ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛಗೊಂಡಿತು ಮಾಕಳಿ ಬೆಟ್ಟದ ಕಲ್ಯಾಣಿ...

Last Updated 29 ನವೆಂಬರ್ 2019, 12:40 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಒಂದು ವರ್ಷಗಳ ಕಾಲ ನಿರಂತರವಾಗಿ ಪ್ರತಿ ಭಾನುವಾರ ಶ್ರಮದಾನ ನಡೆಸುವ ಮೂಲಕ ಮಾಕಳಿ ದುರ್ಗ ಬೆಟ್ಟದ ಮೇಲಿದ್ದ ಐತಿಹಾಸಿಕ ಕಲ್ಯಾಣಿಯನ್ನು ‌ಮಲ್ಲೇಶ್ವರಸ್ವಾಮಿ ಟ್ರಸ್ಟ್‌ ಹಾಗೂ ಪರಿಸರ ಆಸಕ್ತ ತಂಡ ಪುನುರುಜ್ಜೀವನಗೊಳಿಸಿದೆ. ಇದರ ಫಲವಾಗಿ ಬೆಟ್ಟದ ಮೇಲಿನ ಕಲ್ಯಾಣಿಯಲ್ಲಿ ಮಳೆ ನೀರು ಸಂಗ್ರಹವಾಗಿದೆ.

ಈ ಕುರಿತು ಮಾಹಿತಿ ನೀಡಿದ ಟ್ರಸ್ಟ್‌ನ ಅಧ್ಯಕ್ಷ ಮಂಜುನಾಥರೆಡ್ಡಿ, 4,000ಅಡಿಯಷ್ಟು ಎತ್ತರದ ಮಾಕಳಿ ಬೆಟ್ಟದಲ್ಲಿ 200ವರ್ಷಗಳ ಹಿಂದೆಯೇ ಸ್ಥಳೀಯ ಕಲ್ಲುಗಳನ್ನೇ ಬಳಸಿ ಈ ಕಲ್ಯಾಣಿ ನಿರ್ಮಿಸಲಾಗಿದೆ. ಇದರಲ್ಲಿ ಎರಡು ಕಲ್ಯಾಣಿಗಳು ಬೃಹತ್‌ ಬಂಡೆ ಕಲ್ಲಿನ ನಡುವೆ ಸಹಜ ಸ್ಥಿತಿಯಲ್ಲಿವೆ. ಇದರಲ್ಲಿ ತುಂಬಿದ್ದ ಹೂಳು ಹೊರತೆಗೆದು ಸ್ವಚ್ಛಗೊಳಿಸಲಾಗಿದೆ. 30 ಭಾನುವಾರಗಳಂದು ‌‌‌‌‌‌ಈ ಕೆಲಸಕ್ಕಾಗಿ ತಂಡದ ಸದಸ್ಯರು ಶ್ರಮಿಸಿದ್ದಾರೆ. ಈ ನೀರು ನೇರವಾಗಿ ಕುಡಿಯಲು ಸಾಧ್ಯವಿಲ್ಲ. ಆದರೆ,ಪ್ರಾಣಿ ಮತ್ತು ಪಕ್ಷಿಗಳ ನೀರಿನ ದಾಹ ನೀಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT