ಶಿಕ್ಷಕ ವಿದ್ಯಾರ್ಥಿಗಳ ನಡುವಿನ ಬಾಂಧವ್ಯ ಮಹತ್ವದ್ದು

7

ಶಿಕ್ಷಕ ವಿದ್ಯಾರ್ಥಿಗಳ ನಡುವಿನ ಬಾಂಧವ್ಯ ಮಹತ್ವದ್ದು

Published:
Updated:
Deccan Herald

ವಿಜಯಪುರ : ಶಿಕ್ಷಕ ವಿದ್ಯಾರ್ಥಿಗಳ ನಡುವಿನ ಬಾಂಧವ್ಯ ಮಹತ್ವದ್ದು, ಶಿಕ್ಷಕ ವಿದ್ಯಾರ್ಥಿಗಳಿಗೆ ಶಿಕ್ಷಣ ಧಾರೆ ಎರೆದು ಸಮಾಜಕ್ಕೆ ಸತ್ಪ್ರಜೆಗಳನ್ನು ನೀಡುತ್ತಾರೆ. ಗುರುಗಳನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ಶಿಕ್ಷಕ ಕಾಮಧೇನು ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ ಸೂರ್ಯನಾರಾಯಣ ಹೇಳಿದರು.

ಚನ್ನರಾಯಪಟ್ಟಣ ಹೋಬಳಿ ಬೆಟ್ಟಕೋಟೆ ರಾಮಕೃಷ್ಣ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸಮವಸ್ತ್ರ, ಕ್ರೀಡಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ಹಾಗೂ ಪೋಷಕರು, ಗುರುಗಳ ಆಶೀರ್ವಾದ ಪಡೆಯುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಬದುಕಿನಲ್ಲಿ ಹಲವಾರು ಶಿಕ್ಷಕರು ಬರಬಹುದು ಆದರೆ ಗುರುವೊಬ್ಬನೇ. ಇಂತಹ ಗುರುಗಳ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದರು.

ಶಿಕ್ಷಕ ದೀಪಕ್ ಮಾತನಾಡಿ, ತನ್ನಲ್ಲಿಗೆ ಆಧ್ಯಾತ್ಮಿಕ ಹುಡುಕಾಟಕ್ಕಾಗಿ ಬಂದವನನ್ನೇ ಶಿಷ್ಯನೆಂದು ಸ್ವೀಕರಿಸುತ್ತಾರೆ. ಎಲ್ಲರೂ ದೇವರ ಮಕ್ಕಳೇ ಆದರೆ, ನಿಧಾನವಾಗಿ ದೈನಂದಿನ ಜಂಜಡದಲ್ಲಿ ಸಿಕ್ಕು ಅಲ್ಲಿಂದ ದೂರ ಸರಿದು ದಿಕ್ಕುತಪ್ಪಿ ಅಲೆಯುವಾಗ ಮತ್ತೆ ಅಂಥವರನ್ನು ಪರಮಾರ್ಥದ ಹತ್ತಿರ ಕರೆತರುವ ಸಾಮರ್ಥ್ಯವಿರುವುದು ಗುರುವಿಗೆ ಮಾತ್ರವೇ  ಎಂದರು.

ಶಾಲಾ ಮುಖ್ಯ ಶಿಕ್ಷಕ ಕೆ.ಪ್ರಕಾಶ್ ಮಾತನಾಡಿ, ‘ನಮ್ಮ ಟ್ರಸ್ಟ್‌ ವತಿಯಿಂದ 7 ಶಾಲೆಗಳನ್ನು ದತ್ತು ಪಡೆದುಕೊಂಡು ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ಬ್ಯಾಗ್, ಸಮವಸ್ತ್ರ, ಕ್ರೀಡಾ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ’ ಎಂದರು.

ಶಾಲಾ ಮಕ್ಕಳು, ಪೋಷಕರು ಹಾಗೂ ಗುರುಗಳ ಕಾಲಿಗೆರಗಿ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು.

ನಿವೃತ್ತ ಶಿಕ್ಷಕ ಡಾ. ಯಾಚಿ ದೊಡ್ಡಯ್ಯ, ಕಾಮಧೇನು ಟ್ರಸ್ಟ್‌ನ ಪದಾಧಿಕಾರಿಗಳಾದ ಆದಿನಾರಾಯಣ, ಶಂಕರ್, ನಾಗರಾಜ್, ಚಂದ್ರಕಲಾ, ಅನಿಲ್‌ಗೌಡ, , ಸಹ ಶಿಕ್ಷಕ ರವಿಕುಮಾರ್, ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !