ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 90ರಷ್ಟು ಮತದಾನ

Last Updated 29 ಅಕ್ಟೋಬರ್ 2020, 3:46 IST
ಅಕ್ಷರ ಗಾತ್ರ

ದೇವನಹಳ್ಳಿ: ಗ್ರಾಮಾಂತರ ಜಿಲ್ಲೆಯಾದ್ಯಂತ ಬುಧವಾರ ವಿಧಾನ ಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ನಡೆದ ಮತದಾನ ಬೆಳಿಗ್ಗೆ ಮಂದಗತಿಯಲ್ಲಿ ಸಾಗಿತ್ತು. ಮಧ್ಯಾಹ್ನದ ನಂತರ ಚುರುಕು ಪಡೆದುಕೊಂಡಿತು.

ಜಿಲ್ಲೆಯ ನಾಲ್ಕು ತಾಲ್ಲೂಕುಗಳ ವ್ಯಾಪ್ತಿ 2,268 ಮತದಾರರಿದ್ದು ಈ ಪೈಕಿ ಬೆಳಿಗ್ಗೆ 10ಕ್ಕೆ 305 ಮತದಾರರು (ಶೇಕಡ 13.4) ಮತ ಚಲಾಯಿಸಿದರು. ಮಧ್ಯಾಹ್ನ 12ಕ್ಕೆ ಒಟ್ಟು 1,042 ಮತಗಳು ಚಲಾವಣೆಯಾಗಿದ್ದು ಶೇಕಡ 45.94ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 2ಗಂಟೆಯ ನಂತರ 1,638 ಮತಗಳು ಚಲಾವಣೆಗೊಂಡು ಶೇಕಡ 72ರಷ್ಟು ಮತದಾನವಾಗಿತ್ತು. ಸಂಜೆ 4ಕ್ಕೆ 1,963 ಮತ ಚಲಾಯಿಸುವ ಮೂಲಕ ಶೇಕಡ 87ರಷ್ಟು ಮತದಾನವಾಗಿತ್ತು.

ಸಂಜೆ 5 ಗಂಟೆಗೆ ಒಟ್ಟು 2,031 ಮತದಾರರು ಮತ ಚಲಾಯಿಸಿದ್ದು ಶೇಕಡ 90ರಷ್ಟು ಶಾಂತಿಯುತ ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT