ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ವರ ಸದಸ್ಯತ್ವ ವಜಾಗೆ ಹೈಕೋರ್ಟ್ ತಡೆ

ಬೊಮ್ಮಸಂದ್ರ ಪುರಸಭೆ
Last Updated 9 ಸೆಪ್ಟೆಂಬರ್ 2022, 2:57 IST
ಅಕ್ಷರ ಗಾತ್ರ

ಆನೇಕಲ್:ಬೊಮ್ಮಸಂದ್ರ ಪುರ ಸಭೆಯ ನಾಲ್ವರು ಸದಸ್ಯರನ್ನು ವಜಾ ಗೊಳಿಸಿದ್ದ ಜಿಲ್ಲಾಧಿಕಾರಿ ಆದೇಶಕ್ಕೆ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ದೊರೆ ತಿದೆ ಎಂದು ಬೊಮ್ಮಸಂದ್ರ ಪುರಸಭಾ ಸದಸ್ಯ ಹಾಗೂ ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷ ಎ. ಪ್ರಸಾದ್‌ ತಿಳಿಸಿದರು.

ಬೊಮ್ಮಸಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಪುರಸಭಾ ಅಧ್ಯಕ್ಷ ಗೋಪಾಲ್‌, ಉಪಾಧ್ಯಕ್ಷ ವಸಂತ್‌, ಸದಸ್ಯರಾದ ಎ. ಪ್ರಸಾದ್, ಎ. ಚಲಪತಿ ವಿಪ್‌ ಉಲ್ಲಂಘನೆ ಮಾಡಿದ್ದಾರೆ ಎಂದು ಬಿಜೆಪಿ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಸದಸ್ಯತ್ವವನ್ನು ವಜಾಗೊಳಿಸಿ ಆದೇಶ ನೀಡಿದ್ದರು. ಈ ಆದೇಶಕ್ಕೆ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ದೊರೆತಿದೆ ಎಂದು
ತಿಳಿಸಿದರು.

ಪುರಸಭಾ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯಿಂದ ಸದಸ್ಯರಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಗೋಪಾಲ್‌ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ವಸಂತ್‌ಕುಮಾರ್‌ಗೆ ಮತ ನೀಡಲಾಗಿದೆ. ಹಾಗಾಗಿ, ಬಿಜೆಪಿ ವಿರೋಧಿ ಚಟುವಟಿಕೆ ಮಾಡಿಲ್ಲ. ಚುನಾವಣೆಯಲ್ಲಿ ಬಿಜೆಪಿ ಚಿಹ್ನೆಯಲ್ಲಿ ಜಯಗಳಿಸಿದ್ದ ಗೋಪಾಲ್‌ ಮತ್ತು ವಸಂತ್‌ಕುಮಾರ್‌ ಗೆಲುವಿಗೆ ಬೆಂಬಲ ನೀಡಿದ್ದೇವೆ ಎಂದರು.

ಜೆಡಿಎಸ್‌ ಮತ್ತು ಸಿಪಿಎಂನಿಂದ ಚುನಾಯಿತರಾಗಿದ್ದ ಸದಸ್ಯರನ್ನು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಬೆಂಬಲಿಸಲು ಬಿಜೆಪಿಯ ಕೆಲವು ಮುಖಂಡರು ಪ್ರಯತ್ನ ನಡೆಸಿದ್ದರು. ಈ ಪ್ರಯತ್ನವನ್ನು ವಿಫಲಗೊಳಿಸಿ ಮೂಲ ಬಿಜೆಪಿ ಸದಸ್ಯರನ್ನು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು ಬೆಂಬಲ ನೀಡಿದ್ದೇವೆ. ಹಾಗಾಗಿ ವಿಪ್‌ ಉಲ್ಲಂಘನೆ ಸತ್ಯಕ್ಕೆ ದೂರವಾದುದು ಎಂದು ಸಮರ್ಥಿಸಿಕೊಂಡರು.

ಸದಸ್ಯ ಚಲಪತಿ ಮಾತನಾಡಿ, ಆನೇಕಲ್‌ನಲ್ಲಿ ಬಿಜೆಪಿ ಹಲವು ಗುಂಪುಗಳಾಗಿ ಒಡೆದು ಹೋಗಿವೆ. ಇದರಿಂದ ಪಕ್ಷದ ಸಂಘಟನೆಗೆ ತೊಡಕಾಗಿದೆ. ಈ ಬಗ್ಗೆ ಜಿಲ್ಲಾ ಅಧ್ಯಕ್ಷ ಎನ್‌.ಆರ್. ರಮೇಶ್‌ ಅವರಿಗೆ ಮಾಹಿತಿ ನೀಡಲಾಗಿದೆ ಎಂದರು.

ಬೊಮ್ಮಸಂದ್ರ ಪುರಸಭಾ ಅಧ್ಯಕ್ಷ ಗೋಪಾಲ್, ಉಪಾಧ್ಯಕ್ಷ ವಸಂತ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT