ಶ್ರೀಕೃಷ್ಣ ಶಾಂತಿ ಸ್ಥಾಪನೆಯ ಮೂಲಪುರುಷ

7
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸರಳ ಜಯಂತಿ

ಶ್ರೀಕೃಷ್ಣ ಶಾಂತಿ ಸ್ಥಾಪನೆಯ ಮೂಲಪುರುಷ

Published:
Updated:
Deccan Herald

ಮಾಗಡಿ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಶ್ರೀಕೃಷ್ಣ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಶಾಸಕ ಎ. ಮಂಜುನಾಥ ಮಾತನಾಡಿ, ‘ಲೋಕನಾಯಕ ಶ್ರೀಕೃಷ್ಣ ಪರಮಾತ್ಮ ಶಾಂತಿ ಸ್ಥಾಪನೆಯ ಮೂಲಪುರುಷ. ಧರ್ಮದ ಮಾರ್ಗದಲ್ಲಿ ಇದ್ದವರನ್ನು ರಕ್ಷಣೆ ಮಾಡಿದ ಮಹಾನುಭಾವ’ ಎಂದರು.

ತಹಶೀಲ್ದಾರ್‌ ಎನ್‌. ಶಿವಕುಮಾರ್‌ ಮಾತನಾಡಿ, ಶ್ರೀಕೃಷ್ಣ ಒಂದು ಜಾತಿಗೆ ಸೇರಿದವನಲ್ಲ. ಅವರ ಅಮರ ಸಂದೇಶಗಳು ಸೂರ್ಯ ಚಂದ್ರರು ಇರುವ ತನಕ ಭೂಮಿಯ ಮೇಲಿನ ಜನರಲ್ಲಿ ಅನುರಣಿಸುತ್ತವೆ ಎಂದರು.

ಕೊಡಗು ನೈಸರ್ಗಿಕ ದುರಂತದ ಹಿನ್ನೆಲೆಯಲ್ಲಿ ಜಯಂತಿಯ ಹಣವನ್ನು ಸಂತಸ್ತ್ರರಿಗೆ ತಲುಪಿಸಲಾಗುವುದು. ಗೊಲ್ಲ ಸಮಾಜದ ಕೆಲವರು ನೀಡಿರುವ ಕಾಣಿಕೆ ಸೇರಿ ₹ 1 ಲಕ್ಷವನ್ನು ಜಿಲ್ಲಾಧಿಕಾರಿ ಮೂಲಕ ನಿರಾಶ್ರಿತರ ಶಿಬಿರಗಳಿಗೆ ಕಳಿಸಲಾಗುವುದು ಎಂದರು.

ಶ್ರೀಪತಿ ಹಳ್ಳಿ ದಾಖಲೆ ದೇವರ ಹಟ್ಟಿ ಲಕ್ಷ್ಮೀನರಸಿಂಹ ಸ್ವಾಮಿ ದೇವರ ಪೂಜಾರಿ ನಾರಾಯಣಪ್ಪ ಶ್ರೀಕೃಷ್ಣ ಪುತ್ಥಳಿಗೆ ಪೂಜೆ ಸಲ್ಲಿಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಹನುಮಂತರಾಯಪ್ಪ, ಬಾಚೇನ ಹಟ್ಟಿ ಗ್ರಾಮಪಂಚಾಯಿತಿ ಅಧ್ಯಕ್ಷ ಜಯಮ್ಮ ಕೆಂಚಪ್ಪ, ಪೋಲೋಹಳ್ಳಿ ತಿಮ್ಮಪ್ಪಸ್ವಾಮಿ ಪೂಜಾರಿ ತಮ್ಮಯಣ್ಣ, ಹುಲಿಯಪ್ಪನ ಹಟ್ಟಿ ಜುಂಜಪ್ಪ ಸ್ವಾಮಿ ಪೂಜಾರಿ ಮಹಲಿಂಗಯ್ಯ, ಜೆಡಿಎಸ್‌ ಮುಖಂಡ ಎಚ್‌.ಆರ್. ಕೆಂಪೇಗೌಡ, ಬಿ.ಆರ್‌. ಗುಡ್ಡೇಗೌಡ, ಅಶೋಕ್‌ ಉಪಸ್ಥಿತರಿದ್ದರು.

ಕಾಂಗ್ರೆಸ್‌ ಮುಖಂಡರಾದ ಕಮಲಮ್ಮ, ಅಡಕಮಾರನ ಹಳ್ಳಿ ಪ್ರಕಾಶ್‌, ಬಾಳೆಗೌಡ, ಶಿವಣ್ಣ, ಜಯರಾಮ್‌, ಮಾರುತಿ, ಪುಟ್ಟರಾಜು, ಶಿವಮೂರ್ತಿ,ವೀರಾಪುರ ಗೊಲ್ಲರ ಹಟ್ಟಿಯ ನಾಗರಾಜು,ದೇವರ ಹಟ್ಟಿ ರಾಜಣ್ಣ, ಕೃಷ್ಣಪ್ಪ, ಪಾಳ್ಯದ ಹಳ್ಳಿ ಗೊಲ್ಲರ ಹಟ್ಟಿ ಗಂಗಣ್ಣ, ಮಾನಗಲ್‌ ಶ್ರೀನಿವಾಸ್‌, ಕರಲಮಂಗಲ ನಾರಾಯಣ್‌, ವಿಠಲಾಪುರದ ಭಾಗ್ಯಮ್ಮ, ರಾಮಕೃಷ್ಣಯ್ಯ, ಅಜ್ಜನ ಹಳ್ಳಿ ಗೊಲ್ಲರ ಹಟ್ಟಿ ಸುರೇಶ್‌,ಬಿಇಒ ಸಿದ್ದೇಶ್ವರ, ತಾಲ್ಲೂಕು ಪಂಚಾಯಿತಿ ಇಒ ಚಂದ್ರು ಹಾಗೂ ಸರ್ಕಾರಿ ಅಧಿಕಾರಿಗಳು ಇದ್ದರು.

ಸರಸ್ವತಿ ವಿದ್ಯಾಮಂದಿರ ಪ್ರೌಢಶಾಲೆಯ ವತಿಯಿಂದ ಮಕ್ಕಳಿಗೆ ಶ್ರೀ ಕೃಷ್ಣನ ವೇಷಧರಿಸಿ ಬೆಳ್ಳಿರಥದಲ್ಲಿ ಕೂಡಿಸಿ ಮುಖ್ಯಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಗೌರೀಶ್‌, ತಿರುಮಲೆ ನಾರಾಯಣ ಸ್ವಾಮಿ, ಜುಟ್ಟನ ಹಳ್ಳಿ ಬಲರಾಮಯ್ಯ ಮುಖ್ಯಶಿಕ್ಷಕ ದೇವರಾಜು ಮೆರವಣಿಗೆಯಲ್ಲಿ ಸಾಗಿ ಬಂದರು. ವಾಸವಿ ಶಾಲೆ, ಬಾಲಾಜಿ ಶಾಲೆಯ ಮಕ್ಕಳಿಗೆ ಶ್ರೀಕೃಷ್ಣ ವೇಷ ಧರಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !