ತಾವರೆಕೆರೆ (ಹೊಸಕೋಟೆ): ಯಾವುದೇ ಪಕ್ಷ ಅಧಿಕಾರದಲ್ಲಿದ್ದಾಗ ಅವರು ಮಾಡಿದ ಅಭಿವೃದ್ಧಿ ಕಾಮಗಾರಿಗಳು ಮಾತ್ರವೇ ಶಾಶ್ವತ ಹೊರತು ಟೀಕೆಗಳು ಶಾಶ್ವತ ಅಲ್ಲ ಎಂದು ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಉಪಾಧ್ಯಕ್ಷರಾದ ಟಿ.ಎಸ್ ರಾಜಶೇಖರ್ ಹೇಳಿದರು.

ತಾಲ್ಲೂಕಿನ ನಂದಗುಡಿ ಹೋಬಳಿಯ ತಾವರೆಕೆರೆ ಗ್ರಾಮ ಪಂಚಾಯಿತಿಯಲ್ಲಿ 2021 ರಿಂದ 2026ನೇ ಸಾಲಿನಲ್ಲಿ ಚುನಾಯಿತ ಜನಪ್ರತಿನಿಧಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

5 ವರ್ಷಗಳಲ್ಲಿ ಆಡಳಿತ ನಡೆಸಿದ ತಾವರೆಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ನಡುವಿನ ಹೊಂದಾಣಿಕೆಯ ಕಾರ್ಯವೈಖರಿ ಗ್ರಾಮಗಳ ಅಭಿವೃದ್ಧಿಗೆ ಕಾರಣವಾಗಿದೆ. ಆದ್ದರಿಂದಲೇ ತಾಲ್ಲೂಕಿನಲ್ಲಿ ತಾವರೆಕೆರೆ ಪಂಚಾಯಿತಿಗೆ ಗಾಂಧಿ ಗ್ರಾಮ ಪ್ರಶಸ್ತಿಗೆ ಭಾಜನವಾಗುವಂತೆ ಮಾಡಿದೆ ಎಂದರು.

ಪಿಡಿಒ ಮುನಿಗಂಗಯ್ಯ ಮಾತನಾಡಿ, ಸಹಾನುಭೂತಿ ಮತ್ತು ಸಹಕಾರ ಮನೋಭಾವ ಹೊಂದಿದ ಸದಸ್ಯರು ಆಯ್ಕೆಯಾಗಿದ್ದ ಕಾರಣಕ್ಕೆ 5 ವರ್ಷಗಳ ಒಮ್ಮತದ ಅಭಿವೃದ್ಧಿ ಕಾರ್ಯ ನಡೆಸಲು ಸಾಧ್ಯವಾಯಿತು ಎಂದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿವಿ ರಾಜಶೇಖರ್ ಗೌಡ, ಪ್ರಿಯಾಂಕ ರಮೇಶ್, ರವಿಕುಮಾರ್, ಗಂಗಾಪುರ ಮಂಜುನಾಥ್, ಬಸವ ಪ್ರಕಾಶ್, ಪವಿತ್ರ ಮಂಜುನಾಥ್, ರಮೇಶ್, ದೇವರಾಜ್, ಅಶ್ವಿನಿ ದೇವರಾಜ್, ಸುಧಾಕರ್, ಮಂಜುನಾಥ್, ಬಚ್ಚೇಗೌಡ, ಭರತ್, ಮಂಜುಳಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.