ಕನಸವಾಡಿ: ಭಕ್ತಾದಿಗಳಿಂದ ಶನಿಮಹಾತ್ಮ ಸ್ವಾಮಿ ದರ್ಶನ

7

ಕನಸವಾಡಿ: ಭಕ್ತಾದಿಗಳಿಂದ ಶನಿಮಹಾತ್ಮ ಸ್ವಾಮಿ ದರ್ಶನ

Published:
Updated:
Deccan Herald

ಕನಸವಾಡಿ (ದೊಡ್ಡಬಳ್ಳಾಪುರ): ತಾಲ್ಲೂಕಿನ ಕನಸವಾಡಿ ಪುಣ್ಯಕ್ಷೇತ್ರದ ಶ್ರೀಶನಿಮಹಾತ್ಮ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಶ್ರಾವಣ ಮಾಸದ ವಿಶೇಷ ಪೂಜೆಗಳು ಆರಂಭವಾಗಿವೆ.

ಶ್ರಾವಣ ಮಾಸದ ಮೊದಲನೇ ಶನಿವಾರ ಸಾವಿರಾರು ಜನ ಭಕ್ತಾದಿಗಳು ಕನಸವಾಡಿ ಶನಿಮಹಾತ್ಮ ದೇವಾಲಯದಲ್ಲಿ ಬೆಳಿಗ್ಗೆ 3ರಿಂದ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಶ್ರಾವಣ ಮಾಸದ ಶನಿವಾರಗಳಂದು ಇಲ್ಲಿ ಜಾತ್ರೆಯ ವಾತಾವರಣವಿರುತ್ತದೆ. ಸಹಸ್ರಾರು ಭಕ್ತಾದಿಗಳು ಶ್ರೀ ಶನಿಮಹಾತ್ಮಸ್ವಾಮಿ ಹಾಗೂ ಜೇಷ್ಠಾದೇವಿಯ ದರ್ಶನ ಪಡೆಯುತ್ತಾರೆ.

ತಾಲ್ಲೂಕಿನ ಅರಳುಮಲ್ಲಿಗೆಯ ಲಕ್ಷ್ಮೀಚೆನ್ನಕೇಶವಸ್ವಾಮಿ ದೇವಾಲಯ, ನಗರದ ನೆಲದಾಂಜನೇಯಸ್ವಾಮಿ ದೇವಾಲಯ, ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ವೆಂಕಟರಮಣಸ್ವಾಮಿ ದೇವಾಲಯ ಮತ್ತಿತರೆ ಕಡೆ ಶ್ರಾವಣ ಮಾಸದ ಅಂಗವಾಗಿ ವಿಶೇಷ ಅಲಂಕಾರ ಮತ್ತು ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ನೂರಾರು ಜನ ಭಕ್ತಾದಿಗಳು ಬೆಳಿಗ್ಗೆಯಿಂದ ದೇವರ ದರ್ಶನ ಪಡೆದರು.

ಶಾಸಕರಿಂದ ವಿಶೇಷ ಪೂಜೆ: ಕನಸವಾಡಿ ಪುಣ್ಯಕ್ಷೇತ್ರದ ಶನಿಮಹಾತ್ಮ ದೇವಾಲಯದಲ್ಲಿ ಪ್ರತಿವರ್ಷದಂತೆ ಶ್ರಾವಣ ಮಾಸದ ಮೊದಲ ಶನಿವಾರ ಶಾಸಕ ಟಿ.ವೆಂಕಟರಮಣಯ್ಯ ಮತ್ತು ಕುಟುಂಬದವರಿಂದ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !