ಅಂತರ್ಜಲ ಉಳಿವಿಗೆ ಶ್ರಮಿಸಿ

7

ಅಂತರ್ಜಲ ಉಳಿವಿಗೆ ಶ್ರಮಿಸಿ

Published:
Updated:
Prajavani

ದೇವನಹಳ್ಳಿ: ಬರಗಾಲದಲ್ಲಿ ಅಂತರ್ಜಲ ಉಳಿವಿಗೆ ಕೆರೆಯಲ್ಲಿನ ಹೂಳು ಎತ್ತುವುದು ಉತ್ತಮ ಕಾರ್ಯ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ಕೊಯಿರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಜರಹಳ್ಳಿ ಗ್ರಾಮದ ಕೆರೆ ಕೋಡಿ ದುರಸ್ತಿ ಮತ್ತು ಕೆರೆಯಲ್ಲಿನ ಹೂಳು ಎತ್ತುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಕೆರೆ ದುರಸ್ತಿಗೆ ಸಮಾಜ ಸೇವಕರು ₹15ಲಕ್ಷ ವೆಚ್ಚ ಮಾಡಲು ಮುಂದೆ ಬಂದಿದ್ದಾರೆ. ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ₹5 ಲಕ್ಷ ಸಿಗಲಿದೆ. ಒಂದು ಕೆರೆ ತುಂಬಿದರೆ ನೂರಾರು ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗಲಿದೆ ಎಂದರು.

ಕುಡಿಯುವ ನೀರಿಗಾಗಿ ಕೆರೆಯಂಗಳದಲ್ಲಿ ಕೊಳವೆಬಾವಿ ಕೊರೆಯಿಸುವುದು ಅನಿವಾರ್ಯವಾಗಿದೆ. 1500ಅಡಿ ಕೊರೆಯಿಸಿದರೂ ನೀರು ಸಿಗುವ ಖಾತರಿ ಇಲ್ಲ. ವಿಜಯಪುರ ಪುರಸಭೆ ವ್ಯಾಪ್ತಿಯಲ್ಲಿ ಕೊರೆಯಿಸಿದ 14 ಕೊಳವೆ ಬಾವಿಗಳಲ್ಲಿ ಒಂದು ಹನಿ ನೀರು ಸಿಕ್ಕಿಲ್ಲ ಎಂದರು. 

ಮುಖಂಡ ಎಚ್.ಎಂ.ರವಿಕುಮಾರ್ ಮಾತನಾಡಿ, ಕಳೆದ ಒಂದೂವರೆ ತಿಂಗಳ ಹಿಂದೆ ಜಿಲ್ಲಾಧಿಕಾರಿ ಕರೀಗೌಡ ಅವರು ರಾಗಿ ಬೆಳೆ ಪರಿಶೀಲನೆಗೆ ಬಂದಾಗ ವಾಜರಹಳ್ಳಿ ಕೆರೆ ಸ್ಥಿತಿ ಬಗ್ಗೆ ಗಮನಕ್ಕೆ ತರಲಾಗಿತ್ತು. ಅಧಿಕಾರಿಗಳಿಗೆ ಕರೆ ಮಾಡಿ ನರೇಗಾದಲ್ಲಿ ಕಾಮಗಾರಿ ಎತ್ತಿಕೊಳ್ಳಲು ಕ್ರಿಯಾ ಯೋಜನೆ ರೂಪಿಸಲು ಸೂಚನೆ ನೀಡಿದ್ದರು ಎಂದರು.

ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ರಾಧಮ್ಮ ಮುನಿರಾಜು, ಸದಸ್ಯ ಕೆ.ಸಿ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಮಹೇಶ್, ಶೈಲ ಜಗದೀಶ್, ಕೊಯಿರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ವಿಶ್ವನಾಥಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಮೂರ್ತಿ, ಕಾರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜ್, ಜೆಡಿಎಸ್ ಹಿಂದುಳಿದ ವರ್ಗಗಳ ಜಿಲ್ಲಾ ಘಟಕದ ಅಧ್ಯಕ್ಷ ಬೀರಪ್ಪ, ಹಾಪ್ ಕಾಮ್ ನಿರ್ದೇಶಕ ಶ್ರೀನಿವಾಸ್, ಮುಖಂಡರಾದ ಚಿಕ್ಕನಾರಾಯಣಸ್ವಾಮಿ, ರಾಮಾಂಜಿನಪ್ಪ, ಎಂ.ಶ್ರೀನಿವಾಸ್, ಚಂದ್ರೇಗೌಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !