ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ

Last Updated 13 ಫೆಬ್ರುವರಿ 2020, 13:19 IST
ಅಕ್ಷರ ಗಾತ್ರ

ದೇವನಹಳ್ಳಿ: ಕನ್ನಡ ಪರ ಸಂಘಟನೆಗಳು ರಾಜ್ಯ ಬಂದ್‌ನಿಂದಾಗಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವಂತಾಯಿತು.

ಬಂದ್ ಆಗಬಹುದು ಎಂದು ಯೋಚನೆಯಿಂದ ನೂರಾರು ಪ್ರಯಾಣಿಕರು ಮುಂಜಾನೆ 3 ಕ್ಕೆ ವಿಮಾನನಿಲ್ದಾಣದ ಒಳಾಂಗಣದ ತಪಾಸಣಾ ಕೊಠಡಿ ಮುಂದೆ ಸರತಿ ಸಾಲಿನಲ್ಲಿ ನಿಂತು ನಂತರ ವಿಮಾನನಿಲ್ದಾಣ ಒಳಾಂಗಣದ ಸಭಾಂಗಣದಲ್ಲಿ ಜಮಾಯಿಸಿದ್ದರು. ಕುರ್ಚಿಗಳಿಲ್ಲದೆ ಹತ್ತಾರು ತಾಸು ಕುಳಿತಿದ್ದರು.

ದೂರವಾಣಿಯಲ್ಲಿ ಮಾತನಾಡಿದ ಪ್ರಯಾಣಿಕ ನರೇಂದ್ರ, ‘ಕರ್ನಾಟಕ ಬಂದ್ ನಡೆದಾಗ ಒಂದು ಬಾರಿ ಪ್ರತಿಭಟನೆ ವೇಳೆ ಸಿಲುಕಿ ವಿಮಾನನಿಲ್ದಾಣಕ್ಕೆ ಸಕಾಲದಲ್ಲಿ ತಲುಪದೆ ಪ್ರಯಾಣ ರದ್ದಾಗಿತ್ತು. ಮತ್ತೆ ಈ ರೀತಿ ಆದರೆ ಕಷ್ಟ ಎಂದು ಭಾವಿಸಿ ಬೆಳಗಿನ ಜಾಗ 3 ಗಂಟೆ ಬಂದು ಕುಳಿತುಕೊಂಡಿದ್ದೇನೆ. ನೂರಾರು ಪ್ರಯಾಣಿಕರಿಗೆ ಕುಳಿತುಕೊಳ್ಳಲು ಜಾಗವಿಲ್ಲ, ಗುರುವಾರ ಮಧ್ಯಾನ್ನ 3ಕ್ಕೆ ದೆಹಲಿಗೆ ಟಿಕೆಟ್ ಕಾಯ್ದಿರಿಸಿದ್ದೇನೆ’ ಎಂದು ಹೇಳಿದರು.

ಬಂದ್‌ಗೆ ತಾಲ್ಲೂಕಿನಲ್ಲಿ ಯಾವುದೇ ಪ್ರಗತಿಪರ ಸಂಘಟನೆಯೂ ಬೆಂಬಲ ವ್ಯಕ್ತಪಡಿಸಿಲ್ಲ; ಯಾವುದೇ ಮುಷ್ಕರ ನಡೆಯಲಿಲ್ಲ. ವಹಿವಾಟು ಯಥಾಸ್ಥಿತಿಯಲ್ಲಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT