ಶುಕ್ರವಾರ, ನವೆಂಬರ್ 27, 2020
20 °C
ಸೂಲಿಬೆಲೆ, ನಂದಗುಡಿ ಹಾಗೂ ತಾವರೆಕೆರೆ ಸುತ್ತಮುತ್ತ ವರ್ಷಧಾರೆ

ಹೊಸಕೋಟೆ | ಮಳೆ: ಕೋಡಿ ಬಿದ್ದ ಕೆರೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೂಲಿಬೆಲೆ: ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ, ನಂದಗುಡಿ ಹಾಗೂ ತಾವರೆಕೆರೆ ಸುತ್ತಮುತ್ತಲು ಗುರುವಾರ ರಾತ್ರಿ ಭಾರಿ ಮಳೆಯಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.

ತಾವರೆಕೆರೆ ಗ್ರಾಮದ ಕೆರೆ ಕೋಡಿಯಲ್ಲಿ ನೀರು ಹರಿದು 20 ವರ್ಷ ಕಳೆದಿತ್ತು ಎಂದು ಹಿರಿಯರೊಬ್ಬರು ಹರ್ಷ ವ್ಯಕ್ತಪಡಿಸಿದರು. ಮಕ್ಕಳು, ವಯಸ್ಕರು ಕೆರೆ ಕೋಡಿಯ  ನೀರಿನಲ್ಲಿ ಕುಣಿದು ಕುಪ್ಪಳಿಸಿದರು.

ತಾವರೆಕೆರೆಯ ಕೆರೆಗೆ ಕೆ.ಸಿ.ವ್ಯಾಲಿಯ ನೀರು ಬಿಡಲಾಗುತ್ತಿದ್ದು, ಕೆರೆಯಲ್ಲಿ ನೀರು ಸಂಗ್ರಹವಾಗಿತ್ತು. ಅದರ ಜೊತೆಗೆ ಗುರುವಾರ ರಾತ್ರಿ ಪೂರ್ತಿ ಸುರಿದ ಭಾರಿ ಮಳೆಗೆ ಕೆರೆ ತುಂಬಿದೆ. ಮುಂದೆ ಕಾಲುವೆ ಮುಚ್ಚಿಹೋಗಿರುವುದರಿಂದ ಕೆಲವು ಹೊಲಗಳಿಗೆ ನೀರು ನುಗ್ಗಿದೆ. 

ಶುಕ್ರವಾರ ಬೆಳಿಗ್ಗೆವರೆಗೆ ಸೂಲಿಬೆಲೆಯಲ್ಲಿ 52.8 ಮಿ.ಮೀ, ಹೊಸಕೋಟೆ 25.8, ಜಡಿಗೇನಹಳ್ಳಿ 10.8 ಮಿ.ಮೀ ಮಳೆಯಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು