ಬುಧವಾರ, ಡಿಸೆಂಬರ್ 2, 2020
16 °C

ಟಿಎಪಿಸಿಎಂಎಸ್‌ ಚುನಾವಣ ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಭಾನುವಾರ ನಡೆದ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿತು.

‘ಎ’ ತರಗತಿಯಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳಾದ ಎಂ.ವೆಂಕಟೇಶ್‌-16, ಡಿ.ಸಿದ್ದರಾಮಯ್ಯ- 16, ಜಿ.ಮಾರೇಗೌಡ-14, ಎಂ.ಗೋವಿಂದರಾಜ್‌-12 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.

ಬೆಳಿಗ್ಗೆ 9ರಿಂದ ಆರಂಭವಾದ ಮತದಾನದಲ್ಲಿ ನೂರಾರು ಜನ ಸಾಲುಗಟ್ಟಿ ನಿಂತು ಮತ ಚಲಾಯಿಸಿದರು. ಹಿರಿಯರು ವೀಲ್‌ ಚೇರ್‌ಗಳಲ್ಲಿ ಬಂದು ಸಹ ಮತಚಲಾಯಿಸಿದ್ದು ವಿಶೇಷವಾಗಿತ್ತು.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದಿಂದ ಎಲ್ಲ 13 ಸ್ಥಾನಗಳಿಗೂ ಸಹ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಆದರೆ, ಬಿಜೆಪಿ –ಜೆಡಿಎಸ್‌ ಪಕ್ಷದ ಅಪ್ಪಯ್ಯಣ್ಣ ಅವರ ಬಣದೊಂದಿಗೆ ಸ್ಥಾನ ಹೊಂದಾಣಿಕೆ ಮಾಡಿಕೊಂಡು ’ಎ‘ ಮತ್ತು ‘ಬಿ‘ ತರಗತಿ ಸೇರಿ ಆರು ಸ್ಥಾನಗಳಿಗೆ ಮಾತ್ರ ನಾಮಪತ್ರ ಸಲ್ಲಿಸಿದ್ದರು.

ಶಾಸಕರಿಂದ ಮತ ಚಲಾವಣೆ: ಕೋವಿಡ್‌-19 ದೃಢಪಟ್ಟಿದ್ದರಿಂದ 13 ದಿನಗಳಿಂದಲೂ ಮನೆಯಲ್ಲಿಯೇ ಇದ್ದ ಶಾಸಕ ಟಿ.ವೆಂಕಟರಮಣಯ್ಯ ಅವರು ಭಾನುವಾರ ನಗರಕ್ಕೆ ಆಗಮಿಸಿ ಟಿಎಪಿಎಂಸಿಎಸ್‌ ಚುನಾವಣೆಯಲ್ಲಿ ಮತ ಚಲಾವಣೆ ಮಾಡಿದರು.

‘ಬಿ’ತರಗತಿಯಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಎನ್.ರಂಗಪ್ಪ-1,382, ಎಸ್.ದಯಾನಂದ್-904. ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಕೆ.ಸಿ.ಲಕ್ಷ್ಮೀನಾರಾಯಣ-1,000,ವಿ.ಅಂಜನೇಗೌಡ-1,661, ಗೋವಿಂದರಾಜ್-872, ಚಂದ್ರಕಲಾ-1,219, ಲಕ್ಷ್ಮೀ-1,230.ಬಿಜೆಪಿ ಬೆಂಬಲಿತ ಅಭ್ಯರ್ಥಿ ಟಿ.ವಿ.ಲಕ್ಷ್ಮೀನಾರಾಯಣ-1,377. ಜೆಡಿಎಸ್ (ಅಪ್ಪಯ್ಯ ಬಣ) ಎಂ.ಆನಂದ್-1,035 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು