ಬುಧವಾರ, ಸೆಪ್ಟೆಂಬರ್ 18, 2019
28 °C

ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ

Published:
Updated:
Prajavani

ಕುದೂರು (ಮಾಗಡಿ): ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಗುರುವಾರ ನಡೆಯಿತು. ಹೋಬಳಿಯ ಶಾಲೆಗಳ ಮಕ್ಕಳಾದ ರಮ್ಯ, ವರಿನಾ ಸುಲ್ತನಾ, ಸಿಂಧೂ, ಐಶ್ವರ್ಯ, ಸುಮ, ಅಪ್ಪಾಜಿ, ಬಾಲಕೃಷ್ಣ, ಶ್ರೀನಿವಾಸ್‌, ಮಧು ಉತ್ತಮ ಪ್ರದರ್ಶನ ನೀಡಿದರು.

ಶ್ರೀಗಿರಿಪುರ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಗೋಪಾಲ್‌ ಉದ್ಘಾಟಿಸಿದರು. ಗುರುಕುಲ ವಿದ್ಯಾ ಮಂದಿರದ ಮುಖ್ಯ ಶಿಕ್ಷಕ ಕೇಶವಮೂರ್ತಿ, ಕೆಪಿಎಸ್‌ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ನಾಗರಾಜರಾವ್‌, ನೌಕರರ ಸಂಘದ ಮಂಜುನಾಥ್‌, ಜಗದೀಶ್‌ ರಾಠೋಡ್‌, ಹಿರಿಯರಾದ ಕಾಂತರಾಜು, ರಮೇಶ್‌, ಶಿವಣ್ಣ, ಮಹೇಶ್‌.ಆರ್‌ ಮಾತನಾಡಿದರು. ಗ್ರಾ.ಪಂ.ಅಧ್ಯಕ್ಷ ಕೆ.ಟಿ. ವೆಂಕಟೇಶ್‌ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿದ್ದರು.

Post Comments (+)