ದೇವನಹಳ್ಳಿ: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ‘ಕೇರ್ ಬೈ ಬಿಎಲ್ಆರ್’ ಎಂಬ ಹೊಸ ಸೇವೆ ಆರಂಭಿಸಲಾಗಿದೆ.

ಪ್ರಯಾಣಿಕರಿಗೆ ವಿಮಾನ ನಿಲ್ದಾಣದೊಳಗೆ ಸುಲಭವಾಗಿ ಸಂಚರಿಸಲು ಹಾಗೂ ಅಗತ್ಯವಿರುವ ಎಲ್ಲಾ ಸಹಾಯವನ್ನು ಒಂದೇ ಕಡೆ ಒದಗಿಸುವುದು ಇದರ ಉದ್ದೇಶ.

ವಿಮಾನ ನಿಲ್ದಾಣಗಳು ಕೇವಲ ವಿಮಾನಯಾನಕ್ಕೆ ಮಾತ್ರ ಸೀಮಿತವಲ್ಲ. ಇಲ್ಲಿ ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ. ವಿಶ್ರಾಂತಿ ಪಡೆಯುತ್ತಾರೆ ಮತ್ತು ಖರೀದಿ ಕೂಡ ಮಾಡುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಬಿಎಲ್ಆರ್ ಪ್ರಯಾಣವನ್ನು ಇನ್ನಷ್ಟು ಆರಾಮದಾಯಕ ಮತ್ತು ನೆನಪಿನಲ್ಲಿ ಇಡುವಂತೆ ಮಾಡಲು ಈ ಹೊಸ ಸೇವೆ ಆರಂಭಿಸಿದೆ.

‘ಕೇರ್ ಬೈ ಬಿಎಲ್ಆರ್’ ಅಡಿ ಮೀಟ್ ಅಂಡ್ ಗೆಟ್ ಅಸಿಸ್ಟ್ (ಭೇಟಿ ನೀಡಿ ಮತ್ತು ನೆರವು ಪಡೆಯಿರಿ) ಸೇವೆಯಲ್ಲಿ ಲಗೇಜ್ ಹೊರುವ ಪೋರ್ಟರ್ ಸೇವೆ, ವ್ಯಾಲೆಟ್ ಪಾರ್ಕಿಂಗ್, ಐಷಾರಾಮಿ ಲಿಮೋಸಿನ್ ವಾಹನ ಸೇವೆ, ಆಗಮನ ಲಾಂಜ್ ಪ್ರವೇಶ ಮತ್ತು ಹೂಗುಚ್ಛ ಸೇವೆ, ಸೌಲಭ್ಯ ಲಭ್ಯ ಇರುತ್ತವೆ. ಪ್ರಯಾಣಿಕರು ಹೊರಡುವಾಗ, ಆಗಮಿಸುವಾಗ ಅಥವಾ ಟ್ರಾನ್ಸಿಟ್ ಸಮಯದಲ್ಲೂ ಈ ಸೇವೆ ಪಡೆಯಬಹುದು. ಈ ಸೇವೆಗಳು ಟರ್ಮಿನಲ್–1 ಮತ್ತು ಟರ್ಮಿನಲ್–2 ಎರಡರಲ್ಲೂ ಲಭ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.