ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ಸದಸ್ಯ ಗಡಿಪಾರು ವಿರೋಧಿಸಿ ಪ್ರತಿಭಟನೆ

Published 23 ಏಪ್ರಿಲ್ 2023, 6:18 IST
Last Updated 23 ಏಪ್ರಿಲ್ 2023, 6:18 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರದ ಮುತ್ತೂರು ವಾರ್ಡ್‌ ನಗರಸಭೆ ಸದಸ್ಯ ಮುನಿರಾಜು ಅವರ ಗಡಿಪಾರು ವಿರೋಧಿಸಿ ವಾರ್ಡ್‌ನ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ಉತ್ತಮ ಜನ ಸೇವೆ ಮಾಡಿದ್ದರಿಂದಲೇ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಮುತ್ತೂರು ವಾರ್ಡ್‌ನಿಂದ ಮುನಿರಾಜು ಅವರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಆದರೆ ಮೂರು ರಾಜಕೀಯ ಪಕ್ಷದವರು ಸಹ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಬೆಂಬಲಿಸಿ ಪ್ರಚಾರದಲ್ಲಿ ಭಾಗವಹಿಸುವಂತೆ ಕೇಳಿದ್ದರು. ಇದಕ್ಕೆ ಒಪ್ಪದೇ ತಾವೇ ಸ್ವತಂತ್ರವಾಗಿ ವಿಧಾನಸಭಾ ಚುನಾವಣೆಗೂ ಸ್ಪರ್ಧಿಸುವ ತಯಾರಿ ನಡೆಸಿದ್ದರು. ಇದನ್ನು ಸಹಿಸದೇ ಪಿತೂರಿ ನಡೆಸಿದ್ದಾರೆ ಎಂದು ಪ್ರತಿಭಟನಗಾರರು ಆರೋಪಿಸಿದ್ದಾರೆ.

‘ಅವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸುವ ಮೂಲಕ ಗಡಿಪಾರು ಆಗುವಂತೆ ಮಾಡಿದ್ದಾರೆ‘ ಎಂದು ಸ್ಥಳೀಯ ನಿವಾಸಿಗಳಾದ ವಾಜಿದ್‌ಪಾಷ, ಮೂರ್ತಿ, ಪುರುಷೋತ್ತಮ್‌, ಶ್ರೀನಿವಾಸ್‌, ಆನಂದ್‌ಕುಮಾರ್‌ ದೂರಿದರು.

ಇದರಿಂದ ವಾರ್ಡ್‌ನಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ನಗರಸಭೆಯಿಂದ ಯಾವುದೇ ಕೆಲಸ ಆಗಬೇಕಿದ್ದರು ಕಚೇರಿಗೆ ಅಲೆಯುವಂತಾಗಿದೆ. ಗಡಿಪಾರು ಆದೇಶ ರದ್ದಾಗಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT