ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯ ಸಮಗ್ರ ತನಿಖೆಗೆ ಒತ್ತಾಯ 

ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸರ್ವ ಸದಸ್ಯರ ಸಭೆ
Last Updated 18 ಸೆಪ್ಟೆಂಬರ್ 2018, 14:44 IST
ಅಕ್ಷರ ಗಾತ್ರ

ದೇವನಹಳ್ಳಿ: ತಾಲ್ಲೂಕಿನಲ್ಲಿ ತನ್ನ ಕಾರ್ಯಚಟುವಟಿಕೆಯಲ್ಲಿ ಸಂಪೂರ್ಣ ವಿಫಲವಾಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಸರ್ವ ಸದಸ್ಯರು ಪಕ್ಷ ಭೇದ ಮರೆತು ಒತ್ತಾಯಿಸಿದರು .

ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಇಲಾಖಾವಾರು ಅಭಿವೃದ್ಧಿ ಕುರಿತು ನಡೆದ ಚರ್ಚೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಲಕ್ಷಣ್‌ಗೌಡ ವಿಷಯ ಪ್ರಸ್ತಾಪಿಸಿದರು.

‘ಈ ಹಿಂದಿನ ಸಾಮಾನ್ಯ ಸಭೆಯ ನಡಾವಳಿಯಲ್ಲಿ ಪ್ರಸ್ತಾಪಿತ ವಿಷಯಗಳು, ಅಂಗನವಾಡಿ ಕೇಂದ್ರಗಳ ಸಮಸ್ಯೆ, ಶಿಶು ಪಾಲನೆಯ ನಿರ್ವಹಣೆ, ಅಂಗನವಾಡಿ ಕೇಂದ್ರಗಳ ದುರಸ್ತಿ ವಿಷಯ ನಡಾವಳಿಯಿಂದ ಮಾಯ ಆಗಿವೆ. ಪಂಚಾಯಿತಿ ಸದಸ್ಯರ ಅವಕಶ್ಯಕತೆ ಇಲ್ಲ ಎಂದು ನಿಮಗೆ ಅನ್ನಿಸಿದ್ದರೆ ಅಧಿಕಾರಿಗಳೇ ಸಭೆ ನಡೆಸಿ ನಿರ್ಣಯ ಕೈಗೊಳ್ಳಿ. ಇಷ್ಟ ಇದ್ದರೆ ಕಚೇರಿಯಲ್ಲಿ ಕೆಲಸ ಮಾಡಿ. ಇಲ್ಲದಿದ್ದರೆ ಬೇರೆಡೆ ವರ್ಗಾವಣೆ ಮಾಡಿಸಿಕೊಂಡು ಹೋಗಿ’ ಎಂದು ತರಾಟೆಗೆ ತೆಗೆದುಕೊಂಡರು .
ಮಧ್ಯ

ಪ್ರವೇಶಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮುರುಡಯ್ಯ, ‘ನಾನು ಬಂದು ಹತ್ತಾರು ದಿನಗಳಾಗಿವೆ. ಹಿಂದಿನ ನಡಾವಳಿ ಬಗ್ಗೆ ಗೊತ್ತಿಲ್ಲ’ ಎಂದರು.

ಸಂಬಂಧಿಸಿದ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ನಡಾವಳಿ ತಿದ್ದುವ ಅಧಿಕಾರ ಮತ್ತು ಕಡತದಿಂದ ತೆಗೆಯುವ ಅಧಿಕಾರ ಅಧ್ಯಕ್ಷರಿಗೆ ಮಾತ್ರ ಇದೆ. ಇನ್ನು ಮುಂದೆ ಪ್ರತಿಯೊಂದು ಇಲಾಖೆ ಮಾಹಿತಿ ಪಡೆದು ಒಂದು ಕಿರು ಹೊತ್ತಿಗೆ ನಕಲು ಪ್ರತಿಯನ್ನು ನಾಲ್ಕೈದು ದಿನಗಳ ಮೊದಲು ನೀಡಿ ಸಭೆಗೆ ಅಹ್ವಾನಿಸಿ ಎಂದು ಸೂಚಿಸಿದರು.

ಮುಂದುವರೆದ ಚರ್ಚೆಯಲ್ಲಿ ಮಾತನಾಡಿದ ಸದಸ್ಯ ಕಾರಹಳ್ಳಿ ಶ್ರೀನಿವಾಸ್, ಆರೇಳು ತಿಂಗಳಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕೈಗೊಂಡಿರುವ ಪ್ರಗತಿ, ನೀಡುತ್ತಿರುವ ಪೌಷ್ಟಿಕಾಂಶ ಆಹಾರದ ಬಗ್ಗೆ ಮಾಹಿತಿ ನೀಡಿ ಎಂದರೂ ಅಧಿಕಾರಿಗಳು ಸಭೆ ಗೈರು ಹಾಜರಿ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಸದಸ್ಯರಾದ ಶೈಲಾ, ವೆಂಕಟೇಶ್, ಭೀಮರಾಜು ಮಾತನಾಡಿ, ಮಾತೃ ಪೂರ್ಣ ಯೋಜನೆ ಸಂಪೂರ್ಣ ವಿಫಲವಾಗಿದೆ ಏನೇನು ನೀಡುತ್ತೀರಾ ಎಂಬುದು ಯಾರಿಗೂ ಗೊತ್ತಿಲ್ಲ, ನಮಗೆ ಮಾಹಿತಿ ಇಲ್ಲ ಎಂದರೆ ಫಲಾನುಭವಿಗಳಿಗೆ ಇನ್ನೇಲ್ಲಿ. ಆಹಾರ ತಯಾರಿಕೆ, ಶಿಶುಪಾಲನೆಯ ನಿರ್ವಹಣೆ, ಸ್ವಚ್ಛತೆ ಬಗ್ಗೆ 7 ವರ್ಷದಲ್ಲಿ ಒಂದಾದರು ಅರಿವು ಶಿಬಿರ ನಡೆಸಿದ್ದಿರಾ ಎಂದರು. ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ್ದೀರಾ, ಮಕ್ಕಳ ಗ್ರಾಮ ಸಭೆ ನಡೆಸಿದ್ದೀರಾ ಎಂಬ ದೂರುಗಳ ಬಗ್ಗೆ ಇಲಾಖೆ ಅಧಿಕಾರಿ ಮೌನವಹಿಸಿದ್ದರು, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ನಂದಿನಿ ಹಾಗೂ ಸದಸ್ಯರು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಇದ್ದರು .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT