ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೆಲಮಂಗಲ: ₹13 ಕೋಟಿ ಅನುದಾನದಲ್ಲಿ ಮುಖ್ಯರಸ್ತೆ ಮೇಲ್ದರ್ಜೆಗೆ

Published : 20 ಆಗಸ್ಟ್ 2024, 0:18 IST
Last Updated : 20 ಆಗಸ್ಟ್ 2024, 0:18 IST
ಫಾಲೋ ಮಾಡಿ
Comments

ನೆಲಮಂಗಲ: ‘ಪಟ್ಟಣದ ಮುಖ್ಯರಸ್ಥೆ ಯನ್ನು ₹13 ಕೋಟಿ ವಿಶೇಷ ಅನುದಾನ ದಲ್ಲಿ ಮೇಲ್ದರ್ಜೆಗೇರಿಸಿ ಚತುಷ್ಪಥ ರಸ್ತೆ ಯನ್ನಾಗಿಸಲಾಗುವುದು‘ ಎಂದು ಶಾಸಕ ಎನ್‌.‍ಶ್ರೀನಿವಾಸ್‌ ತಿಳಿಸಿದರು.

ಪಟ್ಟಣದ ಪವಾಡ ಬಸವಣ್ಣದೇವರ ಮಠದಲ್ಲಿ ತಾಲ್ಲೂಕು ವಿರಶೈವ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ, ವೀರಶೈವ ಮಹಾಸಭಾ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಗರಸಭೆ ನೂತನ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು ಅವರನ್ನು ಅಭಿನಂದಿಸಿ ಮಾತನಾಡಿದರು.

ನಗರದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುವುದಾಗಿ ಭರವಸೆ ನೀಡಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪೂರ್ಣಿಮಾ ಸುಗ್ಗರಾಜು, ‘ನಗರಸಭೆಯ ಸರ್ವ ಸದಸ್ಯರ ಸಹಕಾರದೊಂದಿಗೆ ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸುತ್ತೇನೆ’ ಎಂದು ತಿಳಿಸಿದರು.

ಬಸವಣ್ಣದೇವರ ಮಠದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ನಾರಾಯಣಗೌಡ, ಮಹಾಸಭಾ ಅಧ್ಯಕ್ಷ ಎನ್‌.ರಾಜಶೇಖರ್‌, ನೌಕರರ ಸಂಘದ ಅಧ್ಯಕ್ಷ ಪರಮೇಶ್‌ ಅದರಂಗಿ, ನಿವೃತ್ತರ ಸಂಘದ ಅಧ್ಯಕ್ಷ ನಾಗರಾಜು, ತ್ಯಾಮಗೊಂಡ್ಲು ಕಾಲುವೆ ಮಠ, ಗುಡೆಮಾರನಹಳ್ಳಿ, ಜಗ್ಗಣ್ಣಯ್ಯಮಠ, ಮಾಗಡಿ ಬಂಡೆಮಠದ ‍ಶ್ರೀಗಳು, ಪುರಸಭೆ ಮಾಜಿ ಅಧ್ಯಕ್ಷ ಆರ್‌.ಉಮಾಶಂಕರ್‌, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ.ಪ್ರದೀಪ್‌, ಮುಖಂಡರಾದ ಎನ್‌.ಎಸ್‌.ನಟರಾಜು, ಎನ್‌.ಬಿ.ದಯಾಶಂಕರ್‌ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT