ಭಾನುವಾರ, ಸೆಪ್ಟೆಂಬರ್ 19, 2021
29 °C
ಸೋಮತನಹಳ್ಳಿ ಹಾಲು ಉತ್ಪಾದಕರ ಸಂಘದ ಸಭೆ

ಹೈನುಗಾರಿಕೆ ಉದ್ಯಮವಾಗಿ ಪರಿಗಣಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ವಿಜಯಪುರ: ಹೈನುಗಾರಿಕೆಯನ್ನು ಉದ್ಯಮವನ್ನಾಗಿ ಮಾಡಿಕೊಂಡು ಲಾಭದಾಯಕವಾಗಿ ಮಾಡಿಕೊಳ್ಳಬೇಕು ಎಂದು ಸೋಮತ್ತನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗಂಗಾಧರ್ ಹೇಳಿದರು.

ಸೋಮತನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 2017–18 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿದರು.

ಹೈನುಗಾರಿಕೆಯನ್ನು ನಿಷ್ಠೆಯಿಂದ ಮಾಡಿದರೆ ಅದರಲ್ಲಿ ಉತ್ತಮವಾದ ಲಾಭ ಗಳಿಸಲು ಅವಕಾಶವಿದೆ. ಸಂಘಕ್ಕೆ ಗುಣಮಟ್ಟದ ಹಾಲು ಪೂರೈಕೆ ಮಾಡುವುದರಿಂದ ಸಂಘದ ಜೊತೆಯಲ್ಲೇ ಉತ್ಪಾದಕರೂ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.

ಬಮೂಲ್ ಉಪಾಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಉತ್ತಮ ಹಾಲು ಶೇಖರಣೆ ಮಾಡಿದರೆ ಮಾತ್ರ ಸಂಘಕ್ಕೆ ತಾಲ್ಲೂಕಿನಲ್ಲಿ ಹೆಸರು ಬರಲು ಸಾಧ್ಯ. ಸಹಕಾರಿ ಸಂಘಗಳು ಸದಾ ರೈತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಬೇಕಾಗಿದೆ ಎಂದರು.

ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಹೆಚ್ಚಿನ ಬೆಲೆ ನೀಡಿ ರೈತರಿಂದ ಹಾಲು ಖರೀದಿ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಟೆಟ್ರಾ ಪ್ಯಾಕೆಟ್‌ಗಳಲ್ಲಿ ಪರಿವರ್ತನೆ ಮಾಡಲಾಗುತ್ತದೆ. 1 ತಿಂಗಳ ಒಳಗೆ ಕನಕಪುರದಲ್ಲಿ ಹಾಲಿನ ಪುಡಿ ಮಾಡುವ ₹ 550 ಕೋಟಿ ಖರ್ಚಿನಲ್ಲಿ ಹಾಲಿನ ಕಾರ್ಖಾನೆ ನಿರ್ಮಾಣವಾಗಲಿದೆ ಎಂದರು.

ಸಂಘದ ಕಾರ್ಯನಿರ್ವಹಣಾಧಿಕಾರಿ ಗೋಪಿನಾಥ್ ಮಾತನಾಡಿ, ಸಂಘಕ್ಕೆ 2017–18ನೇ ಸಾಲಿಗೆ ಸುಮಾರು ₹ 10.28 ಲಕ್ಷ ನಿವ್ವಳ ಲಾಭ ಬಂದಿದೆ ಎಂದು ಮಾಹಿತಿ ನೀಡಿದರು.

ದೇವನಹಳ್ಳಿ ಶಿಬಿರ ಉಪವ್ಯವಸ್ಥಾಪಕ ಡಾ. ಎಂ. ಗಂಗಯ್ಯ, ಉಪಾಧ್ಯಕ್ಷೆ ಮಂಜುಳ, ನಿರ್ದೇಶಕರಾದ ಲಲಿತಮ್ಮ, ಕೆ.ನಂಜೇಗೌಡ, ಮರಿಯಪ್ಪ, ಚಂದ್ರಶೇಖರ್, ರಾಮಾಂಜನೇಯ, ಎಂ.ವೆಂಕಟೇಶ್, ಕೃಷ್ಣಪ್ಪ, ಮುನಿಶಾಮಪ್ಪ, ಮುನಿವೆಂಕಟಪ್ಪ, ಹಾಲು ಪರೀಕ್ಷಕ ಎಸ್.ಟಿ.ಮುನಿರಾಜು, ಚನ್ನಕೇಶವ, ಶುಚಿಗಾರ ಹನುಮಂತ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು