ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸ್ತುತ ವರ್ಷ ಮೊದಲ ಬಾರಿಗೆ ಒಲಂಪಿಕ್ಸ್ 

Last Updated 26 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ದೇವನಹಳ್ಳಿ: ರಾಜ್ಯದಲ್ಲಿ ಮೊದಲ ಬಾರಿಗೆ ಪ್ರಸ್ತುತ ವರ್ಷದಲ್ಲಿ ಸ್ಕೌಟ್ಸ್ ಒಲಂಪಿಕ್ಸ್ ನಡೆಸಲಾಗುತ್ತದೆ ಎಂದು ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ನಾಗರಾಜ್ ಹೇಳಿದರು.

ಇಲ್ಲಿನ ಲಯನ್ಸ್ ಸೇವಾ ಭವನದಲ್ಲಿ ಗೈಡ್ಸ್ ಜಿಲ್ಲಾ ಘಟಕ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಭಾಗಿತ್ವದಲ್ಲಿ ನಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಗೀತ ಗಾಯನ ಸ್ವರ್ಧೆ, ಸದ್ಭಾವನಾ ದಿನಾಚರಣೆ ಹಾಗೂ ಚಿತ್ರಕಲಾ ಸ್ವರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಲಂಪಿಕ್ಸ್ ಎಲ್ಲಿ ಹಾಗೂ ಯಾವಾಗ ಎಂಬುದು ಇನ್ನೂ ನಿರ್ಧಾರ ಆಗಿಲ್ಲ. ಇದನ್ನು ರಾಜ್ಯ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.

ವಿಶ್ವಮಟ್ಟದಲ್ಲಿ ಕಾರ್ಯ ಕ್ಷೇತ್ರವನ್ನು ವಿಸ್ತರಿಸಿಕೊಂಡಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳು ಸಾರ್ವಜನಿಕ ಶಿಕ್ಷಣ ಇಲಾಖೆಯೊಂದಿಗೆ ಸಂಯೋಜನೆಗೊಂಡನಂತರ ವಿದ್ಯಾರ್ಥಿಗಳಲ್ಲಿ ಶಿಸ್ತು ಸಮಯ ಪಾಲನೆ ಜೊತೆಗೆ ನಾಲ್ಕು ಗೋಡೆಯ ಕೊಠಡಿಯಿಂದ ಹೊರ ಕರೆದು ಆನೇಕ ಶೈಕ್ಷಣಿಕ ಪೂರಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಮಕ್ಕಳಲ್ಲಿ ಪ್ರೇರಣೆ ನೀಡುತ್ತಿದೆ ಎಂದು ಹೇಳಿದರು.

ದೇಶ ಭಕ್ತಿ, ನೆಲದ ಭಾಷೆ, ರಾಷ್ಟ್ರಧ್ವಜ ಮತ್ತು ಗೀತೆಗಳನ್ನು ಯಾವ ರೀತಿ ಗೌರವಿಸಬೇಕು, ರಾಷ್ಟ್ರ ನಾಯಕ ಆದರ್ಶ ವ್ಯಕ್ತಿತ್ವದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಗೈಡ್ಸ್ ಘಟಕಗಳಿಗೆ ಸೇರ್ಪಡೆಗೊಂಡು ಕ್ರಿಯಾಶೀಲರಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಉದ್ಘಾಟಿಸಿ ಮಾತನಾಡಿದ ಸಂಚಾರ ಪೊಲೀಸ್ ಇನ್ಸ್‌ಪೆಕ್ಟರ್ ವೈ.ಎಸ್. ಚಂದ್ರಶೇಖರ್, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಸಮಯ ಪಾಲನೆಗೆ ಒತ್ತು ನೀಡದಿದ್ದರೆ ಶೇ.100 ರಷ್ಟು ಅಂಕಗಳಿಸಿದರೂ ಪ್ರಯೋಜನವಿಲ್ಲ. ಯಾವುದೇ ಒಂದು ವೃತ್ತಿಗೆ ಶಿಕ್ಷಣದ ಅಂಕಗಳು ಮಾದಂಡವಾದರೂ ಉತ್ತಮ ಪ್ರಜೆಗಳಾಗಲು ಸನ್ನಡತೆ, ಸಾಮಾನ್ಯ ಜ್ಞಾನ, ಹಿರಿಯರಿಗೆ ಗೌರವ, ಶಿಸ್ತು ಬದ್ಧ ಜೀವನ ಇನ್ನೊಬ್ಬರಿಗೆ ಅದರ್ಶದಂತೆ ಇರಬೇಕು ಎಂದು ಹೇಳಿದರು.

ವಿದ್ಯಾರ್ಥಿ ಜೀವನದಲ್ಲಿ ಒಂದೊಂದು ಕ್ಷಣವು ಅಮೂಲ್ಯ ಕಳೆದುಹೋದ ಕಾಲ ಮತ್ತೆ ಸಿಗುವುದಿಲ್ಲ. ಸಮಯ ವ್ಯರ್ಥ ಮಾಡಿ ಪಶ್ಚಾತಾಪ ಪಡುವುದಕ್ಕಿಂತ ತಳ ಮಟ್ಟದ ಶಿಕ್ಷಣದಿಂದಲೇ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿಕೊಳ್ಳಬೇಕು ಎಂದರು.

ಭವಿಷ್ಯದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಅವಕಾಶಗಳಿವೆ, ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಗೈಡ್ಸ್ ರಾಜ್ಯ ಘಟಕ ಜಂಟಿ ಕಾರ್ಯದರ್ಶಿ ಬಿ.ಕೆ. ಬಸವರಾಜು, ಸಹಾಯಕ ಕಾರ್ಯದರ್ಶಿ ಲೋಕೇಶ್, ಜಿಲ್ಲಾ ಘಟಕ ಕಾರ್ಯದರ್ಶಿ ಶ್ರೀನಿವಾಸ್ ಪ್ರಸಾದ್, ಜಿಲ್ಲಾ ಘಟಕ ಖಜಾಂಚಿ ಎಸ್.ಸಿ. ಗೋಪಾಲಸ್ವಾಮಿ, ಗೈಡ್ಸ್ ಆಧ್ಯಕ್ಷೆ ವಿಜಯಕುಮಾರಿ, ಸಂಘಟನಾ ಆಯುಕ್ತ ವಿಜಯಕುಮಾರ್, ತಾಲ್ಲೂಕು ಘಟಕ ಗೌರವಾಧ್ಯಕ್ಷ ಮೋಹನ್ ಬಾಬು, ಕಾರ್ಯದರ್ಶಿ ಸೀತಾರಾಮ್, ಖಜಾಂಚಿ ಕೆ.ಮುನಿಯಪ್ಪ, ಪರಿಸರ ಘಟಕ ಆಯುಕ್ತ ವಿಜಯಕುಮಾರ್, ಲಯನ್ಸ್ ಅಧ್ಯಕ್ಷ ಶ್ರೀರಾಮಯ್ಯ, ಲಯನ್ ಸದಸ್ಯರಾದ ಸತೀಶ್ ಕುಮಾರ್, ಚಂದ್ರಪ್ಪ, ಸಿ. ಭಾಸ್ಕರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT