ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂ.ಗ್ರಾ. ಲೋಕಸಭಾ ಕ್ಷೇತ್ರ: ಕೆಲವು ಮತಗಟ್ಟೆಗಳಲ್ಲಿ ಮಂಜುನಾಥ್‌ಗೆ ಐದಾರು ಮತಗಳು!

Published 5 ಜೂನ್ 2024, 7:18 IST
Last Updated 5 ಜೂನ್ 2024, 10:04 IST
ಅಕ್ಷರ ಗಾತ್ರ

ಚನ್ನಪಟ್ಟಣ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವಿಜೇತ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಅವರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರಿಗಿಂತ 21,600 ಹೆಚ್ಚು ಮತಗಳನ್ನು ಪಡೆದಿದ್ದರೂ ನಗರದ ವ್ಯಾಪ್ತಿಯ ಕೆಲವು ಮತಗಟ್ಟೆಗಳಲ್ಲಿ ಸಿಂಗಲ್ ನಂಬರ್ ಮತ ಪಡೆದಿರುವುದು ಆಶ್ಚರ್ಯ ಹುಟ್ಟಿಸಿದೆ.

ಮಂಜುನಾಥ್ ಅವರು ಬಹುತೇಕ ಮುಸ್ಲಿಂ ಸಮುದಾಯ ವಾಸಿಸುವ ನಗರ ವ್ಯಾಪ್ತಿಯ ಟಿಪ್ಪುನಗರ-2 ಮತಗಟ್ಟೆಯಲ್ಲಿ 8 ಮತ, ಬಡಾಮಕಾನ್-2 ಮತಗಟ್ಟೆಯಲ್ಲಿ 6, ಬಡಾಮಕಾನ್-3 ಮತಗಟ್ಟೆಯಲ್ಲಿ 5, ಪೇಟ ಟೌನ್-3 ಮತಗಟ್ಟೆಯಲ್ಲಿ 6 ಮತ, ಹಳೇ ಡೇರಾ-1 ರಲ್ಲಿ 6 ಮತ, ಹಳೇ ಡೇರಾ-2 ರಲ್ಲಿ 5 ಮತ, ಹಳೇ ಡೇರಾ-3 ರಲ್ಲಿ 7 ಮತ, ಇಸ್ಲಾಂಪುರ ಮತಗಟ್ಟೆಯಲ್ಲಿ 7 ಮತ, ಸಾತನೂರು ರಸ್ತೆ -1 ಮತಗಟ್ಟೆಯಲ್ಲಿ 7, ವಾಟರ್ ಬೋರ್ಡ್-1 ಮತಗಟ್ಟೆಯಲ್ಲಿ 6 ಮತ, ವಾಟರ್ ಬೋರ್ಡ್-2 ಮತಗಟ್ಟೆಯಲ್ಲಿ 4, ಇಂದಿರಾ ಕಾಟೇಜ್ ಮತಗಟ್ಟೆಯಲ್ಲಿ 4 ಮತಗಳನ್ನಷ್ಟೇ ಗಳಿಸಿದ್ದಾರೆ.

ಈ ಮತಗಟ್ಟೆಗಳಲ್ಲಿ ಕನಿಷ್ಠ 491, ಗರಿಷ್ಠ 1072 ಮತಗಳು ಚಲಾವಣೆಯಾಗಿವೆ. ಈ ಮತಗಟ್ಟೆಗಳಲ್ಲಿ ಡಿ.ಕೆ. ಸುರೇಶ್ ಅವರು ಸಿಂಹಪಾಲು ಮತಗಳನ್ನು ಪಡೆದುಕೊಂಡಿದ್ದಾರೆ.

ಹಾಗೆಯೇ ಮಂಜುನಾಥ್ ಅವರ ಸಾವಿರಕ್ಕೂ ಅಧಿಕ ಮತಗಳು ಚಲಾವಣೆಯಾಗಿರುವ ನಗರದ ಟಿಪ್ಪುನಗರ-2 ಮತಗಟ್ಟೆಯಲ್ಲಿ 11 ಮತ, ಬಡಾಮಕಾನ್-1ರಲ್ಲಿ 10 ಮತ, ಪೇಟ ಟೌನ್-2 ಮತಗಟ್ಟೆಯಲ್ಲಿ 20 ಮತ, ಯಾರಬ್ ನಗರ ಮತಗಟ್ಟೆಯಲ್ಲಿ 10 ಮತ, ಕಲಾನಗರ ಮತಗಟ್ಟೆಯಲ್ಲಿ 11 ಮತ ಪಡೆದಿದ್ದಾರೆ. ಇಲ್ಲಿಯೂ ಸಹ ಡಿ.ಕೆ. ಸುರೇಶ್ ಅವರು ಪ್ರತಿ ಮತಗಟ್ಟೆಯಲ್ಲಿಯೂ ಬಹುಪಾಲು ಮತ ಪಡೆದುಕೊಂಡಿರುವುದು ವಿಶೇಷವಾಗಿದೆ.

ಈ ಮತಗಟ್ಟೆಗಳಲ್ಲಿ ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಸಾವಿರಾರು ಮತಗಳನ್ನು ಪಡೆದಿದ್ದರು. ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರು ಸಿಂಗಲ್ ನಂಬರ್ ಮತಗಳನ್ನು ಪಡೆದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT