ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಲ್ವಾಮಾ ಹುತಾತ್ಮರಿಗೆ ನಮನ

Last Updated 16 ಫೆಬ್ರುವರಿ 2022, 6:56 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರಯೋಧರಿಗೆ ಕೇಂದ್ರೀಯ ಅರೆಸೇನಾಪಡೆಯ ಮಾಜಿ ಸೈನಿಕರ ಸಂಘದಿಂದ ನಮನ ಸಲ್ಲಿಸಲಾಯಿತು.

ಡಾ.ರಾಜ್‌ಕುಮಾರ್‌ ಕಲಾ ಮಂದಿರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಿಆರ್‌ಪಿಎಫ್ ಡಿಐಜಿ ಹಿಮಾಂಶ್‌ಕುಮಾರ್, ‘ಪುಲ್ವಾಮಾ ಘಟನೆ ನಡೆದ ಸಮಯದಲ್ಲಿ ಕಮಾಂಡೆಂಟ್ ಆಗಿದ್ದ ನಾನು ಪುಲ್ವಾಮಾ ಘಟನೆನಡೆದು ಅರ್ಧ ಗಂಟೆಯ ಮುನ್ನ ಇದೇ ಹಾದಿಯಲ್ಲಿ ಹಾದು ಹೋಗಿದ್ದೆ. ಅರ್ಧ ಗಂಟೆಯ ನಂತರಸ್ಫೋಟದ ವಿಚಾರ ತಿಳಿದು ಘಟನಾ ಸ್ಥಳಕ್ಕೆ ಹೋಗಿದ್ದೆ. ಬಾಂಬ್ಸ್ಫೋಟದಲ್ಲಿ ಹುತಾತ್ಮರಾದ ಯೋಧರ ಪತ್ತೆ ಮಾಡುವ ಕೆಲಸ ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಜವಾಬ್ದಾರಿಯನ್ನು ಹೊತ್ತಿದ್ದೆ’ ಎಂದು ಅಂದಿನ ತಮ್ಮ ಕೆಲವನ್ನು ನೆನಪು ಮಾಡಿಕೊಂಡರು.

ಹಿರಿಯ ಕನ್ನಡಪರ ಹೋರಾಟಗಾರ ತ.ನ.ಪ್ರಭುದೇವ ಮಾತನಾಡಿ, ‘ಯೋಧರ ಸೇವೆಯಿಂದಾಗಿ ಇಂದು ದೇಶದ ಒಳಗಿನ ನಾವೆಲ್ಲರು ಸುಭದ್ರವಾಗಿದ್ದೇವೆ. ಯಾವುದೇ ಸಂದರ್ಭದಲ್ಲಿಯೂ ತಮ್ಮ ಜೀವವನ್ನು ಪಣಕ್ಕಿಟ್ಟು ಹೋರಾಟ ಮಾಡುತ್ತಾರೆ ಯೋಧರು. ಇಂತಹವರ ಬಗ್ಗೆನಮ್ಮೆಲ್ಲರಿಗೂ ಗೌರವ, ಹೆಮ್ಮೆ ಇರಬೇಕು’ ಎಂದರು.

ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಸೈನಿಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಹನುಮಂತರಾಜು, ಗೌರವ ಅಧ್ಯಕ್ಷ ಡಿ.ಶಿವರಾಂ, ಉಪಾಧ್ಯಕ್ಷ ಮಾದಯ್ಯ, ಸಂಚಾಲಕ ಗಂಗಾಧರ್, ಶಿವಮೊಗ್ಗ ಜಿಲ್ಲಾ ಉಪಾಧ್ಯಕ್ಷ ರೂಕ್ಮ, ನಿರ್ದೇಶಕ ರಾಮಪ್ಪ, ಮಾಜಿ ಸೈನಿಕರಾದ ಸುನೀಲ್‌ಕುಮಾರ್, ಶ್ರೀನಿವಾಸ ಹೀರೇಸ್ವಾಮಿ, ಎಚ್.ಎಸ್.ಸೊಂಬಯ್ಯ, ರಮೇಶ್‌ ಮಣ್ಣೆ, ಬಿ.ಜಿ.ಅಮರನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT