ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21ರಂದು ಅರುಣಾಚಲೇಶ್ವರ ದೇವಾಲಯದಲ್ಲಿ ಸಂಭ್ರಮದ ಶಿವರಾತ್ರಿ

ವಿವಿಧ ಸ್ಪರ್ದೆಗಳ ಆಯೋಜನೆ, ವಿಶೇಷ ಅಭಿಷೇಕ, ಅಲಂಕಾರ, ಭಕ್ತರಿಗೆ ದರ್ಶನಕ್ಕೆ ಅವಕಾಶ
Last Updated 11 ಫೆಬ್ರುವರಿ 2020, 13:19 IST
ಅಕ್ಷರ ಗಾತ್ರ

ಹಾರೋಹಳ್ಳಿ (ಕನಕಪುರ): ಇಲ್ಲಿನ ದೊಡ್ಡಗುಡಿಯ ಶ್ರೀ ಅರುಣಾಚಲೇಶ್ವರಸ್ವಾಮಿ ದೇವಾಲಯದಲ್ಲಿ ಮಹಾ ಶಿವರಾತ್ರಿ ಉತ್ಸವ ಫೆ. 21ರ ಬೆಳಿಗ್ಗೆ 4-45ರಿಂದ 22ರ ಬೆಳಿಗ್ಗೆ 6 ಗಂಟೆವರೆಗೆ ಧಾರ್ಮಿಕ ಹಾಗೂ ವಿವಿಧ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.

ಶುಕ್ರವಾರ ಬೆಳಗಿನ ಜಾವ 4-15ರಿಂದ ಶ್ರೀ ಅರುಣಾಚಲೇಶ್ವರಸ್ವಾಮಿಗೆ ಮಹಾರುದ್ರಾಭಿಷೇಕ ಮತ್ತು ಶ್ರೀ ಕ್ಷೇತ್ರದಲ್ಲಿ ನೆಲೆಸಿರುವ ಎಲ್ಲ‌ 56 ದೇವರುಗಳಿಗೂ ವಿಶೇಷ ಅಭಿಷೇಕ, ಅಲಂಕಾರ, ನಂತರ ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಪೂಜೆಯು ನಿರಂತರವಾಗಿ ಶನಿವಾರ ಬೆಳಿಗ್ಗೆ 6 ಗಂಟೆಯವರೆಗೂ ನಡೆಯಲಿದೆ.

ಶುಕ್ರವಾರ ಬೆಳಿಗ್ಗೆ 6-15ರಿಂದ ರಾತ್ರಿ 8 ಗಂಟೆವರೆಗೆ ಪವಿತ್ರ ನದಿಗಳಾದ ಗಂಗ, ಯಮುನಾ, ಕಾವೇರಿ, ಕಪಿಲ, ಕಬಿನಿ, ಹೇಮಾವತಿ, ತುಂಗಭದ್ರ ನದಿಗಳ ಪವಿತ್ರ ಜಲ ಮತ್ತು ಪುಣ್ಯಕ್ಷೇತ್ರಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳ, ತಲಕಾಡು ಹಾಗೂ ಶ್ರೀ ಮಲೆಮಹದೇಶ್ವರಸ್ವಾಮಿ ಬೆಟ್ಟದ ತೀರ್ಥಗಳಿಂದ ಬಿಲ್ವಪತ್ರೆ ಸಮೇತ ಭಕ್ತಾಧಿಗಳ ಕೈಯಿಂದಲೇ ಶ್ರೀ ಅರುಣಾಚಲೇಶ್ವರಸ್ವಾಮಿಗೆ ಜಲಾಭಿಷೇಕ ನಡೆಯುವುದು.

ಮಹಾಶಿವರಾತ್ರಿಯ ಪವಿತ್ರ ರಾತ್ರಿ ಶ್ರೀ ಶಿವನ ಆಲಯದಲ್ಲಿ ಉಳಿದು ಶಿವನಿಗೆ ಪ್ರತೀ ಜಾವಕ್ಕೊಮ್ಮೆ ನಡೆಸುವ ರುದ್ರಾಭಿಷೇಕದಲ್ಲಿ ಭಾಗಿಯಾಗಲು ರಾತ್ರಿ ಪೂರ್ತಿ ಜಾಗರಣೆ ಇರಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.

ಇಡೀ ರಾತ್ರಿ ಜಾಗರಣೆಯ ಉದ್ದೇಶವಾಗಿ ದೇವಾಲಯದ ಆವರಣದಲ್ಲಿ ವಿಶೇಷವಾಗಿ ಸಾಂಸ್ಕೃತಿಕ ಮತ್ತು ಗ್ರಾಮೀಣ ಕ್ರೀಡಾ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ. ತಾಲ್ಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿವನಕೃಪೆಗೆ ಪಾತ್ರರಾಗಬೇಕೆಂದು ದೇವಾಲಯದ ಆಡಳಿತ ಮಂಡಳಿಯವರು ಮನವಿ ಮಾಡಿದ್ದಾರೆ.

ಶಿವರಾತ್ರಿ ಅಂಗವಾಗಿ ನಡೆಯುವ ಸ್ಪರ್ಧೆಗಳು: ಮಹಿಳೆಯರು ಮತ್ತು ಪುರುಷರ ವಿಭಾಗದಲ್ಲಿ 16 ವರ್ಷ ಒಳಪಟ್ಟು ಮತ್ತು ಮೇಲ್ಪಟ್ಟವರಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಪುರುಷರ ಗುಂಪು ಸ್ಪರ್ಧೆ ಕಬಡ್ಡಿ, ಹಗ್ಗ ಜಗ್ಗಾಟ, ವೈಯಕ್ತಿಕ ಸ್ಪರ್ಧೆ ಸ್ಲೋ ಸೈಕಲ್‌ ರೇಸ್‌, ಬುಗುರಿ, ಮಡಕೆ ಒಡೆಯುವುದು, ಚೀಲ ಜಿಗತ, ಕಪ್ಪೆ ಜಿಗಿತ, ಭಾರ ಎತ್ತುವುದು.

ಮಹಿಳೆಯರ ಗುಂಪು ಸ್ಪರ್ಧೆ ಹಗ್ಗ ಜಗ್ಗಾಟ, ವೈಯಕ್ತಿಕ ಸ್ಪರ್ಧೆ ರಂಗೋಲಿ ಬಿಡಿಸುವುದು, ಮಡಕೆ ಒಡೆಯುವುದು, ಚೀಲ ಜಿಗಗಿತ, ಕಪ್ಪೆ ಜಿಗಿತ, ಭಾರ ಎತ್ತುವುದು, ಸೀರೆ ನಿಖರ ಬೆಲೆ ಹೇಳುವ ಸ್ಪರ್ಧೆ.

ಪುರುಷ ಮತ್ತು ಮಹಿಳೆಯರ ಸಮೂಹ ನೃತ್ಯ ಗುಂಪು ಸ್ಪರ್ಧೆ, ವೈಯಕ್ತಿಕ ನೃತ್ಯ, ಗಾಯನ, ವೇ‍ಷಭೂಷಣ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಸಂಬಂಧ ಮಾಹಿತಿಗಾಗಿ ಎಂ.ಮಲ್ಲಪ್ಪ 94495 25179, ಸಾವಿತ್ರಿರಾವ್‌ 96861 16419 ನಂಬರಿಗೆ ಕರೆ ಮಾಡುವಂತೆ ಆಯೋಜಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT