‘ವಿದ್ಯಾರ್ಥಿ ಜೀವನದಲ್ಲಿ ಗುರಿ ಮುಖ್ಯ’

ಶನಿವಾರ, ಮೇ 25, 2019
33 °C

‘ವಿದ್ಯಾರ್ಥಿ ಜೀವನದಲ್ಲಿ ಗುರಿ ಮುಖ್ಯ’

Published:
Updated:
Prajavani

ವಿಜಯಪುರ: ವಿದ್ಯಾರ್ಥಿ ಜೀವನದಲ್ಲಿ ಗುರಿ ಬಹಳ ಮುಖ್ಯ ಎಂದು ಪುರಸಭಾ ಸದಸ್ಯ ಎಸ್.ಭಾಸ್ಕರ್ ಹೇಳಿದರು.

ಬಸವೇಶ್ವರ ಬಡಾವಣೆಯ ವಿಜಯ ವಿನಾಯಕಸ್ವಾಮಿ ದೇವಾಲಯದ ಆವರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮದೃಷ್ಟಿ ಕ್ಷಮತಾವಿಕಾಸ ಮತ್ತು ಅನುಸಂಧಾನ ಮಂಡಲದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಾಂಧವ್ಯ ಬೆಸುಗೆ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪರಸ್ಪರರನ್ನು ಗೌರವಿಸಬೇಕು. ವಿದ್ಯಾರ್ಥಿಗಳು ತಂದೆ–ತಾಯಿಗೆ, ಗುರು–ಹಿರಿಯರಿಗೆ, ಸುತ್ತಮುತ್ತಲಿನ ಎಲ್ಲರಿಗೆ ಗೌರವ ನೀಡಬೇಕು. ಇದರಿಂದ ಎಲ್ಲರಲ್ಲಿ ಪ್ರೀತಿ, ವಿಶ್ವಾಸ ಗಳಿಸಲು ಸಾಧ್ಯವಾಗುತ್ತದೆ. ಚಿಕ್ಕಂದಿನಿಂದಲೇ ಇದನ್ನು ರೂಢಿಸಿಕೊಂಳ್ಳಬೇಕು. ಇದರಿಂದ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಬಹುದು’ ಎಂದರು.

ವಿಜಯವಿನಾಯಕಸ್ವಾಮಿ ದೇವಾಲಯದ ಧರ್ಮದರ್ಶಿ ಎಸ್.ಪಿ.ಕೃಷ್ಣಾನಂದ್ ಮಾತನಾಡಿ, ‘ಸೇವಾ ಮನೋಭಾವ, ಅದರ ಮಹತ್ವ ಮತ್ತು ಸ್ವಾದ, ಸೇವೆಯ ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಡುವ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾದ ಮಹತ್ವದ ಘಟ್ಟ ವಿದ್ಯಾರ್ಥಿ ಜೀವನ. ಹಾಗಾಗಿ ಬಡವರ, ನೊಂದವರ ಮತ್ತು ರೋಗಿಗಳ ಸೇವೆಯನ್ನು ಮಾಡುವುದರ ಮಹತ್ವ ತಿಳಿದರೆ, ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಲು ಅನುಕೂಲಕರವಾದ ವಾತಾವರಣ ನಿರ್ಮಾಣವಾಗುತ್ತದೆ’ ಎಂದು ಹೇಳಿದರು.

ಗಾಯಕ ಚಿಂತಾಮಣಿಯ ಚಂದ್ರಶೇಖರ್‌ ಸೋರೆಪಲ್ಲಿ ಅವರಿಂದ ಗೀತಗಾಯನ ನಡೆಯಿತು. ಶಿಬಿರದಲ್ಲಿ ನಡೆದ ಚಟುವಟಿಕೆಗಳಲ್ಲಿ ಪಾಲ್ಗೊಂಡ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮದೃಷ್ಟಿ ಕ್ಷಮತಾ ವಿಕಾಸ ಮತ್ತು ಅನುಸಂಧಾನ ಮಂಡಲದ ಜಿಲ್ಲಾ ಕಾರ್ಯದರ್ಶಿ ಬಿ.ಎಂ.ಜಗದೀಶ್, ಸಾಹಿತಿ ಎಚ್.ಎಸ್. ರುದ್ರೇಶಮೂರ್ತಿ, ತರಬೇತುದಾರ ರಾಜು, ವಂದನಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !