಕರಾದ ಎಂ.ಶಿವಣ್ಣ, ಸುಬ್ರಮಣ್ಯ, ವಿಶ್ವನಾಥ್, ಮಹದೇವಯ್ಯ, ನರಸಿಂಹಮೂರ್ತಿ, ಪುಟ್ಟಮ್ಮ, ಗಂಗಮ್ಮ, ನಾಗರತ್ನಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT