ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ

ನ್ಯಾಯಬೆಲೆ ಅಂಗಡಿ ಕುರಿತು ವಿಶೇಷ ಗ್ರಾಮಸಭೆ
Last Updated 28 ಫೆಬ್ರುವರಿ 2020, 13:24 IST
ಅಕ್ಷರ ಗಾತ್ರ

ವಿಜಯಪುರ: ‘ನ್ಯಾಯಬೆಲೆ ಅಂಗಡಿಗಳ ಮೂಲಕ ಗ್ರಾಹಕರಿಗೆಸರ್ಕಾರ ಒದಗಿಸುತ್ತಿರುವ ಎಲ್ಲ ಸೌಲಭ್ಯಗಳನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ನ್ಯಾಯಬೆಲೆ ಅಂಗಡಿ ಮಾಲೀಕ ಜೆ.ಎನ್.ಶ್ರೀನಿವಾಸ್ ಹೇಳಿದರು.

ಇಲ್ಲಿನ ರಾಯಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ವಿಶೇಷ ಗ್ರಾಮಸಭೆ ಹಾಗೂ ನ್ಯಾಯಬೆಲೆ ಅಂಗಡಿ ಮೇಲ್ವಿಚಾರಣೆ ಮಾಡಲು ನಾಗರಿಕ ಸನ್ನದ್ದುದಾರರ ನೇಮಕಾತಿ ಸಭೆಯಲ್ಲಿ ಅವರು ಮಾತನಾಡಿದರು.

‘ಸರ್ಕಾರದಿಂದ ಗ್ರಾಹಕರಿಗೆ ವಿತರಣೆ ಮಾಡಲು ನೀಡುವ ಎಲ್ಲ ಆಹಾರ ಧಾನ್ಯಗಳನ್ನು ಸಮರ್ಪಕವಾಗಿ ವಿತರಣೆ ಮಾಡಲಾಗುತ್ತಿದೆ. ಪಡಿತರ ಚೀಟಿದಾರರ ಕುಟುಂಬದವರಿಂದ ಬಯೋಮೆಟ್ರಿಕ್ ಪಡೆದು ಆಹಾರ ಧಾನ್ಯಗಳ ವಿತರಣೆ ಮಾಡುತ್ತಿರುವುದರಿಂದ ದುರುಪಯೋಗವಾಗಲು ಸಾಧ್ಯವಿಲ್ಲ. ಗ್ರಾಹಕರು ಕೂಡಾ ಒಂದು ತಿಂಗಳು ಬಯೋಮೆಟ್ರಿಕ್ ನೀಡದಿದ್ದರೆ, ಅವರ ಕಾರ್ಡಿಗೆ ಬಂದಿರುವ ಆಹಾರ ಧಾನ್ಯಗಳನ್ನು ಸೇರಿಸಿ ಮುಂದಿನ ತಿಂಗಳಿಗೆ ಬೇಡಿಕೆ ಪಟ್ಟಿ ಸಲ್ಲಿಸುವುದರಿಂದ ಸೋರಿಕೆಯಿಲ್ಲದಂತಾಗಿದೆ. ಈ ಬಗ್ಗೆ ಗ್ರಾಹಕರು ಗಮನಹರಿಸಿ ನಿಮ್ಮ ಪಡಿತರ ಆಹಾರ ಧಾನ್ಯಗಳನ್ನು ಕಡ್ಡಾಯವಾಗಿ ಪಡೆಯಬೇಕು. ವೃದ್ಧರಿಗೆ ಕುರ್ಚಿಗಳನ್ನೂ ವ್ಯವಸ್ಥೆ ಮಾಡಲಾಗುತ್ತಿದೆ. ಗ್ರಾಹಕರು ಪಡಿತರ ಚೀಟಿಗಳಲ್ಲಿ ಆಗಬೇಕಾಗಿರುವ ತಿದ್ದುಪಡಿಗಳನ್ನು ಸರಿಪಡಿಸಿಕೊಳ್ಳಬೇಕು’ ಎಂದರು.

ಮುಖಂಡ ವಿ.ಎನ್.ರಮೇಶ್ ಮಾತನಾಡಿ, ‘ನ್ಯಾಯಬೆಲೆ ಅಂಗಡಿಗೆ ಬರುವ ಗ್ರಾಹಕರಿಗೆ ಅಗತ್ಯವಾಗಿರುವ ಮೂಲಸೌಕರ್ಯಗಳನ್ನು ಒದಗಿಸುವತ್ತ ಹೆಚ್ಚು ಗಮನಹರಿಸಬೇಕು. ಆಹಾರಧಾನ್ಯಗಳು ವಿತರಣೆ ಮಾಡುವ ಜಾಗದಲ್ಲಿ ಸ್ವಚ್ಛತೆ ಕಾಪಾಡಬೇಕು. ಪ್ರತಿ ತಿಂಗಳು ಎಷ್ಟು ಆಹಾರ ಧಾನ್ಯಗಳು ದಾಸ್ತಾನು ಬಂದಿದೆ. ಎಷ್ಟು ಕಾರ್ಡುದಾರರು ಇದನ್ನು ಪಡೆಯಲಿದ್ದಾರೆ ಎನ್ನುವ ಕುರಿತು ನೋಟಿಸ್ ಬೋರ್ಡ್‌ನಲ್ಲಿ ಮಾಹಿತಿ ದಾಖಲಿಸಿದರೆ ಮತ್ತಷ್ಟು ಪ್ರಯೋಜನವಾಗಲಿದೆ’ ಎಂದರು.

ಚಿಗುರು ಸಂಸ್ಥೆಯ ಸಂಚಾಲಕಿ ಭಾಗ್ಯಮ್ಮ ಮಾತನಾಡಿ, ‘ಸರ್ಕಾರ ಮತ್ತು ಜನರ ಮಧ್ಯೆ ಸೇತುವೆಯಾಗಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ನ್ಯಾಯ ಬೆಲೆ ಅಂಗಡಿಗಳಲ್ಲಿ ಬರುವ ಎಲ್ಲ ಗ್ರಾಹಕರನ್ನು ಕೂರಿಸಿ ಒಂದೇ ವೇದಿಕೆಯಲ್ಲಿ ಮುಖಾಮುಖಿ ಚರ್ಚೆ ಮಾಡಿಸುವುದರ ಮೂಲಕ ಸರ್ಕಾರದ ಸೇವಾ ಸೌಲಭ್ಯಗಳು ದುರ್ಬಳಕೆ ಆಗದಂತೆ ಜನರಲ್ಲಿ ನೋಡಿಕೊಂಡು ಮನವರಿಕೆ ಮಾಡಿಕೊಡುವ ಕೆಲಸ ಮಾಡಲಾಗುತ್ತದೆ’ ಎಂದರು.

ಲಕ್ಷ್ಮೀನಾರಾಯಣ, ಶ್ರೀನಿವಾಸ್, ಪಾರಿಜಾತ, ಲಕ್ಷ್ಮೀ, ಮಂಜುಳಾ, ಸರಸ್ವತಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT