ಗ್ರಾಮಾಂತರ ಜಿಲ್ಲೆಯಲ್ಲೇ  ಸದೃಢವಾಗಿರುವ ಸಂಘ

7

ಗ್ರಾಮಾಂತರ ಜಿಲ್ಲೆಯಲ್ಲೇ  ಸದೃಢವಾಗಿರುವ ಸಂಘ

Published:
Updated:
Deccan Herald

ದೊಡ್ಡಬಳ್ಳಾಪುರ: ‘ಸಹಕಾರಿ ಸಂಘದಲ್ಲಿ ಸೇವೆ ಸಲ್ಲಿಸಲು ಸಾಕಷ್ಟು ಅವಕಾಶ ಇದ್ದು ಇದನ್ನು ಸಮಪರ್ಕವಾಗಿ ಬಳಸಿಕೊಂಡಿದ್ದೇನೆ. ಸಂಸ್ಥೆಯ ಬೆಳವಣಿಗೆಯೊಂದಿಗೆ ನನ್ನ ಬದುಕನ್ನು ಕಟ್ಟಿಕೊಂಡಿರುವ ತೃಪ್ತಿ ಇದೆ’ ಎಂದು ತಾಲ್ಲೂಕು ವ್ಯವಯೋತ್ಪನ್ನ ಮಾರಾಟ ಸಹಕಾರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಟಿ.ವೆಂಕಟರಾಮಯ್ಯ ಹೇಳಿದರು.

ಅವರು ಸಂಘದ ಕಚೇರಿಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸಂಘದ ನಿರ್ದೇಶಕರು ಹಾಗೂ ಸಿಬ್ಬಂದಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

‘ಗ್ರಾಮಾಂತರ ಜಿಲ್ಲೆಯಲ್ಲಿಯೇ ಆರ್ಥಿಕವಾಗಿ ಸದೃಢವಾಗಿರುವ ಸಹಕಾರಿ ಸಂಸ್ಥೆ ಎನ್ನುವ ಕೀರ್ತಿಗೆ ನಮ್ಮ ಸಂಘ ಪಾತ್ರವಾಗಿದೆ. ಸಂಘದ ವತಿಯಿಂದ ಹೊಸದಾಗಿ ವಾಣಿಜ್ಯ ಮಳಿಗೆಗಳನ್ನುನಿರ್ಮಿಸಿರುವುದರಿಂದ ಇಂದಿನ ಕಾಲಕ್ಕೆ ತಕ್ಕಂತೆ ವಾಣಿಜ್ಯ ಮಳಿಗೆಗಳನ್ನು ಸಿದ್ದಗೊಳಿಸಿ ಹೊಸ ವ್ಯಾಪಾರ ವಹಿವಾಟುಗಳನ್ನು ಆರಂಭಿಸಲು ಅವಕಾಶಗಳಿವೆ. ತಾಲ್ಲೂಕಿನ ಹಿರಿಯ ರಾಜಕಾರಣಿಗಳು ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವನ್ನು ನಗರದ ಕೇಂದ್ರ ಸ್ಥಳದಲ್ಲಿ ನಿರ್ಮಿಸಿದ್ದರಿಂದ ಇಂದು ವ್ಯಾಪಾರ ವಹಿವಾಟಿಗೆ ಹೆಚ್ಚಿನ ಅನುಕೂಲವಾಗಿದೆ’ ಎಂದರು.

ನೂತನ ಕಾರ್ಯದರ್ಶಿಯಾಗಿ ಎಚ್‌.ಆನಂದರಾಮಯ್ಯ ಅಧಿಕಾರ ವಹಿಸಿಕೊಂಡರು. ಅಧ್ಯಕ್ಷ ಬಿ.ಅಶ್ವತ್ಥನಾರಾಯಣ, ಉಪಾಧ್ಯಕ್ಷೆ ಜಯಭಾರತಿ ಅರವಿಂದ, ಸಂಘದ ನಿರ್ದೇಶಕರು ಹಾಗೂ ಸಿಬ್ಬಂದಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !